Advertisement

ಗ್ರಾಮಾಭಿವೃದ್ಧಿಯಿಂದ ಆರ್ಥಿಕ ಪ್ರಗತಿ

08:06 PM Jun 21, 2021 | Team Udayavani |

ರಾಮನಗರ: ಗ್ರಾಮೀಣ ಪ್ರದೇಶದಒಕ್ಕೂಟ ಸಂಘಗಳ ಆರ್ಥಿಕ ಪ್ರಗತಿಯಲ್ಲಿಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಾಯಕವಾಗಿ ಕಾರ್ಯನಿರ್ವಸುತ್ತಿದೆ ಎಂದು ರಾಮನಗರ ತಾಲೂಕು ಯೋಜನಾಧಿಕಾರಿ ಸೂರ್ಯನಾರಾಯಣ್‌ ತಿಳಿಸಿದರು.

Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಕೈಲಾಂಚವಲಯದ ಚನ್ನಮಾನಹಳ್ಳಿಕಾರ್ಯಕ್ಷೇತ್ರವ್ಯಾಪ್ತಿಯ ಗ್ರಾಮಾಭಿವೃದ್ಧಿ ಯೋಜನೆಸಂಘಗಳಿಗೆ ಚನ್ನಮಾನಹಳ್ಳಿ ಗ್ರಾಮದಲ್ಲಿ ಲಾಭಾಂಶ ವಿತರಣೆ ಮಾಡಿ ಅವರುಮಾತನಾಡಿದರು.ಗ್ರಾಮಾಂತರ ಪ್ರದೇಶಗಳ ಮಹಿಳೆಯರು ಶಿಕ್ಷಣ ಪಡೆಯುವುದು, ವ್ಯವಹಾರ ಜಾnನಗಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಒಕ್ಕೂಟ ಮಹಿಳಾ ಸಂಘಗಳನ್ನುರಚಿಸಿ ಅವುಗಳ ಮುಖಾಂತರ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ.

ಗ್ರಾಮೀಣಪ್ರದೇಶದ ಮಹಿಳೆಯರ ಸ್ವಾವಲಂಬಿಬದುಕಿಗೆ ಆಸರೆಯಾಗಿದೆ ಎಂದರು.ರಾಮನಗರ ಜಿಲ್ಲೆಯಲ್ಲಿ3497 ಸಂಘಗಳು ಯೋಜನೆ ವತಿಯಿಂದ ನಡೆಯುತ್ತಿವೆ. ಈ ಪೈಕಿ 2349 ಸಂಘಗಳು 19,99,7306 ರೂ. ಲಾಭಾಂಶಗಳಿಸಿದೆ.ಲಾಭಾಂಶವನ್ನು ಆಯಾ ಸಂಘಗಳಿಗೆನೀಡಲಾಗುತ್ತಿದೆ. ಇದರಿಂದ ಸಂಘದಸದಸ್ಯರಿಗೆ ಆರ್ಥಿಕ ಸಹಾಯಕ್ಕೆಕಾರಣವಾಗಿದೆ ಎಂದರು. ಕೈಲಾಂಚವಲಯ ಮೇಲ್ವಿಚಾರಕ ಪ್ರವೀಣ್‌ಕುಮಾರ್‌, ಸೇವಾಪ್ರತಿನಿಧಿ ಕವಿತಾ,ಯೋಜನೆ ಸಿಬ್ಬಂದಿಗಳಾದ ರಂಜಿತಾ,ರಾಮಚಂದ್ರ, ಕಿರಣ್‌ಕುಮಾರ್‌,ದಿಲೀಪ್‌ಕುಮಾರ್‌, ಸುಜಾತ ಒಕ್ಕೂಟಸಂಘಗಳ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next