ಈಕ್ವೆಡಾರ್‌ನ ಆರೋಗ್ಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿರುವ ಕೋವಿಡ್-19 ಸೋಂಕಿತರ ಜತೆಗೆ ಇತರೆ ರೋಗಿಗಳು ಮತ್ತು ಅವರ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
Advertisement
ಗುವಾಕ್ವಿಲ್ ನಗರದ ನಿವಾಸಿ ಡಾರ್ವಿನ್ ಕ್ಯಾಸ್ಟಿಲ್ಲೊ ಅವರ ತಂದೆ ಇಳಿವಯಸ್ಸಿನ ಕಾಯಿಲೆಯಿಂದ ನಿಧನರಾಗಿದ್ದರು. ಕೋವಿಡ್-19 ಅವಾಂತರದಿಂದ ನಿಧನ ವಾರ್ತೆ ತಿಳಿದು 2 ದಿನ ತಡವಾಗಿ ತೆರಳಿದ್ದರೂ ಅಪ್ಪನ ಶವ ಸಿಗದೇ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.
ಬಳಿಕ ತನಗೆ ದೊರೆತ ಪಾರ್ಥಿವ ಶರೀರ ತನ್ನ ತಂದೆಯದಲ್ಲ ಎಂಬ ಮಾಹಿತಿಯನ್ನು ವೈದ್ಯಕೀಯ ಸಿಬಂದಿಗೆ ಕ್ಯಾಸ್ಟಿಲ್ಲೊ ತಿಳಿಸಿದರು. ಆಗ ಸಿಬಂದಿಯಿಂದ ಸಿಕ್ಕ ಉತ್ತರವೆಂದರೆ, ಹಾಗಾದರೆ ನೀವೆ ನಿಮ್ಮ ತಂದೆ ದೇಹವನ್ನು ಪತ್ತೆ ಮಾಡಿ ತೆಗೆದುಕೊಂಡು ಹೋಗಿ ಎಂಬುದು. ಆದರೆ ಅದೇ ಸ್ಥಳದಲ್ಲಿ ಸುಮಾರು 170 ಸೋಂಕಿತರ ಶವಗಳನ್ನು ಇಡಲಾಗಿದ್ದು, ಅದರ ನಡುವೆ ತಂದೆಯ ಶವವನ್ನು ಪತ್ತೆಹಚ್ಚುವುದು ಹೇಗೆ ಎಂಬುದೇ ತಿಳಿಯದೇ ಕ್ಯಾಸ್ಟಿಲ್ಲೊ ಕಂಗಾಲಾಗಿದ್ದರು. 2 ವಾರಗಳಿಂದ ಪತ್ತೆಯಲ್ಲಿ ನಿರತ
ಕಳೆದ 2 ವಾರಗಳಿಂದ ಕ್ಯಾಸ್ಟಿಲ್ಲೊ ತಂದೆಯ ಪಾರ್ಥಿವ ಶರೀರದ ಪತ್ತೆಯ ಕಾರ್ಯದಲ್ಲಿಯೇ ನಿರತರಗಿದ್ದು, ಸದ್ಯ ತಂದೆಯ ಸಂಸ್ಕಾರ ಕಾರ್ಯಕ್ಕೆಂದು ಖರೀದಿಸಿದ ಶವ ಪೆಟ್ಟಿಗೆಯನ್ನು ಹಿಂದಿರುಗಿಸಿ ಅಂತ್ಯಸಂಸ್ಕಾರ ವಿಧಿ ವಿಧಾನಗಳನ್ನು ಮುಂದೂಡಿದ್ದಾರೆ.
Related Articles
ಈ ಘಟನೆಯಲ್ಲಿ ಯಾರನ್ನೂ ನಾನು ದೂರುವುದಿಲ್ಲ. ಏಕೆಂದರೆ ಜಾಗತಿಕ ಸಮಸ್ಯೆಯಾಗಿ ಕೋವಿಡ್-19 ವಿಶ್ವವನ್ನು ಪೀಡಿಸುತ್ತಿದ್ದು, ಈಕ್ವೆಡಾರ್‌ನ ಅತಿದೊಡ್ಡ ನಗರವಾದ ಗುವಾಕ್ವಿಲ್ ಪ್ರಾಂತ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಪ್ರತಿದಿನ ಸಾವಿರಾರು ಮಂದಿ ಬಲಿಯಾಗುತ್ತಿದ್ದು, ನನ್ನ ನಗರವೂ ಇದಕ್ಕೆ ಹೊರತಾಗಿಲ್ಲ. ಹಾಗಾಗಿ “ನಾನು ಆಸ್ಪತ್ರೆಯ ಅಥವಾ ಶವಾಗಾರ ಸಿಬಂದಿಯನ್ನು ದೂಷಿಸುವುದಿಲ್ಲ. ನನ್ನ ಆಸೆ ಇಷ್ಟೇ, “ನನ್ನ ತಂದೆಗೆ ನಮ್ಮ ಧರ್ಮದ ಅಂತ್ಯಸಂಸ್ಕಾರ ವಿಧಿ ವಿಧಾನದಂತೆ ವಿದಾಯ ಹೇಳಬೇಕು. ಅವರಿಗೆ ಹೂ ಗುತ್ಛವನ್ನು ಸಮರ್ಪಿಸುವ ಮೂಲಕ ನನ್ನ ಅಂತಿಮ ನಮನ ಸಲ್ಲಿಸಬೇಕು ಎಂದು ಕ್ಯಾಸ್ಟಿಲ್ಲೊ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement