Advertisement

ಉದ್ಯಮಶೀಲತೆಯಿಂದ ಆರ್ಥಿಕ ಉನ್ನತಿ: ಲಕ್ಷ್ಮೀಬಾಯಿ

12:30 AM Feb 22, 2019 | |

ಉಡುಪಿ: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ, ಡಿ.ದೇವರಾಜ್‌ ಅರಸು ಹಿಂದುಳಿದ ಅಭಿವೃದ್ಧಿ  ನಿಗಮ ಉಡುಪಿ  ಹಾಗೂ ಭಾರತೀಯ ವಿಕಾಸ ಟ್ರಸ್ಟ್‌  ಮಣಿಪಾಲ ಇವುಗಳ ಜಂಟಿ ಆಶ್ರಯದಲ್ಲಿ ನಿಗಮದ ಉಡುಪಿ ಜಿಲ್ಲಾ ಸೊÌàದ್ಯೋಗಾಕಾಂಕ್ಷಿಗಳಿಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಫೆ.21ರಂದು ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಜರಗಿತು.

Advertisement

ಭಾರತೀಯ ವಿಕಾಸ ಟ್ರಸ್ಟ್‌ನ ತರಬೇತಿ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮಿಬಾಯಿ  ತರಬೇತಿ  ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸ ಮುಗಿಸಿದ ಎಲ್ಲರಿಗೂ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಲು ಸಾಧ್ಯವಿಲ್ಲ.  ಆದ್ದರಿಂದ ಸೊÌàದ್ಯೋಗದತ್ತ  ಗಮನ ಹರಿಸಿ ಸೂಕ್ತ ತರಬೇತಿ,  ಪ್ರೇರಣೆ ಹೊಂದಿರುವ ವ್ಯಕ್ತಿ ಸಮಾಜದಲ್ಲಿ ಯಶಸ್ವೀ ಉದ್ಯಮಿಯಾಗಬಹುದು. ಸಾಧಿಸುವ ಛಲ, ಪ್ರಾಮಾಣಿಕತೆ  ಇದ್ದಲ್ಲಿ  ಪ್ರಾರಂಭಿಸಿದ ಸಣ್ಣ ಉದ್ಯಮ ಮುಂದೆ ಬೃಹತ್‌ ಕೈಗಾರಿಕೆಯಾಗಿ ಬೆಳೆಯಬಲ್ಲದು ಎಂದರು. ನಿಗಮದ ಜಿಲ್ಲಾ ಸಂಯೋಜನಾಧಿ ಕಾರಿ ಮಂಜುನಾಥ‌  ಅವರು ನಿಗಮದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
 
ಸೀಡಾಕ್‌ ಕೇಂದ್ರದ ತರಬೇತಿದಾರ ಸತೀಶ್‌ ಮಾಬೆನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀಡಾಕ್‌ ಕೇಂದ್ರದ ವ್ಯವಸ್ಥಾಪಕ ಪ್ರಥ್ವಿರಾಜ್‌ ಮತ್ತಿತರು ಉಪಸ್ಥಿತರಿದ್ದರು.  ತರಬೇತಿದಾರ ಈಶ್ವರ ಸ್ವಾಗತಿಸಿದರು. ಶ್ರೀನಿವಾಸ ಭಟ್‌, ಮಾಧವ ಹಾಗೂ ಗೀತಾ ಹಾಗೂ ತಾಲೂಕು ಕೇಂದ್ರಗಳ ಫ‌ಲಾನುಭವಿಗಳು ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next