Advertisement
ಇದು ಕೇವಲ ಹೊಸದಿಲ್ಲಿಯ ಮಾತಲ್ಲ ಇದು ದೇಶದ ಎಲ್ಲ ಪ್ರಮುಖ ನಗರಗಳ ಕಥೆಯೂ ಇದೆ. ಮುಂಬಯಿ, ಚೆನ್ನೈ, ಕೊಲ್ಕತ್ತಾ ಸಹಿತ ಬೆಂಗಳೂರು ನಗರವೂ ಕೂಡ ಮಾಲಿನ್ಯದ ಸಮಸ್ಯೆಯನ್ನು ಆಗಾಗ ಎದುರಿಸುತ್ತವೆ. ಈಗ ಸಾಲಿನಲ್ಲಿ ಬೆಳಯುತ್ತಿರುವ ಕಡಲ ನಗರಿಯಾದ ಮಂಗಳೂರು ಕೂಡ ಸೇರ್ಪಡೆಯಾಗುತ್ತಿದೆ. ಹೀಗಾಗಿ ಸಂಚಾರ ವ್ಯವಸ್ಥೆಯಲ್ಲಿ ಹಲವು ತಾಂತ್ರಿಕ ಬದಲಾವಣೆಯನ್ನು ಕಾಣುತ್ತಿರುವ ಅದನ್ನು ಸುಸ್ಥಿರ ಬದುಕಿಗೆ ಅನ್ವಯಿಸುತ್ತಿಲ್ಲ. ಪರಿಸರ ಸ್ನೇಹಿ ಪೂರಕ ಕ್ರಮಗಳನ್ನು ಕೂಡ ನಾವು ಅನ್ವಯಿಸುತ್ತಿಲ್ಲ . ಹೀಗಾಗಿ ಈ ಸಮಸ್ಯೆ ನಮ್ಮನ್ನು ಕಾಡುತ್ತಿದೆ.
ಹಾಲೆಂಡ್‌ನ ನಗರದಲ್ಲಿ ನಿರ್ಮಾಣವಾಗಿರುವ ಪರಿಸರ ಸ್ನೇಹಿ ಬಸ್‌ಸ್ಟಾಂಡ್‌ನ ಮೇಲೆ ಸುಮಾರು 316 ವಿಧವಿಧವಾದ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಹೆಚ್ಚು ಹೂವಿನ ಗಿಡಗಳನ್ನೇ ಬೆಳೆಸಲಾಗಿದೆ. ಈ ಹೂವಿನ ಗಿಡದಲ್ಲಿ ಜೇನು ಹುಳುಗಳು ಕೂಡ ವಾಸಿಸುತ್ತಿವೆ. ಬಸ್ ಸ್ಟಾಂಡಿನಲ್ಲಿ ಗಿಡಗಳನ್ನು ಬೆಳೆಸಿದ್ದರಿದ ಮಳೆ ನೀರನ್ನು ಸಂಗ್ರಹಿಸಲು ಕೂಡ ಇದು ಸಹಾಯ ಮಾಡುತ್ತದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಓಡಾಡುವ ಕಾರ್ಮಿಕರು ಈ ಚಾವಣಿಗಳನ್ನು ನೋಡಿಕೊಳ್ಳುತ್ತಾರೆ. ಈ ಬಸ್ ನಿಲ್ದಾಣದಲ್ಲಿ ಸಮರ್ಥ ಎಲ್‌ಇಡಿ ದೀಪಗಳು ಮತ್ತು ಬಿದಿರಿನ ಬೆಂಚುಗಳನ್ನು ಕೂಡ ಅಳವಡಿಸಲಾಗಿದೆ. ಈ ಬಸ್ ಸ್ಟಾಂಡ್ ಆಕರ್ಷಣೆಯ ಹೊರತಾಗಿ ರಸ್ತೆಯಲ್ಲಿ ಉಂಟಾಗುವ ಧೂಳನ್ನು ಕೂಡ ಸೆರೆ ಹಿಡಿಯುತ್ತದೆ. ಹಾಗೂ ನಗರದಲ್ಲಿ ಶುದ್ಧ ಗಾಳಿಯನ್ನು ನೀಡಲು ಕೂಡ ಅನುಕೂಲವಾಗಿದೆ.
Related Articles
Advertisement
ಮಂಗಳೂರಿಗೆ ಬರಲಿಈ ರೀತಿಯ ಮಾದರಿ ಕ್ರಮಗಳಿಂದ ಕೂಡಿರುವ ಬಸ್ ನಿಲ್ದಾಣ ನಮ್ಮ ನಗರಕ್ಕೂ ಬರಲಿ ಎಂಬ ಬೇಡಿಕೆ ನಮ್ಮಲ್ಲೂ ಇದ್ದು, ಹೀಗಾಗಿ ಆಡಳಿತ ವ್ಯವಸ್ಥೆಯೂ ಕೂಡ ಈ ಮಾದರಿ ಕ್ರಮವನ್ನು ಬೆಳೆಯುತ್ತಿರುವ ಸ್ಮಾರ್ಟ್ ಸಿಟಿ ಮಂಗಳೂರಿಗೂ ಬರುವಂತೆ ಆಸ್ಥೆ ವಹಿಸಬೇಕಿದೆ. ಮಾದರಿ ಬಸ್ ಸ್ಟ್ಯಾಂಡ್
ಪ್ರಯಾಣಿ ಸ್ನೇಹಿ ಪೂರಕವಾಗಿ ಮೊದಲಿಗೆ ಬಸ್‌ಸ್ಟಾಂಡ್‌ಗಳು ಪರಿಸರ ಸ್ನೇಹಿಯಾಗಿದ್ದರೆ ಮಾಲಿನ್ಯ ನಿಯಂತ್ರಿಸಬಹುದು ಎಂಬ ಮೂಲ ಮಂತ್ರವನ್ನು ಅರಿತ ನೆದರಲ್ಯಾಂಡ್ ದೇಶವೂ ಬಸ್‌ಸ್ಟಾಂಡ್‌ಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಅದರ ಮೇಲೆ ಬಗೆ ಬಗೆಯ ಗಿಡ-ಸಸಿಗಳನ್ನು ಬೆಳೆಸಲಾಗಿದೆ. ಇದರಿಂದ ವಾಯು ಮಾಲಿನ್ಯವನ್ನುವಾಗುವುದನ್ನು ತಡೆಯಬಹುದುಎಂದು ಅಲ್ಲಿನ ಸ್ಥಳೀಯ ಆಡಳಿತ ತಿಳಿಸಿದೆ. ನೆದರ್‌ಲ್ಯಾಂಡ್ ದೇಶದ ಪ್ರಮುಖ ನಗರದ ಬಸ್‌ಸ್ಟಾಂಡ್‌ನಲ್ಲಿ ಮಾದರಿ ಯೋಜನೆ ಅಳವಡಿಸಲಾಗಿದೆ. - ಪೂರ್ಣಿಮಾ ಪೆರ್ಣಂಕಿಲ