Advertisement

ಮೊಬೈಲ್‌ ಆ್ಯಪ್‌ನಿಂದ ಆರ್ಥಿಕ ಗಣತಿ

12:23 PM Dec 13, 2019 | Suhan S |

ದೇವನಹಳ್ಳಿ : ಆರ್ಥಿಕ ಗಣತಿ ಕ್ಷೇತ್ರ ಕಾಯಾಚರಣೆಯಲ್ಲಿ ನಗರ ಮತ್ತು ಗ್ರಾಮೀಣ ಸೇರಿದಂತೆ ಒಂದು ಭೌಗೋಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ಜರುಗುತ್ತಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವಿರಗಳನ್ನು ಸಂಗ್ರಹಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಮೊಬೈಲ್‌ ಆ್ಯಪ್‌ಗ್ಳ ಮೂಲಕ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ ತಿಳಿಸಿದರು.

Advertisement

ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ನಲ್ಲಿರುವ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸಾಂಖೀಕ ಇಲಾಖೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಏಳನೆ ಆರ್ಥಿಕ ಗಣತಿಯ ಕಾರ್ಯಕ್ರಮದಲ್ಲಿ ಮೊಬೈಲ್‌ ಆಫ್ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಾರ್ಚ್‌ ಅಂತ್ಯದೊಳಗೆ: ಆರ್ಥಿಕ ಗಣತಿಯು ದೇಶದ ಭೌಗೋಳಿಕ ಗಡಿ ಯೊಳಗೆ ನೆಲೆಗೊಂಡು ಸ್ವಂತ ಉಪ ಯೋಗಕ್ಕಲ್ಲದ ಸರುಕುಗಳ ಉತ್ಪಾದನೆ, ಅವುಗಳ ವಿತರಣೆ ಮತ್ತು ಮಾರಾಟ, ಸೇವೆ ಸೇರಿದಂತೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಘಟಕಗಳ ಪೂರ್ಣ ಎಣಿಕೆಯಾಗಿದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ. ಸರ್ಕಾರದ ಯೋಜನೆಗಳ ಜಾರಿಯಲ್ಲಿ ಕಾಮನ್‌ ಸರ್ವಿಸ್‌ ಸೆಂಟರ್‌ (ಸಿಎಸ್‌ಸಿ) ಜವಾಬ್ದಾರಿಯುತ ಪಾತ್ರವನ್ನು ಮನಗೊಂಡು ಕೇಂದ್ರ ಸರ್ಕಾರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಸಿಎಸ್‌ಸಿಗೆ ವಹಿಸಿದೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಗಣತಿದಾರರಿಗೆ ಹಾಗೂ ಮೊದಲ ಹಂತದ ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಡಿ.12 ರಿಂದ ಮಾರ್ಚ 2020 ಅಂತ್ಯ ದೊಳಗೆ ಗಣತಿ ಕಾರ್ಯ ಪೂರ್ಣ ಗೊಳ್ಳಬೇಕಾಗಿದೆ ಎಂದರು.

ಮನೆಗೆ ಭೇಟಿ ನೀಡಲಿರುವ ಗಣತಿದಾರರು ಮನೆಯಲ್ಲೇ ನಡೆಸುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ. ಹೈನುಗಾರಿಕೆ, ವ್ಯಾಪಾರ, ಟೈಲರಿಂಗ್‌, ಬೀಡಿ ಕಟ್ಟುವುದು, ಟ್ಯೂಷನ್‌, ಸೊಪ್ಪು ,ತರಕಾರಿ, ಹೂ ಮಾರಾಟ ಹೀಗೆ ಇನ್ನಿತರೆ ವ್ಯಾಪಾರಸ್ಥರನ್ನು ಗುರುತಿಸಿ, ಅವರ ಆರ್ಥಿಕ ಮಟ್ಟದ ¸ಗ್ಗೆ ಮಾಹಿತಿ ಕಲೆ ಹಾಕಿ ಮುಂದೆ ಸರ್ಕಾರದಿಂದ ಯಾವ ಯೋಜನೆ ರೂಪಿಸಬೇಕು ಎನ್ನುವುದನ್ನು ತಿಳಿಯಲು ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದೆ. ಗಣತಿ ಮಾಡಲು ಹೋದಾಗ ಮುಜುಗರ ಪಡಬಾರದು ಅಥವಾ ಮಾಹಿತಿ ನೀಡಲು ನಿರಾಕರಿಸಬಾರದು. ವಾಸ್ತವ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಿದರು.

ಪುರಸಭೆ ಮತ್ತು ನಗರಸಭೆ, ಪಾಲಿಕೆ ಹಂತಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಸಹಕಾರ ಸಂಘ ಸ್ಥಾಪಿಸಿ ಅದರ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಗರ ಪ್ರದೇಶಗಳಲ್ಲಿ ಗಣತಿದಾರರನ್ನು ಬ್ಯಾಕ್‌ ಗಳನ್ನು ಗುರುತಿಸಲು ನೆರವಾಗಬೇಕು. ತಹಶೀಲ್ದಾರ್‌ ಗ್ರಾಮೀಣ ಪ್ರದೇಶಗಳಲ್ಲಿ ಗಣತಿದಾರರು ಬ್ಯಾಕ್‌ ಗಳನ್ನು ಗುರುತಿಸಲು ನೆರವಾಗುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು. ಈ ವೇಳೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ ನರಸಿಂಹಪ್ಪ, ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next