Advertisement
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಪರಿಸರ ಸ್ನೇಹಿ ನಾಡ ಕಚೇರಿ ನಿರ್ಮಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಿದ್ದು, ಕಟ್ಟಡ ನವವಧುವಿನಂತೆ ಶೃಂಗಾರಗೊಂಡಿದೆ.
Related Articles
Advertisement
ಕಚೇರಿಗೆ ಅಗತ್ಯ ಸಿಬ್ಬಂದಿ ದೊರೆಯಲಿ: ಜಂಗಮಕೋಟೆ ಗ್ರಾಮ ಹೋಬಳಿ ಮತ್ತು ಪಂಚಾಯಿತಿ ಕೇಂದ್ರವಾಗಿರುವುದರಿಂದ ವಿವಿಧ ಸರ್ಕಾರಿ ಸೇವೆ ಒದಗಿಸಲು ಈಗಾಗಲೇ ನಾಡ ಕಚೇರಿ ನಡೆಯುತ್ತಿದೆ. ಕಚೇರಿಗೆ ನೂತನ ಕಟ್ಟಡ ಭಾಗ್ಯ ಕೂಡಿಬಂದಿದ್ದು, 13 ಮಂದಿ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ಜಾಗದಲ್ಲಿ ಕೇವಲ 7 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನುಳಿದ ಸಿಬ್ಬಂದಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಇಲ್ಲಿ ಒಬ್ಬರು ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕ ವಿಷಯ ನಿರ್ವಾಹಕರ ಒಬ್ಬರು, ಇಬ್ಬರು ಆಪರೇಟರ್, ಡಿ-ಗ್ರೂಪ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.
ಸೇವೆಗಳು: ಪ್ರಸ್ತುತ ನಾಡ ಕಚೇರಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ, ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಹಿತ ಎಲ್ಲಾ ವಿಧವಾದ ದೃಢೀಕರಣ ಪತ್ರಗಳು, ರೈತರಿಗೆ ಪಹಣಿ, ಮುಟೇಷನ್, ಸರ್ವೇ ಪ್ರತಿಗಳು ಸೇವೆ ಲಭಿಸುತ್ತಿದೆ.
ಜಂಗಮಕೋಟೆಯಲ್ಲಿಯ ನಾಡ ಕಚೇರಿಯನ್ನು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಲಿದ್ದಾರೆ. ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಸಭೆಯ ಉಪಾಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚೌಡರೆಡ್ಡಿ ತೋಪಲ್ಲಿ, ಸಿ.ಆರ್.ಮನೋಹರ್, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಪಂ ಸಿಇಒ ಫೌಝೀಯಾ ತರಾನ್ನುಮ್, ಜಿಪಂ ನಿರ್ಮಲಾ, ತಾಪಂ ಅಧ್ಯಕ್ಷ ಜಿ.ವಿ.ನಾರಾಯಣಸ್ವಾಮಿ, ಜಿಪಂ ಸದಸ್ಯೆ ತನುಜಾ, ಜಂಗಮಕೋಟೆ ಗ್ರಾಪಂ ಅಧ್ಯಕ್ಷೆ ರಹಮತ್‌ಜಾನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಗ್ರಾಮಾಂತರ ಪ್ರದೇಶದ ಜನರಿಗೆ ಸುಲಭವಾಗಿ ಸರ್ಕಾರಿ ಸೇವೆಗಳು ಲಭಿಸಬೇಕೆಂಬ ಉದ್ದೇಶದೊಂದಿಗೆ ನಿರ್ಮಿಸಿರುವ ಪರಿಸರ ಸ್ನೇಹಿ ಕಟ್ಟಡದಿಂದ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಲಭಿಸಲಿದೆ. ಮಾದರಿ ಕಟ್ಟಡವನ್ನು ನಿರ್ಮಿಸಲು ಬೆಂಗಳೂರಿನ ಐಐಎಸ್‌ಸಿ ಅವರಿಂದ ತಾಂತ್ರಿಕ ಸಲಹೆ ಪಡೆದು ಕಟ್ಟಡ ನಿರ್ಮಿಸಿದ್ದೇವೆ. -ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ