Advertisement
ಕೇಂದ್ರ ಸರಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಈಗಾಗಲೇ ಅನೇಕ ಪ್ರತಿಷ್ಠಿತ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಅದರಲ್ಲಿಯೂ ಎಲೆಕ್ಟ್ರಿಕ್ ಬೈಕ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಬಳಕೆಯ ವಾಹನಗಳಿಗೆ ಹೋಲಿಕೆ ಮಾಡಿದರೆ ನಿರ್ವಹಣೆ ಸುಲಭ.
Related Articles
Advertisement
ರಿಸಲಾ ಎಲೆಕ್ಟ್ರಿಕ್ ಮೋಟಾರ್ ಸಂಸ್ಥೆಯು ಭಾರತದಲ್ಲಿ ಎವೋಲೆಟ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ ಬೈಕ್ ಬಿಡುಗಡೆಗೊಳಿಸಿದ್ದು, ಕೆಲವು ಸಮಯದಲ್ಲಿ ತನ್ನ ಶೋ ರೂಂಗೆ ಬರಲಿದೆ. ಈ ಸ್ಕೂಟರ್‌ನ ಅಂದಾಜು ಮೌಲ್ಯ 40,000 ರೂ. ಇದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 65 ಕಿ.ಮೀ. ಮೈಲೇಜ್ ನೀಡುತ್ತದೆ.
ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇತೀ¤ಚಿನ ದಿನಗಳಲ್ಲಿ ಜಾಗೃತಿ ಮೂಡುತ್ತಿದೆ. ಅದೇ ಕಾರಣಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲು ಆರಂಭಿಸಿದೆ. ಪರಿಸರ ಸ್ನೇಹಿ ವಾಹನ ಇದಾಗಿದೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ಸಲುವಾಗಿ ಸರಕಾರವು ಪ್ರತ್ಯೇಕವಾದ ನೀತಿಯನ್ನು ರೂಪಿಸಬೇಕಿದೆ. ವಿದೇಶಗಳಲ್ಲಿ ವಿದ್ಯುತ್‌ಚಾಲಿತ ವಾಹನಗಳನ್ನು ಹೆಚ್ಚಾಗಿ ಉಪಯೋಗ ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ಇದರ ಬಳಕೆ ಕಡಿಮೆ. ಪರಿಸರ ಸ್ನೇಹಿಯಾಗಿಸುವ ಉದ್ದೇಶದಿಂದ ರಾಜ್ಯದಲ್ಲಿಯೂ ಎಲೆಕ್ಟ್ರಿಕ್ ವಾಹನಗಳು ಬಳಕೆ ಮಾಡಲು ಮತ್ತಷ್ಟು ಪ್ರೋತ್ಸಾಹ ನೀಡಬೇಕಿದೆ.
ಆರ್ವಿರಿವೋಲ್ಟ್ ಮೋಟಾರ್ಸ್ ಆರ್‌ವಿ ಎಲೆಕ್ಟ್ರಿಕ್ ಬೈಕ್ ಅನ್ನು ದೇಶೀಯ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿತ್ತು. ಸದ್ಯ ಈ ಬೈಕ್ ಬೆಲೆಯನ್ನು ಅನಾವರಣಗೊಳಿಸಲಿಲ್ಲ. ಬೈಕಿನ ಮುಂಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗ್ಳ ಜೊತೆಗೆ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ. ಬೈಕ್‌ನ ಮುಂಭಾಗ ಅಪ್‌ಸೆçಡ್ ಡೌನ್ ಫೋರ್ಕ್ ಗಮನಸೆಳೆಯುತ್ತದೆ. ಇನ್ನು, ಈ ಬೈಕ್ ಸಂಪೂರ್ಣ ಎಲೆಕ್ಟ್ರಿಕ್ ಆಗಿದ್ದು, ಕೀ ಲೆಸ್ ಆಗಿದೆ. ಕೀ ಹಾಕುವ ಜಾಗದಲ್ಲಿ ಪವರ್ ಬಟನ್ ಅನ್ನು ನೀಡಲಾಗಿದ್ದು, ಇದನ್ನು ರಿವೋಲ್ಟ್ನ ಸ್ಮಾರ್ಟ್ ಫೋನ್ ಆ್ಯಪ್ ನಿಯಂತ್ರಿಸುತ್ತದೆ. ಹಾರ್ಲೆ ಡೇವಿಡ್ಸನ್
ಹಾರ್ಲೆ ಡೇವಿಡ್ಸನ್ ಬೈಕ್ ದುಬಾರಿ ಮೌಲ್ಯವನ್ನು ಹೊಂದಿದ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ. 4.3 ಟಚ್ ಸ್ಕ್ರೀನ್ ಹೊಂದಿದ್ದು, 103.5 ಬಿಎಚ್‌ಪಿ ಪವರ್ ಹಾಗೂ 116 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 225 ಕಿ.ಮೀ. ಮೈಲೇಜ್ ರೇಂಜ್ ಇದ್ದು, ಸಾಮಾನ್ಯ ಚಾರ್ಜರ್ ಮೂಲಕ ಚಾರ್ಜ್ ಮಾಡುವುದಾದರೆ 12 ಗಂಟೆಗಳ ಸಮಯ ತೆಗೆದುಕೊಳ್ಳಲಿದೆ. ಡಿಸಿ ಫಾಸ್ಟ್ ಚಾರ್ಜಿಂಗ್‌ನಲ್ಲಿ 60 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಹೀರೋ
ಹೀರೋ ಸಂಸ್ಥೆಯು ಹೊಸ ಎರಡು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಪ್ಟಿಮಾ ಇಆರ್ ಮತ್ತು ಎನ್‌ವೈಎಕ್ಸ್ ಇಆರ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಆಪ್ಟಿಮಾ ಇಆರ್ ಸ್ಕೂಟರ್ ಬೆಲೆ 68,721 ರೂ. ಆಗಿದ್ದು, ಎನ್‌ವೈಎಕ್ಸ್ ಇಆರ್ ಸ್ಕೂಟರ್ ಬೆಲೆ 69,754 ರೂ. ಆಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. - ನವೀನ್ ಭಟ್ ಇಳಂತಿಲ