Advertisement

ಪರಿಸರ ಸ್ನೇಹಿ ನೀರಿನ ಘಟಕ ಲೋಕಾರ್ಪಣೆಗೆ ಸಿದ್ಧ

01:45 PM Mar 15, 2022 | Team Udayavani |

ಶಿಡ್ಲಘಟ್ಟ: ತಾಲೂಕಿನ ಆನೂರು ಗ್ರಾಪಂ ನರೇಗಾ ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿ ಮಾದರಿ ಅಂಗನವಾಡಿ ಕಟ್ಟಡ, ಡಿಜಿಟಲ್‌ ಗ್ರಂಥಾಲಯ ಕಾಮಗಾರಿಯನ್ನು ಪೂರ್ಣಗೊಳಿಸಿ ಜಿಲ್ಲೆಯ ಗಮನ ಸೆಳೆದಿದೆ. ಜತೆಗೆ ಪರಿಸರಸ್ನೇಹಿ ಕುಡಿವ ನೀರಿನ ಘಟಕವನ್ನು ನಿರ್ಮಿಸಿ ಕತೂಹಲ ಕೆರಳಿಸಿದೆ.

Advertisement

ಆನೂರು ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ವಿಜಯೇಂದ್ರ, ಗ್ರಾಪಂ ಸದಸ್ಯ ವೆಂಕಟೇಶ್‌ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಅವರ ವಿಶೇಷ ಕಾಳಜಿಯಿಂದ ಆನೂರ ಗ್ರಾಪಂನ ಹಿತ್ತಲಹಳ್ಳಿ ಗ್ರಾಮದಲ್ಲಿ ಪರಿಸರಸ್ನೇಹಿ ಶುದ್ಧ ಕುಡಿವ ನೀರಿನ ಘಟಕ ತಲೆ ಎತ್ತಿದೆ. 15ನೇ ಹಣಕಾಸು ಯೋಜನೆ ಅಡಿಯಲ್ಲಿ 3 ಲಕ್ಷ ಹಾಗೂ ಗ್ರಾಪಂನ ವರ್ಗವೊಂದರ ಯೋಜನೆಯಡಿ 2 ಲಕ್ಷ ರೂ.ಗಳನ್ನು ಕ್ರೋಡೀಕರಿಸಿ 5 ಲಕ್ಷ ರೂ.ಗಳ ವೆಚ್ಚದಲ್ಲಿ ಜಿಲ್ಲೆಯಲ್ಲಿ ಮಾದರಿ ಎನ್ನಲಾದ ಪರಿಸರಸ್ನೇಹಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ.

ಸುಮಾರು 2 ಸಾವಿರ ಲೀ. ನೀರು ಶೇಖರಣೆ ಸಾಮರ್ಥ್ಯದ ಘಟಕದಲ್ಲಿ ಸ್ವಯಂ ಚಾಲಿತ ಯಂತ್ರವನ್ನು ಅಳವಡಿಸಲಾಗಿದೆ ಇದರಿಂದ ಗ್ರಾಮಸ್ಥರು ಟೋಕನ್‌ ಮೂಲಕ ನೀರು ಪಡೆಯಬಹುದಾಗಿದೆ.

ಪರಿಸರ ಸ್ನೇಹಿ ನಾಡಕಚೇರಿ: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ ಅನಿರುದ್ಧ್ ಶ್ರವಣ ಅವರು ಪರಿಸರಸ್ನೇಹಿ ನಾಡಕಚೇರಿಯನ್ನು ನಿರ್ಮಾಣ ಮಾಡಿ ರಾಜ್ಯದಲ್ಲಿಯೇ ಗಮನಸೆಳೆದಿದ್ದರು. ಅದೇ ಮಾದರಿಯಲ್ಲಿ ಆನೂರು ಗ್ರಾಪಂನ ಹಿತ್ತಲಹಳ್ಳಿ ಗ್ರಾಮದಲ್ಲಿ ಪರಿಸರಸ್ನೇಹಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದ್ದು, ಘಟಕದಲ್ಲಿ ನಿರುಪಯುಕ್ತ ನೀರು ವ್ಯರ್ಥವಾಗಿ ರಸ್ತೆಗೆ ಹರಿಯಲು ಬ್ರೇಕ್‌ ಹಾಕಿ ಆ ನೀರನ್ನು ಸಂಗ್ರಹ ಮಾಡಲು ತೊಟ್ಟಿಯನ್ನು ನಿರ್ಮಿಸಲಾಗಿದೆ.

ಗ್ರಾಮದಲ್ಲಿ ಜಾನುವಾರಗಳನ್ನು ತೊಳೆಯಲು ನೀರು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಘಟಕದ ಒಳಗೆ ಆಧುನಿಕ ಯಂತ್ರಗಳನ್ನು ಅಳವಡಿಸಿ ನೀರು ಶೇಖರಿಸಲು ಸ್ಟೀಲ್‌ ಟ್ಯಾಂಕ್ಸ್‌ ಸಹ ಸ್ಥಾಪಿಸಲಾಗಿದೆ ಜತೆಗೆ ಘಟಕದ ಹೊರಭಾಗದಲ್ಲಿ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ.  ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಿರುವ ಶುದ್ಧ ನೀರಿನ ಘಟಕ ಮಾದರಿಯಾಗಿದ್ದು ಅತಿ ಶೀಘ್ರದಲ್ಲಿ ಉದ್ಘಾಟನೆಯಾಗಲಿದೆ.

Advertisement

ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಯನ್ನು ಬಳಸಿಕೊಂಡು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಹಿತ್ತಲಹಳ್ಳಿಯಲ್ಲಿ ಜಿಲ್ಲೆಯಲ್ಲಿ ಮಾದರಿ ಯಾಗಿ ಪರಿಸರ ಸ್ನೇಹಿ ಕುಡಿವ ನೀಡಿನ ಘಟನಕ ವನ್ನು ನಿರ್ಮಿಸಲಾಗಿದೆ. ವಿಜಯೇಂದ್ರ, ಆನೂರು ಗ್ರಾಪಂ ಉಪಾಧ್ಯಕ್ಷ

ಆನೂರು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹಿತ್ತಲಹಳ್ಳಿ ಗ್ರಾಮದಲ್ಲಿ ಅರ್‌.ಓ ಸ್ಥಾಪನೆ ಮಾಡಿರುವುದು ಸಂತೋಷವಾಗಿದೆ. ಈ ಊರಿನ ಜನರಿಗೆ ಒಳ್ಳೆಯ ಸ್ವತ್ಛವಾದ ನೀರು ಕುಡಿಯುವುದಕ್ಕೆ ಅನುಕೂಲವಾಗಿದೆ ಇದಕ್ಕೆ ಎಲ್ಲಾ ಗ್ರಾಪಂ ಸದಸ್ಯರು ಸಹಕಾರ ನೀಡಿದ್ದಾರೆ ಅದರಲ್ಲೂ ವಿಶೇಷವಾಗಿ ಪಿಡಿಒ ವಿಶೇಷ ಕಾಳಜಿವಹಿಸಿದ್ದಾರೆ. –ನೇತ್ರಾವತಿ, ಆನೂರು ಗ್ರಾಪಂ ಅಧ್ಯಕ್ಷೆ

ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ವಿಶೇಷವಾಗಿ ಗ್ರಾಮಸ್ಥರ ಸಹಕಾರದಿಂದ ಮುಂಬರುವ ಬೇಸಿಗೆಗಾಲದಲ್ಲಿ ಅನುಕೂಲ ಕಲ್ಪಿಸಲು ಪರಿಸರ ಸ್ನೇಹಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲಾಗಿದೆ ನೀರಿನ ಸದ್ಬಳಕೆಗೆ ಆದ್ಯತೆ ನೀಡಲಾಗಿದೆ. ಕಾತ್ಯಾಯಿನಿ, ಆನೂರು ಗ್ರಾಪಂ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next