Advertisement

ಆರ್ಥಿಕ ಹಿಂಜರಿತವಿದ್ದರೂ ವಿಮಾನಗಳಲ್ಲಿ ಜನಜಂಗುಳಿ

09:55 AM Dec 13, 2019 | Team Udayavani |

ಹೊಸದಿಲ್ಲಿ: ದೇಶದಲ್ಲಿ ಆರ್ಥಿಕ ಹಿಂಜರಿತ ಕಾಡಿದ್ದರೂ, ವಿಮಾನ ಪ್ರಯಾಣಿಕರ ಸಂಖ್ಯೆ ಏರಿದ್ದು, ಶೇ.3.86ರಷ್ಟು ಏರಿಕೆಯಾಗಿದೆ. ಇದೇ ವೇಳೆ ಒಂದು ತಿಂಗಳಲ್ಲಿ ಶೇ.11.2ರಷ್ಟು ಏರಿಕೆಯಾಗಿದೆ.

Advertisement

ಪ್ರವಾಸ ಸೀಸನ್‌ ಆರಂಭವಾಗಿರುವುದರಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಏರಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿದೆ. ಅದರ ಪ್ರಕಾರ 2019 ಜನವರಿಯಿಂದ ನವೆಂಬರ್‌ ಅವಧಿಯಲ್ಲಿ 13.1 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ 12.6 ಕೋಟಿ ಇತ್ತು. 2019ರ ಎಪ್ರಿಲ್‌ ಹೊರತು ಪಡಿಸಿದರೆ, ಬೇರೆಲ್ಲ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇಂಡಿಗೋದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅನಂತರದ ಸ್ಥಾನವನ್ನು ಸ್ಪೈಸ್‌ಜೆಟ್‌ ಮತ್ತು ಏರ್‌ ಇಂಡಿಯಾ ಪಡೆದಿದೆ.

ಇದೇ ವೇಳೆ ನವೆಂಬರ್‌ನಲ್ಲಿ ಗೋ ಏರ್‌, ವಿಸ್ತಾರಾ, ಏರ್‌ ಏಷಿಯಾ, ಇಂಡಿಗೋ ಏರ್‌ಲೈನ್ಸ್‌ಗಳು ಸಮಯಪರಿಪಾಲಕ ವಿಮಾನಯಾನ ಯಾನ ಸಂಸ್ಥೆಗಳಾಗಿ ಹೊರಹೊಮ್ಮಿವೆ. ಶೇ.67.6ರಷ್ಟು ಇವುಗಳು ಸಮಯ ಪರಿಪಾಲನೆ ಮಾಡಿವೆ. ಇದೇ ವೇಳೆ ದೇಶೀಯ ವಿಮಾನ ಯಾನದಲ್ಲಿ ಏರ್‌ ಇಂಡಿಯಾ ಅತಿ ಕನಿಷ್ಠ ಸಮಯ ಪರಿಪಾಲನೆ ಮಾಡಿದೆ. ಇದಕ್ಕಾಗಿ ಏರ್‌ ಇಂಡಿಯಾಕ್ಕೆ ಶೇ.42ರಷ್ಟು ಅಂಕ ಸಿಕ್ಕಿದೆ.

ಇನ್ನು ನವೆಂಬರ್‌ನಲ್ಲಿ ಶೇ.1.87ರಷ್ಟು ವಿಮಾನಯಾನಗಳು ರದ್ದುಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next