Advertisement
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಯೋಜನೆ ಅನುಷ್ಠಾನದ ನಿಮಿತ್ತ ಕೇಂದ್ರ ವಿದ್ಯುತ್ ಸಚಿವಾಲಯದ ಜತೆಗೆ ಮಾತುಕತೆ ನಡೆಸಿದ್ದೇನೆ. ವಾಣಿಜ್ಯಿಕ ವಿದ್ಯುತ್‌ಗೆ ಪ್ರತಿ ಯುನಿಟ್‌ಗೆ 11 ರೂ. ದರ ಇದೆ. ಆದರೆ, ಹೆದ್ದಾರಿ ಯೋಜನೆ ಹಿನ್ನೆಲೆಯಲ್ಲಿ ಪ್ರತಿ ಯುನಿಟ್‌ಗೆ 3.50 ರೂ.ನಂತೆ ಖರೀದಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇನೆ’ ಎಂದರು. ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಖಾಸಗಿ ಕಂಪನಿಗಳೂ ಅದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುವ ಸುಳಿವನ್ನು ನೀಡಿದ್ದಾರೆ. ವಿದ್ಯುತ್ ಕೇಬಲ್‌ಗಳ ನಿರ್ವಹಣೆಯಲ್ಲಿ ಅವರು ಭಾಗಿಯಾಗಬಹುದು ಎಂದರು. ಈ ಮೊದಲು ದೇಶದ ಮೊದಲ ಇಲೆಕ್ಟ್ರಿಕ್ ಹೆದ್ದಾರಿಯನ್ನು ನವದೆಹಲಿ ಮತ್ತು ಜೈಪುರ ನಡುವೆ ನಿರ್ಮಿಸುವ ಇರಾದೆ ವ್ಯಕ್ತಪಡಿಸಿದ್ದರು. Advertisement
Electric: ಆರ್ಥಿಕ ಮಿತವ್ಯಯಿ ಇಲೆಕ್ಟ್ರಿಕ್ ಹೆದ್ದಾರಿ ನನ್ನ ಕನಸು: ನಿತಿನ್ ಗಡ್ಕರಿ
11:36 PM Sep 14, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.