Advertisement

ಸೋಂಕಿನ ವಿರುದ್ಧ ಹೆಚ್ಚು ಲಸಿಕೆ ನೀಡುವುದರಿಂದ ಅರ್ಥ ವ್ಯವಸ್ಥೆ ಚೇತರಿಕೆ ಕಾಣಲಿದೆ

12:46 AM Jun 18, 2021 | Team Udayavani |

ಮುಂಬಯಿ: ಕೊರೊನಾ ಸೋಂಕಿನ ವಿರುದ್ಧ ಹೆಚ್ಚುತ್ತಿರುವ ಲಸಿಕೆ ನೀಡಿಕೆಯಿಂದಾಗಿ ಅರ್ಥ ವ್ಯವಸ್ಥೆ ಚೇತರಿಕೆ ಕಾಣಲಿದೆ. ಹೀಗೆಂದು ಆರ್‌ಬಿಐನ ಅರ್ಥ ವ್ಯವಸ್ಥೆಯ ಮುನ್ನೋಟದಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.

Advertisement

2ನೇ ಅಲೆಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿನ ಬೇಡಿಕೆ ಮೇಲೆ ಪ್ರತಿಕೂಲ ಉಂಟಾಗಿದೆ. ಸದ್ಯ, ಸೋಂಕಿನ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವುದರಿಂದ ಅದು ನಿಧಾನಕ್ಕೆ ಸುಧಾರಿಸಲಿದೆ ಎಂದು ಆರ್‌ಬಿಐ ಪ್ರತಿಪಾದಿಸಿದೆ.

ಕೇಂದ್ರ ಸರಕಾರ ಅಥವಾ ಆರ್‌ಬಿಐ ವತಿಯಿಂದ ಸೋಂಕಿನ 2ನೇ ಅಲೆಯಿಂದ ಉಂಟಾಗಲಿರುವ ಸಂಭಾವ್ಯ ನಷ್ಟದ ಮೊದಲ ಅಧ್ಯಯನ ಇದಾಗಿದೆ. ಕೃಷಿ ಕ್ಷೇತ್ರದಲ್ಲಿ, ರಫ್ತು, ಕೈಗಾರಿಕಾ ಉತ್ಪಾದನೆ, ಸಂಪರ್ಕ ರಹಿತ ಸೇವಾ ಕ್ಷೇತ್ರದಲ್ಲಿ ಸೋಂಕಿನ ಪ್ರತಿಕೂಲ ಪ್ರಭಾವ ಇದ್ದರೂ, ಉತ್ತಮ ಚೇತರಿಕೆ ಉಂಟಾಗಿದೆ ಎಂದು ಆರ್‌ಬಿಐ ಮುನ್ನೋಟದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿನ 2ನೇ ಅಲೆಯಿಂದ ಪ್ರಸಕ್ತ ವಿತ್ತೀಯ ವರ್ಷದಲ್ಲಿ 2 ಲಕ್ಷ ಕೋಟಿ ರೂ. ನಷ್ಟ ಉಂಟಾಗಲಿದೆ. ಜನರು ಕೂಡಿಟ್ಟ ಹಣ ಕಡಿಮೆಯಾಗಲಿದೆ ಮತ್ತು ಆರೋಗ್ಯಕ್ಕಾಗಿನ ವೆಚ್ಚ ಏರಿಕೆಯಾಗಲಿದೆ ಎಂದು ಆರ್‌ಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next