Advertisement

ಐರೋಪ್ಯ ಒಕ್ಕೂಟ ಆರ್ಥಿಕ ಪುನಶ್ಚೇತನಕ್ಕೆ ನಿಧಿ

12:33 PM Apr 28, 2020 | sudhir |

ಮಣಿಪಾಲ: ಕೋವಿಡ್‌-19 ವಿಶ್ವದ ಬಲಿಷ್ಠ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲುಗಾಡಿಸಿದ್ದು, ಯುರೋಪ್‌ ಒಕ್ಕೂಟವು ಈಗ ಆರ್ಥಿಕತೆ ಪುನಶ್ಚೇತನಕ್ಕೆ ಹೊಸ ಯೋಜನೆಯನ್ನು ರೂಪಿಸುತ್ತಿದೆ.

Advertisement

1930ರ ಮಹಾ ಆರ್ಥಿಕ ಬಿಕ್ಕಟ್ಟಿನ ಬಳಿಕ ಎದುರಿಸುತ್ತಿರುವ ದೊಡ್ಡ ಸಂಕಷ್ಟವನ್ನು ಎದುರಿಸಲು ಹಾಗೂ ಪ್ರಾದೇಶಿಕ ಆರ್ಥಿಕತೆಯನ್ನು ಮರಳಿ ಕಟ್ಟಲು ಯರೋಪ್‌ ಒಕ್ಕೂಟ ಒಂದು ಟ್ರಿಲಿಯನ್‌ ಯುರೋ ನಿಧಿಯನ್ನು ಸ್ಥಾಪಿಸಲು ಮುಂದಾಗಿದೆ.
ಇದಕ್ಕೆ ಒಕ್ಕೂಟದಲ್ಲಿರುವ ಎಲ್ಲ ರಾಷ್ಟ್ರಗಳು ತಾತ್ವಿಕವಾಗಿ ಒಪ್ಪಿಕೊಂಡಿದ್ದು, ಅನಂತರ ವ್ಯವಹಾರಿಕವಾಗಿ ಅಗಾಧ ಪ್ರಮಾಣದ
ನಷ್ಟವನ್ನು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದಲ್ಲಿರುವ 27 ರಾಷ್ಟ್ರಗಳು ಸಹಿ ಮಾಡಿರುವ ಹೇಳಿಕೆಯನ್ನು ಬಿಡುಗಡೆ
ಮಾಡಿದ್ದು, ಈ ನಿಧಿ ಪ್ರಸ್ತುತ ಸ್ಥಿತಿಯನ್ನು ಎದುರಿಸಲು ಅತ್ಯವಶ್ಯ ಹಾಗೂ ಅಗತ್ಯವಾದುದು ಎಂದು ಹೇಳಿವೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯೂ ಈ ವರ್ಷ ಇಯು ದೇಶದ ಜಿಡಿಪಿ ಶೇ.7 ರಷ್ಟು ಕುಸಿಯುತ್ತದೆ ಎಂದು ಅಂದಾಜಿಸಿದ್ದು, ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿನ ಆರ್ಥಿಕ ಚಟುವಟಿಕೆಯು ಶೇ.20 ರಿಂದ 30 ರಷ್ಟು ಕುಸಿಯಲಿದೆ ಎಂದು ಹೇಳಿದೆ.

ವೇತನ ಸಬ್ಸಿಡಿ ವಿತರಣೆ
ಜತೆಗೆ ಇಯು ಸರಕಾರ ಈಗಾಗಲೇ ಹಣಕಾಸು ಮಂತ್ರಿ ರೂಪಿಸಿರುವ 500 ಬಿಲಿಯನ್‌ ಯುರೋ ಮೊತ್ತದ ಪರಿಹಾರ ನಿಧಿ ಯೋಜನೆಗೆ ಅನುಮೋದನೆ ನೀಡಿದ್ದು, ನಿರುದ್ಯೋಗ ಸಮಸ್ಯೆಯನ್ನು , ಉದ್ಯೋಗಿಗಳನ್ನು ವಜಾಗೊಳಿಸದಂತೆ ನೋಡಿಕೊಳ್ಳಲು ಈ ಹಣ ವಿನಿಯೋಗ ಮಾಡಲಾಗುತ್ತದೆ ಎಂದು ತಿಳಿಸಿದೆ.

ಇದರೊಂದಿಗೆ ಸುಮಾರು 100 ಬಿಲಿಯನ್‌ ಮೊತ್ತವನ್ನು ವೇತನ ಸಬ್ಸಿಡಿ ಸೇರಿದಂತೆ ವ್ಯವಹಾರ ಚಟುವಟಿಕೆಗಳ ಪುನರಾರಂಭಕ್ಕೆ ನೆರವು ನೀಡಲು ಬಳಸುವುದಾಗಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next