Advertisement
ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿಯ ಪುತ್ರ ರಾದ ವಿಶ್ವನಾಥ ಗಾಣಿಗ ಅವರು ಮುಂಬರುವ ಸೆ. 15 ರಿಂದ 21 ರವರೆಗೆ ಕೆನಡಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಅಂತರಾಷ್ಟಿÅàಯ ಟೂರ್ನಿಗೆ ತೆರಳಲು ಸಾಕಷ್ಟು ಸಿದ್ಧತೆ ಮಾಡ
ಬೇಕಾಗಿದ್ದು, ಕೆನಡಾಕ್ಕೆ ತೆರಳಲು ಪವರ್ ಲಿಫ್ಟಿಂಗ್ ಫೆಡರೇಶನ್‌ಗೆ
ಪ್ರಯಾಣ, ವಸತಿಗಾಗಿ 2.4 ಲಕ್ಷ ರೂ. ಪಾವತಿಸಬೇಕಾಗಿದ್ದು, ಇನ್ನು ಇದಷ್ಟೇ ಅಲ್ಲದೆ ಪ್ರಯಾಣ, ವಸತಿ, ಆಹಾರ, ತರಬೇತಿಗೆ ಸೇರಿ ಸುಮಾರು 3 ಲಕ್ಷ ರೂ. ಗೂ ಹೆಚ್ಚು ಹಣ ಬೇಕಾಗಿದೆ. ಆದರೆ ರಾಜ್ಯ ಸರಕಾರದಿಂದ ಇವರಿಗೆ ಯಾವುದೇ ನೆರವು ಸಿಗುವ ಹಾಗೇ ಕಾಣುತ್ತಿಲ್ಲ. ಹಿಂದಿನ ಸಾಲವೇ ತೀರಿಸಿಲ್ಲ
2017ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ ತರಬೇತಿಗಾಗಿ ಖಾಸಗಿ ಬ್ಯಾಂಕ್‌ವೊಂದರಿಂದ ಸುಮಾರು 3 ಲಕ್ಷ ರೂ. ಸಾಲ ಮಾಡಿದ್ದು, ಸರಕಾರ ದಿಂದ ಯಾವುದೇ ನಗದು ಪುರಸ್ಕಾರ ಸಿಗದ ಕಾರಣ ಅದನ್ನು ಕೂಡ ಇನ್ನೂ ತೀರಿಸಲಾಗ ಲಿಲ್ಲ ಎನ್ನುವುದು ವಿಶ್ವನಾಥ್ ಅವರ ಅಳಲು.
Related Articles
ವಿಶ್ವನಾಥ ಗಾಣಿಗ ಅವರು 2017 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 1 ಚಿನ್ನ ಹಾಗೂ 1 ಬೆಳ್ಳಿ ಪದಕ ಗೆದ್ದಿದ್ದರು. ಏಶ್ಯನ್ ಗೇಮ್ಸ್‌ನಲ್ಲಿ 1 ಚಿನ್ನದ ಪದಕ ಗೆದ್ದಿದ್ದರು. ರಾಜ್ಯ ಸರಕಾರವು ಅಂತರಾಷ್ಟಿÅàಯ ಟೂರ್ನಿಯಲ್ಲಿ ಚಿನ್ನ ಗೆದ್ದವರಿಗೆ 25 ಲಕ್ಷ ರೂ. ಹಾಗೂ ಬೆಳ್ಳಿ ಗೆದ್ದ ಕ್ರೀಡಾಪಟುವಿಗೆ 15 ಲಕ್ಷ ರೂ. ನಗದು ಪುರಸ್ಕಾರ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ ಇವರಿಗೆ ಸುಮಾರು 65 ರಿಂದ 70 ಲಕ್ಷ ರೂ. ವರೆಗೆ ರಾಜ್ಯ ಸರಕಾರದಿಂದ ನಗದು ಪುರಸ್ಕಾರ ಸಿಗಬೇಕಾಗಿದ್ದು, ಈವರೆಗೆ ಬಿಡಿಗಾಸು ಸಿಕ್ಕಿಲ್ಲ.
Advertisement
4 ಚಿನ್ನದ ಪದಕಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಿಸ್ಟಮ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ವಿಶ್ವನಾಥ್ ಅವರು ಈವರೆಗೆ 4 ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್‌ಗ್ಳಲ್ಲಿ ಚಿನ್ನದ ಪದಕ ಪಡೆದಿದ್ದು, 18 ರಾಷ್ಟಿÅàಯ ಚಿನ್ನದ ಪದಕ ವಿಜೇತರಾಗಿದ್ದಾರೆ. 3 ವೈಯಕ್ತಿಕ ರಾಷ್ಟಿÅàಯ ದಾಖಲೆಯೂ ಇವರ ಹೆಸರಲ್ಲಿದೆ. 3 ವರ್ಷವಾದರೂ ನಗದು ಪುರಸ್ಕಾರ ಸಿಕ್ಕಿಲ್ಲ
ರಾಜ್ಯದಿಂದ ಕ್ರೀಡಾಪಟುಗಳಿಗೆ ಯಾವುದೇ ಮನ್ನಣೆ ದೊರೆತಿಲ್ಲ. ಸರಕಾರವೇ ಹಣಕಾಸಿನ ನೆರವು ನೀಡಿದರೆ ಪ್ರಯೋಜನವಾದೀತು. ಗೆದ್ದ ಅನಂತರವಾದರೂ ನಗದು ಪುರಸ್ಕಾರ ಕೊಡುತ್ತಾರೆ ಎಂದು ಸಾಲ ಮಾಡಿದರೆ, ಗೆದ್ದು 3 ವರ್ಷವಾದರೂ ಧನ ಸಹಾಯ ಮಾತ್ರ ಸಿಕ್ಕಿಲ್ಲ.
-ವಿಶ್ವನಾಥ ಭಾಸ್ಕರ ಗಾಣಿಗ, ದೇವಲ್ಕುಂದ, ರಾಷ್ಟ್ರೀಯ ಪವರ್ ಲಿಫ್ಟರ್