Advertisement
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರತಿಯೊಂದು ವಸ್ತುವಿನಲ್ಲೂ ಹೊಸತನವನ್ನು ಕಾಣುವಂತವರು. ಇದೀಗ ಎತ್ತಿನಗಾಡಿಯೂ ಹೊರತಾಗಿಲ್ಲ. ಧರ್ಮಸ್ಥಳಕ್ಕೆ ಬಂದಾಗ ಆಧುನಿಕ ಎತ್ತಿನಗಾಡಿಯೊಂದು ಈಗ ಎಲ್ಲರ ಆಕರ್ಷಣೀಯವಾಗಿದೆ. ಎತ್ತಿನ ಬಲದಿಂದ ಓಡಾಡುವ ಈ ತೇರು ಪರಿಸರ ಸ್ನೇಹಿಯಾಗಿದೆ.
Related Articles
Advertisement
ಆನಂದ ಮಹೀಂದ್ರ ಟ್ವೀಟ್ಧರ್ಮಸ್ಥಳ ಎತ್ತಿನ ಗಾಡಿ ಕಾರಿನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಪಡಿಸಿದ್ದರು. ಇದನ್ನು ಗಮನಿಸಿದ ಭಾರತದ ಹೆಸರಾಂತ ಮಹೀಂದ್ರ ಕಂಪೆನಿಯ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಹೇಳಿದಂತೆ ವಿಶ್ವದ ಅತಿ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಹಾಗೂ ಎಲೋನ್ ಮಾಸ್ಕ್‌ಗೆ ಕೂಡ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಹುದಾದ ಇಂಧನದ ಕಾರನ್ನು ತಯಾರಿಸಲು ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಟ್ವೀಟ್ ನಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿ ಜಟಕಾ ಬಂಡಿಗಳದೇ ಕಾರುಬಾರು. ಅದರೊಂದಿಗೆ ಎತ್ತಿನಗಾಡಿಗಳೂ ಕಾಣ ಸಿಗುತ್ತದೆ. ಆದರೆ ಧರ್ಮಸ್ಥಳದಲ್ಲಿ ಯಾತ್ರಿಕರಿಗೆ ನೋಡ ಸಿಗೋದು ಮಾತ್ರ ಆಧುನಿಕ ವಿನ್ಯಾಸದೊಂದಿಗೆ ಅತ್ಯಾಕರ್ಷವಾಗಿ ರಚನೆಗೊಂಡ ಗೋವು ವಾಹನಗಳು.
ಗೋವ್‌ಕಾರ್‌ನ್ನು ಹಿಂಬದಿಯಿಂದ ಗಮನಿಸಿದರೆ ಪಕ್ಕನೆ ಗೊತ್ತಾಗುವುದಿಲ್ಲ. ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ಪ್ರಾಯೋಗಿಕವಾಗಿ ಪರಿಸರಸ್ನೇಹಿಯಂತಹ ಕಲ್ಪನೆಯೊಂದಿಗೆ, ಭಾರತೀಯ ಸಂಸ್ಕೃತಿಯಂತೆ ದೇವಾಲಯಗಳಲ್ಲಿ ಪಾವಿತ್ರತೆ ಹೆಚ್ಚಿಸುವ ದೃಷ್ಟಿಯಿಂದಲೂ ಇದನ್ನು ರಚಿಸಲಾಗಿದೆ. ಡಾ. ಹೆಗ್ಗಡೆಯವರ ಕಲ್ಪನೆ, ಮಾರ್ಗದರ್ಶನದಂತೆ ಹರ್ಷೇಂದ್ರ ಕುಮಾರ್ ಅವರ ಸಲಹೆ ಸೂಚನೆಯಂತೆ ಕಾರ್ ಮ್ಯೂಸಿಯಂ ನೋಡಿಕೊಳ್ಳುವ ದಿವಾಕರ್‌ರವರ ತಂಡ ಪರಿಸರಸ್ನೇಹಿ ಗೋವ್ ಗೂಡ್ಸ್ ಹಾಗೂ ಗೋವ್ ಕಾರ್‌ನ್ನು ತಯಾರಿಸಿದೆ. ಇದನ್ನೂ ಓದಿ:ಕೇಕ್ ಕತ್ತರಿಸಿ ಪೂಜೆ ಸಲ್ಲಿಸುವ ಮೂಲಕ ಕರುವಿನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿದ ರೈತ ಗೂಡ್ಸ್ ರಿಕ್ಷಾದ ಮುಂಭಾಗವನ್ನು ತೆಗೆದು ಹಿಂಭಾಗವನ್ನು ಉಳಿಸಿಕೊಂಡು ಗೋವ್ ಗೂಡ್ಸ್ ರಿಕ್ಷಾವನ್ನು ಅನ್ವೇಷಣೆ ಮಾಡಲಾಗಿದೆ. ಯಾವುದೇ ಇಂಧನದ ಅಗತ್ಯವಿಲ್ಲದೆ, ಎತ್ತಿನ ಬಲದಿಂದ ಓಡಾಡುವ ಪರಿಸರ ಸ್ನೇಹಿಯೂ ಹೌದು. ಇದನ್ನೆಳೆಯುವ ಪೊಂಗನೂರು ತಳಿಯ ಬಸವನಿಗೆ ಬಸವಳಿಕೆಯಾಗದಂತೆ ಈ ಪರಿವರ್ತಿತ ಗಾಡಿಗೆ ಆಧುನಿಕ ರಬ್ಬರ್ ಚಕ್ರಗಳು, ಹೈಡ್ರಾಲಿಕ್ ಬ್ರೇಕ್ ಹಾಗೂ ಪಾರ್ಕಿಂಗ್ ಜ್ಯಾಕ್ ಕೂಡ ಅಳವಡಿಸಲಾಗಿದೆ. ಹೀಗಾಗಿ ಎಳೆಯುವ ವೇಳೆ ಎತ್ತಿಗೆ ಅತ್ಯಂತ ಹಗುರ ಅನುಭೂತಿಯಾಗುವ ವಿನ್ಯಾಸ ಈ ಗಾಡಿಯಲ್ಲಿದೆ. ಈಶ್ವರನ ವಾಹನ ನಂದಿ. ಆ ಕಲ್ಪನೆಯಯಲ್ಲಿ ತಯಾರಾದ ಗೋವ್ ಗೂಡ್ಸ್ ದೇವರಿಗೆ ಪೂಜಾ ಸಾಮಾಗ್ರಿಯನ್ನು ಒಯ್ಯುವ ವಾಹನವಾಗಿದೆ. ದಿನನಿತ್ಯದ ಅಗತ್ಯವಾದ ಪೂಜಾ ಸಾಮಾಗ್ರಿಯನ್ನು ಜಮಾ ಉಗ್ರಾಣದಿಂದ ಶ್ರೀಮಂಜುನಾಥಸ್ವಾಮಿಯ ದೇವಳದ ವರೆಗೆ ತರಲು ಬಳಸಲಾಗುತ್ತದೆ. ಗೋವ್ ಕಾರ್
ಗೋವ್ ಕಾರ್‌ನ್ನು ಮಂಗಳೂರಿನಿಂದ ತರಿಸಿದ್ದ ಹಳೆಯ ಅಂಬಾಸೆಡರ್ ಕಾರಿನ ಹಿಂಭಾಗವನ್ನು ಉಳಿಸಿಕೊಂಡು, ಮುಂಭಾಗದಲ್ಲಿ ಗೋವುಗಳಿಗೆ ಎಳೆಯಲು ಸಾಧ್ಯವಾಗುವಂತೆ ರಚನೆ ಮಾಡಲಾಗಿದೆ. ಓಂಗೋಲ್ ತಳಿಯ ಎರಡು ಎತ್ತುಗಳನ್ನು ಉಪಯೋಗಿಸಲಾಗಿದೆ. ಚಕ್ರಗಳಿಗೆ, ವಿಭಿನ್ನ ವಿನ್ಯಾಸದ ವ್ಹೀಲ್ ಕ್ಯಾಪ್ ಹಾಕಲಾಗಿದ್ದು, ವಾಹನ ನಿಲ್ಲಲು ಸಹಾಯವಾಗುವಂತೆ ಬ್ರೇಕನ್ನೂ ಅಳವಡಿಸಲಾಗಿದೆ. ಮಂಜೂಷಾ ಕಾರು ಸಂಗ್ರಹಾಲಯದ ಸಿಬ್ಬಂದಿಗಳು ಮತ್ತು ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಪಾತ್ರ ಇದರಲ್ಲಿದೆ. ಗೋವ್ ಕಾರ್‌ಗೆ ಇನ್ನೊಂದು ದೇಶಿಯ ತಳಿಯಾದ ತೆಲಂಗಾಣದ ಓಂಗೋಲ್ ತಳಿಯನ್ನು ಉಪಯೋಗಿಸಲಾಗಿದೆ. ಇದು ಕೆಲಸದ ಹೋರಿಗಳಾಗಿದ್ದು, ಭಾರವನ್ನು ಹೊರವಷ್ಟು ಗಟ್ಟಿಗ ಜಾತಿಯದ್ದು. ಗೋಶಾಲೆಯಲ್ಲಿ ಇದಕ್ಕೆಂದು ಶೆಡ್ ಮಾಡಲಾಗಿದೆ. ಮೂಲೆಗುಂಪಾಗುತ್ತಿರುವ ವಾಹನಗಳು, ಅಪರೂಪದ ತಳಿಯ ಗೋವುಗಳನ್ನು ಬಳಸಿ ಈ ಸುಂದರ ವಾಹನ ಸೃಷ್ಟಿಗೊಂಡಿದ್ದು, ಎಲ್ಲರ ಆಕರ್ಷಣೆಯ ಕೆಂದ್ರಬಿಂದುವಾಗಿದೆ.