Advertisement

ಎಕಾನಮಿ ಕ್ಲಾಸ್‌ಗೂ ಬರುತ್ತೆ ಹವಾನಿಯಂತ್ರಿತ ಪ್ರಯಾಣ ವ್ಯವಸ್ಥೆ

03:45 AM Jul 03, 2017 | Harsha Rao |

ಹೊಸದಿಲ್ಲಿ: ಸಂಪೂರ್ಣ ಹವಾನಿಯಂತ್ರಿತ ರಾಜಧಾನಿ ಎಕ್ಸ್‌ ಪ್ರಸ್‌, ಶತಾಬ್ಧಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯ ನೀಡುತ್ತಾರೆಂದು ಹೆಚ್ಚಿನವರಿಗೆ ಕೇಳಿ ಗೊತ್ತಿರುತ್ತದೆ. ಆದರೆ ಅದು ವೆಚ್ಚದಾಯಕ. ಹಾಗಿದ್ದರೆ ಜನ ಸಾಮಾನ್ಯರಿಗೆ ಎಟಕುವ ದರದಲ್ಲಿಯೇ ಹವಾನಿಯಂತ್ರಿತ ಪ್ರಯಾಣದ ವ್ಯವಸ್ಥೆ ಬಂದರೆ ಹೇಗಿರುತ್ತದೆ? ಇಂತಹುದೊಂದು ವ್ಯವಸ್ಥೆ ತರಲು ರೈಲ್ವೆ ಇಲಾಖೆ ಮುಂದಾಗಿದೆ. ಈ ಎಸಿ ದರ್ಜೆಯಲ್ಲಿ ಟಿಕೆಟ್‌ ದರ 3 ಟಯರ್‌ ಹವಾನಿಯಂತ್ರಿತ ಬೋಗಿಗಿಂತ ಕಡಿಮೆಯೂ ಇರುತ್ತದೆ.

Advertisement

ಪ್ರಸ್ತಾವಿತ ವ್ಯವಸ್ಥೆಯಲ್ಲಿ ಎಕಾನಮಿ ದರದ ಎ.ಸಿ. ಬೋಗಿಯಲ್ಲದೆ, ಎಸಿ 1,2 ಮತ್ತು 3 ಟಯರ್‌ ಎಂಬ ಮೂರು ವಿಭಾಗಗಳೂ ಇರಲಿವೆ. ಎಕಾನಮಿ ದರ್ಜೆಯ ಎ.ಸಿ.ಬೋಗಿಗೆ ಹೊದಿಕೆ ತೆಗೆದುಕೊಂಡು ಹೋಗಬೇಕಾಗಿಲ್ಲ. ಇಲ್ಲಿ ತಾಪಮಾನವನ್ನು 24-24 ಡಿಗ್ರಿ ಸೆಲಿÏಯಸ್‌ಗೆ ನಿಗದಿ ಮಾಡಲಾಗಿರುತ್ತದೆ. 

ಸದ್ಯದ ಬೋಗಿ ವ್ಯವಸ್ಥೆ: ಮೈಲ್‌ ಮತ್ತು ಎಕ್ಸ್‌ ಪ್ರಸ್‌ ಟ್ರೈನ್‌ಗಳಲ್ಲಿ ಸ್ಲಿàಪರ್‌, ಥರ್ಡ್‌ ಎ.ಸಿ., ಸೆಕೆಂಡ್‌ ಎ.ಸಿ. ಮತ್ತು ಫ‌ರ್ಸ್ಡ್ ಎ.ಸಿ. ದರ್ಜೆಯ ಬೋಗಿಗಳಿವೆ. ರಾಜಧಾನಿ, ಶತಾಬ್ಧಿ, ಹಮ್‌ಸಫ‌ರ್‌ ಮತ್ತು ತೇಜಸ್‌ ರೈಲುಗಳಲ್ಲಿ ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಇದೆ.

ಎಲ್ಲೆಲ್ಲಿ ಸಂಚಾರ?: ಆರಂಭಿಕ  ಹಂತದಲ್ಲಿ ಎಕಾನಮಿ ದರದ ಎಸಿ ಬೋಗಿಗಳುಳ್ಳ ರೈಲಿನ ಸಂಚಾರವನ್ನು ಆಯ್ದ ರೂಟ್‌ಗಳಲ್ಲಿ ಮಾತ್ರ ಓಡಿಸಲು ಚಿಂತಿಸಲಾಗುತ್ತಿದೆ. ಅದಕ್ಕಾಗಿ ರೈಲು ನಿಲ್ದಾಣಗಳು ಮತ್ತು ರೈಲುಗಳಲ್ಲಿ  ಹಾಲಿ ಇರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. 

ಬರಲಿದೆ ಸ್ಮಾರ್ಟ್‌ ಕೋಚ್‌
ಹೈಸ್ಪೀಡ್‌ ತೇಜಸ್‌ ಎಕ್ಸ್‌ಪ್ರೆಸ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ  ಸ್ಮಾರ್ಟ್‌ ಕೋಚ್‌ಗಳನ್ನು ನಿರ್ಮಿಸಲು ಮುಂದಾಗಿದೆ. ಕಪುರ್ತಲಾದಲ್ಲಿರುವ ರೈಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ಅದರ ನಿರ್ಮಾಣ ನಡೆಯಲಿದೆ. ಸ್ಮಾರ್ಟ್‌ ಕೋಚ್‌ನಲ್ಲಿ ಸ್ವಯಂಚಾಲಿತ ಬಾಗಿಲುಗಳು, ವಿಶೇಷ ಮಾದರಿಯ ಬಿಸಿಲು ನಿಯಂತ್ರಕ, ತುರ್ತು ಪರಿಸ್ಥಿತಿಯಲ್ಲಿ ಬಟನ್‌ ಒತ್ತುವುದರ ಮೂಲಕ ಸಿಬ್ಬಂದಿ ಸಂಪರ್ಕಿಸಲು ಅವಕಾಶ, ಹೊಸ ಮಾದರಿಯ ವೆನಿಟಿಯನ್‌ ಬ್ಲೆಂಡ್ಸ್‌ ಇರಲಿದೆ.

Advertisement

ರೈಲು ಸಿಬ್ಬಂದಿಗೆ ಹೊಳೆಯುವ ಜಾಕೆಟ್‌, ಟಿ-ಶರ್ಟ್‌
ಇದೇ ಅಕ್ಟೋಬರ್‌ ಅಂದರೆ ದಸರೆ ವೇಳೆಗೆ ರೈಲ್ವೆ  ಸಿಬ್ಬಂದಿಗೆ ಹೊಸ ಯೂನಿಫಾರಂ ಬರಲಿದೆ. ಹೊಳೆಯುವ (ಪ್ರತಿದೀಪಕ) ಜಾಕೆಟ್‌ಗಳು, ಕಪ್ಪು ಮತ್ತು ಹಳದಿ ಬಣ್ಣದ ಟಿ-ಶರ್ಟ್‌ ಗಳನ್ನು ಸಿಬ್ಬಂದಿಗೆ ನೀಡಲಾಗುತ್ತದೆ. ಸ್ಟೇಷನ್‌ ಮಾಸ್ಟರ್‌ಗಳು, ಟಿಕೆಟ್‌ ಪರೀಕ್ಷಕರು (ಟಿಟಿಇ), ಗಾರ್ಡ್‌ ಗಳು, ಚಾಲಕರು, ಕ್ಯಾಟರಿಂಗ್‌ ವಿಭಾಗದ ಉದ್ಯೋಗಿಗಳು ಸೇರಿದಂತೆ ಐದು ಲಕ್ಷ ಮಂದಿಗೆ ಈ ಯೂನಿಫಾರಂ ಸಿಗಲಿದೆ. 

ಯಾರಿಗೆ ಯಾವ ಯೂನಿಫಾರಂ?
ಸ್ವಾಗತ ಕಚೇರಿ (ಫ್ರಂಟ್‌ ಆಫೀಸ್‌) ಸಿಬ್ಬಂದಿ:
ಭಾರತೀಯ ರೈಲ್ವೆಯ ಲೋಗೋ ಇರಲಿದೆ. ಕೆಟರಿಂಗ್‌ ವಿಭಾಗದ ಸಿಬ್ಬಂದಿಗೆ ಕಪ್ಪು ಮತ್ತು ಹಳದಿ ಬಣ್ಣದ ಅರ್ಧ ಮತ್ತು ತುಂಬು ತೋಳಿನ ಟಿ ಶರ್ಟ್‌.

ಕೆಟರಿಂಗ್‌ ಸಿಬ್ಬಂದಿ: ಬಿಳಿ ಮತ್ತು ಕಪ್ಪು ಅಂಚಿನ ಟಿ -ಶರ್ಟ್‌.

ಟಿಕೆಟ್‌ ಪರಿವೀಕ್ಷಕರು, ಡ್ರೈವರ್‌ಗಳು ಮತ್ತು ಗಾರ್ಡ್‌ಗಳು: ಅರ್ಧ ತೋಳಿನ ಹೊಳೆಯುವ ಜಾಕೆಟ್‌ಗಳು. ಅದಕ್ಕೆ ಹಳದಿ ಮತ್ತ ಹಸಿರು ಬಣ್ಣಗಳಿವೆ.

ಈಗಿನ ಯೂನಿಫಾರಂ: ಸದ್ಯ ಇರುವ ಸಮವಸ್ತ್ರ ದಶಕಗಳ ಹಿಂದೆ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗಿದೆ. 2016-17ನೇ ಸಾಲಿನಲ್ಲಿ ರೈಲ್ವೆ ಬಜೆಟ್‌ ಮಂಡಿಸುವ ವೇಳೆ ಸಚಿವ ಸುರೇಶ್‌ ಪ್ರಭು ಈ ಅಂಶ ಪ್ರಸ್ತಾಪಿಸಿದ್ದರು.

ವಿನ್ಯಾಸಗೊಳಿಸಿದ್ದು ಯಾರು?: ಜನಪ್ರಿಯ ವಸ್ತ್ರ ವಿನ್ಯಾಸಕಿ ರಿತು ಬೇರಿ. ಈ ಬಗ್ಗೆ ಅಂತಿಮ ಆಯ್ಕೆ ಶೀಘ್ರದಲ್ಲೇ ನಡೆಯುತ್ತದೆ.

ಪ್ರಾಜೆಕ್ಟ್ ಸ್ವರ್ಣ: ಈ ಯೋಜನೆಗೆ ಪ್ರಾಜೆಕ್ಟ್ ಸ್ವರ್ಣ ಎಂದು ಹೆಸರಿಡ ಲಾಗಿದೆ. ಪ್ರಾಯೋಗಿಕವಾಗಿ ರಾಜಧಾನಿ, ಶತಾಬ್ಧಿಗಳಲ್ಲಿ ಜಾರಿ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next