Advertisement

ಪರಿಸರಸ್ನೇಹಿ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌

10:19 AM Jun 17, 2019 | keerthan |

ಮಂಗಳೂರು: ಹೆಚ್ಚುತ್ತಿರುವ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಸುಮಾರು 330 ಎಕ್ರೆ ಜಾಗದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಯಾವುದೇ ವಾಹನ ಸಂಚರಿಸಲು ಆವಕಾಶ ನೀಡದೆ ಕೇವಲ ಬ್ಯಾಟರಿ ಚಾಲಿತ ಬಗ್ಗಿಸ್‌ಗಳನ್ನು ಬಳಸಿ ಪರಿಸರ ಸ್ನೇಹಿಯನ್ನಾಗಿಸಲು ವಿವಿಯ ನೂತನ ಉಪಕುಲಪತಿ ಪ್ರೊ| ಪಿ.ಎಸ್‌. ಎಡಿಪಡಿತ್ತಾಯ ಚಿಂತನೆ ನಡೆಸಿದ್ದಾರೆ.

Advertisement

ಅದಕ್ಕಾಗಿ ಹಂತ ಹಂತವಾಗಿ ಯೋಜನೆ ರೂಪುಗೊಳ್ಳುತ್ತಿದ್ದು, ವಿವಿ ಸಿಂಡಿಕೇಟ್‌ ಸದಸ್ಯರ ಒಪ್ಪಿಗೆ, ಅನುದಾನ ಮಂಜೂರಾದರೆ ಶೀಘ್ರದಲ್ಲಿಯೇ ವಿವಿ ಕ್ಯಾಂಪಸ್‌ ಇಕೋ ಫ್ರೆಂಡ್ಲಿ ಕ್ಯಾಂಪಸ್‌ ಆಗಲಿದೆ.

ಅಲ್ಲದೆ ವಿವಿ ಕ್ಯಾಂಪಸ್‌ನ ವಿವಿಧ ವಿಭಾಗ ಸೇರಿದಂತೆ ವಿದ್ಯಾರ್ಥಿ ನಿಲಯ, ಅತಿಥಿ ಗೃಹ, ಲ್ಯಾಬ್‌ಗಳಲ್ಲಿ ಬಳಸಲಾಗುತ್ತಿರುವ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ವೇಸ್ಟ್‌ ವಾಟರ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌ ರಚಿಸಲು ನೂತನ ಉಪಕುಲಪತಿಗಳು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ 5 ಕೋಟಿ ರೂ. ಅಂದಾಜು ಪಟ್ಟಿ ರಚಿಸಲಾಗಿದ್ದು, ಯೋಜನೆ ಸಿದ್ಧಗೊಂಡಿದೆ. ಜೂ.19ರಂದು ನಡೆಯುವ ಸಿಂಡಿಕೇಟ್‌ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next