Advertisement

ಆರ್ಥಿಕ ಬಿಕ್ಕಟ್ಟು ಎನ್ನುವುದು ಕಂಪೆನಿಗಳ ಒತ್ತಡ ತಂತ್ರ: ಸುಶೀಲ್‌

01:23 AM Sep 19, 2019 | mahesh |

ಪಾಟ್ನಾ: ದೇಶವು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿಲ್ಲ. ದೊಡ್ಡ ದೊಡ್ಡ ಕಂಪೆನಿಗಳು ಉತ್ಪಾದನೆಯಲ್ಲಿ ಕುಂಠಿತವಾಗಿದೆ ಎಂದು ಸುಳ್ಳು ಹೇಳಿ ಕೊಂಡು ಸರಕಾರದ ಮೇಲೆ ಒತ್ತಡ ಹಾಕಿ ತೆರಿಗೆ ದರವನ್ನು ಇಳಿಸಲು ಮಾಡುತ್ತಿರುವ ತಂತ್ರವಿದು ಎಂದು ಬಿಜೆಪಿ ನಾಯಕ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಆರೋಪಿಸಿದ್ದಾರೆ.

Advertisement

ಬುಧವಾರ ಮಾತನಾಡಿದ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪಾರ್ಲೆಜಿ ಬಿಸ್ಕಿಟ್‌ ಕಂಪೆನಿಯ ಉದಾಹರಣೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿರುವ ರಾಜ್ಯಗಳು ಅಗ್ಗದ ಮಿಠಾಯಿಯನ್ನು ಖರೀದಿಸುವ ಬದಲು, ದುಬಾರಿ ಬೆಲೆಯ ಪೇಸ್ಟ್ರಿಗಳನ್ನು ಖರೀದಿಸುತ್ತಿವೆ. ಹೀಗಾಗಿ, ಬಿಸ್ಕಿಟ್‌ನ ಬೇಡಿಕೆ ಕಡಿಮೆಯಾಗಿರಬಹುದು ಎಂದಿದ್ದಾರೆ.

ಒಟ್ಟಿನಲ್ಲಿ ತೆರಿಗೆ ದರ ಇಳಿಸಲು ಕಾರ್ಪೊರೇಟ್‌ ಕಂಪೆನಿಗಳು ನಡೆಸುತ್ತಿರುವ ಲಾಬಿಯಿದು. ದೇಶದ ಆರ್ಥಿಕ ಸ್ಥಿತಿಗೆ ಏನೂ ಆಗಿಲ್ಲ ಎಂದೂ ಅವರು ಹೇಳಿದ್ದಾರೆ. ನಿತೀಶ್‌ ಸರಕಾರದಲ್ಲಿ ಹಣಕಾಸು ಖಾತೆಯನ್ನೂ ನಿರ್ವಹಿ ಸುತ್ತಿರುವ ಸುಶೀಲ್‌ ಮೋದಿ ಅವರ ಈ ಹೇಳಿಕೆಗೆ ಪ್ರತಿಪಕ್ಷ ಆರ್‌ಜೆಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ಸುಶೀಲ್‌ ಅವರ ಹೇಳಿಕೆಯನ್ನು ನೋಡಿದರೆ ಫ್ರಾನ್ಸ್‌ ನ ರಾಣಿಯೊಬ್ಬರ ಹೇಳಿಕೆ ನೆನಪಾಗುತ್ತದೆ. ಜನರಿಗೆ ತಿನ್ನಲು ಬ್ರೆಡ್‌ ಇಲ್ಲದಿದ್ದರೆ, ಅವರು ಕೇಕ್‌ ತಿನ್ನಲಿ ಎಂದು ಆ ರಾಣಿ ಹೇಳಿದ್ದರಂತೆ. ಸುಶೀಲ್‌ ಹೇಳಿಕೆಯು ಅವರ ಮೂರ್ಖತನವನ್ನು ಪ್ರದರ್ಶಿಸಿದೆ’ ಎಂದು ಆರ್‌ಜೆಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next