Advertisement

ಬ್ರಿಟನ್ ನಲ್ಲಿ ಸೋಂಕು ಕಡಿಮೆಯಾದರೂ ಚೇತರಿಸಿಕೊಳ್ಳದ ಆರ್ಥಿಕತೆ

11:54 AM Aug 24, 2020 | sudhir |

ಬ್ರಿಟನ್‌: ಕೋವಿಡ್ ಸೋಂಕು ಪರಿಸ್ಥಿತಿ ತಿಳಿಯಾದ ಬಳಿಕದ ದಿನಗಳಲ್ಲಿ ದೇಶದ ಆರ್ಥಿಕತೆ ಸುಧಾರಿಸಲಿದೆ ಎಂದು ನಿರೀಕ್ಷಿಸಿದ್ದ ಯುರೋಪ್‌ ದೇಶಗಳ ಲೆಕ್ಕಾಚಾರ ಹುಸಿಯಾಗಿದೆ.

Advertisement

ಸೋಂಕಿನ ತೀವ್ರತೆ ಕಡಿಮೆಯಾದ ಅನಂತರವೂ ವ್ಯಾಪಾರ ವಹಿವಾಟು ಚಟುವಟಿಕೆಗಳು ಕುಠುಂತ ಸಾಗಿದ್ದು, ಈ ಮಾರಣಾಂತಿಕ ಸೋಂಕಿಗೆ ಹೆದರಿರುವ ಜನರು ಖರೀದಿಯಿಂದ ದೂರ ಉಳಿದಿದ್ದಾರೆ.

ಅಲ್ಲದೇ ಸೋಂಕು ಪ್ರಕರಣಗಳು ವರದಿಯಾಗುತ್ತಿರುವುದರಿಂದ ವ್ಯಾಪಾರ, ಅಂಗಡಿ ಮುಂಗಟ್ಟು ಮುಚ್ಚಿದ್ದು ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಆರ್ಥಿಕತೆಯ ಸ್ಥಿತಿಗತಿ ಬಗ್ಗೆ “ಐಎಚ್‌ಎಸ್‌ ಮಾರ್ಕಿಟ್‌’ ಸಂಸ್ಥೆಯ ಅಧ್ಯಯನ ವರದಿ ಪ್ರಕಟವಾಗಿದ್ದು, ಅದರ ಪ್ರಕಾರ ಜುಲೈ ತಿಂಗಳಲ್ಲಿ ಚುರುಕಿನ ಚೇತರಿಕೆ ಕಂಡಿದ್ದ ಆರ್ಥಿಕ ವಹಿವಾಟು ಇದೀಗ ಮತ್ತೆ ಮಂದಗತಿ ಧೋರಣೆಯನ್ನು ಅನುಸರಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸೋಂಕು ಮತ್ತೆ ಹೆಚ್ಚುತ್ತಿದ್ದು, ಅಲ್ಲಿನ ಸರಕಾರವನ್ನು ಚಿಂತೆಗೆ ದೂಡಿದೆ.

ನೂತನ ಹೆಜ್ಜೆಯತ್ತ ಇಸ್ರೇಲ್‌ ತಜ್ಞರು
ಮಣಿಪಾಲ: ಕೋವಿಡ್‌ 19 ಅನ್ನು ಪರೀಕ್ಷಿಸಲು ಮೂರು ಇಸ್ರೇಲ್‌ ವಿಜ್ಞಾನಿಗಳು ಉತ್ತಮ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದು ಸಾಂಪ್ರದಾಯಿಕ ಪರೀಕ್ಷೆಗಿಂತ ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಇದರಲ್ಲಿ ಜನರ ಗುಂಪು (ಪೂಲ್)ನಿಂದ ಪಾಸಿಟಿವ್‌ ಇರುವವರನ್ನು ಮಾತ್ರ ಪತ್ತೆ ಮಾಡಲಾಗಿದ್ದು, ಈ ವಿಧಾನವನ್ನು ಇಸ್ರೇಲ್‌ ಆರೋಗ್ಯ ಸಚಿವಾಲಯವು ಶಾಲಾ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಪರೀಕ್ಷಿಸಲು ಅನುಮೋದಿಸಿದೆ. ಮುಂಬರುವ ದಿನಗಳಲ್ಲಿ ಸೋಂಕು ಮತ್ತಷ್ಟು ಅಪಾಯಕಾರಿಯಾಗಿರಲಿದೆ ಎಂದು ಊಹಿಸಿರುವ ಸರಕಾರ ಅಕ್ಟೋಬರ್‌ನಿಂದ ದೇಶದ 12 ಪ್ರಯೋಗಾಲಯಗಳಲ್ಲಿ ಈ ವಿಧಾನವನ್ನು ಜಾರಿಗೆ ತರಲು ಸರಕಾರ ಯೋಜಿಸುತ್ತಿದೆ. ಈ ತಂತ್ರವನ್ನು ಇಸ್ರೇಲ್‌ ಓಪನ್‌ ವಿಶ್ವವಿದ್ಯಾಲಯದ ಡಾ| ನಾಮ್‌ ಶಾಂತಲ್‌ ಮತ್ತು ಅವರ ಸಹೋದ್ಯೋಗಿಗಳಾದ ಡಾ| ಟೋಮರ್‌ ಹಟ್ಜ್ ಮತ್ತು ಏಂಜಲ್‌ ಪೊರ್ಗಡಾರ್‌ ಕಂಡುಹಿಡಿದಿದ್ದಾರೆ. ಅವರು ಇದನ್ನು ಪಿ-ಬೆಸ್ಟ್‌ ಅಂದರೆ ಪೂಲಿಂಗ್‌ ಆಧಾರಿತ ಎಸ್‌ಎಆರ್‌ಎಸ್‌-ಕೋವಿಡ್‌ 2 ಪರೀಕ್ಷೆ ಎಂದು ಹೆಸರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next