Advertisement

RBI: ಅರ್ಥವ್ಯವಸ್ಥೆ ದರ ಬೆಳವಣಿಗೆ ಯಥಾಸ್ಥಿತಿ

02:38 PM Sep 26, 2023 | |

ನವದೆಹಲಿ: ಜಗತ್ತಿನ ಪ್ರಮುಖ ರೇಟಿಂಗ್ಸ್‌ ಸಂಸ್ಥೆ ಸ್ಟಾಂಡರ್ಡ್‌ ಆ್ಯಂಡ್‌ ಪೂರ್‌ (ಎಸ್‌ ಆ್ಯಂಡ್‌ಪಿ) ಸಂಸ್ಥೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಶೇ.6ರ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂಬ ಮುನ್ಸೂಚನೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಜಗತ್ತಿನ ಇತರ ಭಾಗಗಳಲ್ಲಿನ ಅರ್ಥ ವ್ಯವಸ್ಥೆಯಲ್ಲಿ ನಿಧಾನಗತಿಯಲ್ಲಿ ಉಂಟಾಗುತ್ತಿರುವ ಬೆಳವಣಿಗೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸಂಸ್ಥೆ ಹೇಳಿದೆ.

Advertisement

ಏರಿಳಿತ ಕಂಡಿರುವ ಮುಂಗಾರು, ಬಡ್ಡಿ ದರ ಏರಿಕೆ ಮೇಲೆ ತಡೆಯೊಡ್ಡಿರುವುದೂ ಮುನ್ಸೂಚನೆ ಯಥಾಸ್ಥಿತಿಯಲ್ಲಿಡಲು ಕಾರಣ ಎಂದು ಸ್ಪಷ್ಟಪಡಿಸಿದೆ. ತರಕಾರಿಗಳ ಬೆಲೆ ಏರಿಕೆ ಕೇವಲ ಅಲ್ಪಾವಧಿಗೆ ಎಂದು ಹೇಳಿದರೂ, ಚಿಲ್ಲರೆ ಮಾರಾಟ ಕ್ಷೇತ್ರದ ಹಣದುಬ್ಬರ ಶೇ.5ರಿಂದ ಶೇ.5.5ಕ್ಕೆ ಏರಿಕೆಯಾಗಲಿದೆ. ಒಟ್ಟಾರೆಯಾಗಿ 2022ನೇ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಅರ್ಥ ವ್ಯವಸ್ಥೆ ಬೆಳವಣಿಗೆ ದರ ಕಡಿಮೆಯೇ ಆಗಿದೆ ಎಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next