Advertisement

ಈಶಾನ್ಯ ರೈಲ್ವೆಯ ಪರಿಸರ ಸ್ನೇಹಿ ಹೆಜ್ಜೆ

06:05 AM May 17, 2018 | |

ಮಣಿಪುರದ ಜಿರಿಬಂನಿಂದ ಇಂಫಾಲ್‌ವರೆಗೆ ನೂತನವಾಗಿ ನಿರ್ಮಿಸಲಾಗುವ ಹೊಸ ರೈಲು ಮಾರ್ಗದ ಕಾಮಗಾರಿಗೆ ನಿರುಪಯುಕ್ತ ಮಣ್ಣಿನಿಂದ ತಯಾರಿಸಲ್ಪಡುವ ಇಟ್ಟಿಗೆಗಳನ್ನು ಬಳಸಲು ಈಶಾನ್ಯ ರೈಲ್ವೆ ಇಲಾಖೆ ಮುಂದಾಗಿದೆ.

Advertisement

ಈ ಪರಿಕಲ್ಪನೆಯನ್ನು ಅಸ್ಸಾಂನ ಸಿಲ್ಚಾರ್‌ನಲ್ಲಿರುವ ನ್ಯಾಶನಲ್‌ ಇನ್‌ಸ್ಟಿ ಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ ಐಟಿ) ಸಾಕಾರಗೊಳಿಸಿದೆ. ಈ ಹಿನ್ನೆಲೆಯಲ್ಲಿ, ಮಣಿಪುರದಲ್ಲಿ ಪರಿಸರ ಸ್ನೇಹಿ ಇಟ್ಟಿಗೆ ತಯಾರಿಕಾ ಘಟಕ ಸ್ಥಾಪಿಸಲಾಗಿದ್ದು, ಇಲ್ಲಿ, ಪ್ರತಿ 8 ಗಂಟೆಗೆ 3,500 ಇಟ್ಟಿಗೆಗಳು ಸಿದ್ಧವಾಗುತ್ತವೆ. 

ಯಾವುದೀ ರೈಲು ಮಾರ್ಗ?  
ಮಣಿಪುರದ ಜಿರಿಂಬನಿಂದ  ಇಂಫಾಲ ನಡುವೆ ಸುಮಾರು 111 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸುವ ಯೋಜನೆಯಿದು. 2020ರ ಹೊತ್ತಿಗೆ ಇದರ ಕಾಮಗಾರಿ ಮುಗಿಯಲಿದೆ. ಇದ ರಲ್ಲಿ ಒಟ್ಟು 63.2 ಕಿ.ಮೀ. ದೂರ ದ 47 ಸುರಂಗಗಳು, 131 ಸೇತುವೆಗಳು ಇರಲಿವೆ. ಕಾಮಗಾರಿಯಲ್ಲಿ ಈ ಇಟ್ಟಿಗೆಗಳನ್ನು ಬಳಸಲು ನಿರ್ಧರಿಸಲಾಗಿದೆ.  

ಮಿತವ್ಯಯಕಾರಿ ಇಟ್ಟಿಗೆ
ಇಟ್ಟಿಗೆ ಕಾರ್ಖಾನೆಗಳಿಂದ ಇಟ್ಟಿಗೆಗಳನ್ನು ತರಿಸಿ ಅವುಗಳನ್ನು ಕಾಮಗಾರಿ ಸ್ಥಳಕ್ಕೆ ಸಾಗಿಸುವುದು ದುಬಾರಿಯಾಗಿ ಪರಿಣಮಿಸಿದೆ. ತಯಾರಿಕೆಗಿಂತ ಸಾಗಣೆ ವೆಚ್ಚವೇ ಅಧಿಕವಾಗುವ ಕಾರಣ ಕಡಿಮೆ ಬಜೆಟ್‌ನಲ್ಲಿ ತಾನೇ ಇಟ್ಟಿಗೆ ತಯಾರಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿತ್ತು. ಇದರ ಫ‌ಲವೇ ಈ ಪರಿಸರ ಸ್ನೇಹಿ ಇಟ್ಟಿಗೆ.

ತಯಾರಿಕೆ ಹೇಗೆ? 
ಹೆಚ್ಚಿನ ಪ್ರಮಾಣದ ನಿರುಪಯುಕ್ತ ಮಣ್ಣು, ಅಲ್ಪ ಪ್ರಮಾಣದ ಸಿಮೆಂಟ್‌ ಹಾಗೂ ಸ್ಥಳೀಯವಾಗಿ ದೊರಕುವ ಕೆಲ ಕಚ್ಚಾ ವಸ್ತುಗಳನ್ನು ಹದವಾಗಿ ಬೆರೆಸಿ, ಕುಲುಮೆಯಲ್ಲಿ ಅಧಿಕ ಒತ್ತಡದಲ್ಲಿ ಕಾಯಿಸಿದರೆ ಗಟ್ಟಿ ಮುಟ್ಟಾದ ಇಟ್ಟಿಗೆಗಳು ಸಿದ್ಧ ವಾಗುತ್ತವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next