Advertisement

ಪರಿಸರ ದಿನಾಚರಣೆ: 80 ಸಸಿ ನೆಟ್ಟ ಯುವಕರು

11:12 AM Jun 10, 2019 | Team Udayavani |

ಬೇತಮಂಗಲ: ಹೋಬಳಿ ವ್ಯಾಪ್ತಿಯ ಹುಲ್ಕೂರು ಯುವಕರು ಮತ್ತು ಗ್ರಾಮಸ್ಥರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದ ಮುಖ್ಯದ್ವಾರದವರೆಗೂ ಸಸಿ ನೆಟ್ಟರು.

Advertisement

ಬಂಗಾರು ತಿರುಪತಿ ದೇಗುಲದಿಂದ 1 ಕಿ.ಮೀ ದೂರದಲ್ಲಿರುವ ಗ್ರಾಮವು ಇತರರಿಗೆ ಮಾದರಿಯಾಗಬೇಕೆಂಬ ದೂರ ದೃಷ್ಟಿಯಿಂದ ಗ್ರಾಮದ ರಸ್ತೆಯ ಎರಡೂ ಬದಿಯಲ್ಲಿ ಸಸಿ ನೆಡಲಾಯಿತು ಎಂದು ಯುವಕರು ಹೇಳಿದರು.

ಮೊದಲ ಬಾರಿಗೆ ಸಸಿಗಳ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಪರಿಸರ ಬೆಳೆಸಿ-ಉಳಿಸಲು ಮುಂದಾಗಿದ್ದೇವೆ. ಗಿಡಮರ ಬೆಳೆಸುವುದರಿಂದ ಉತ್ತಮ ವಾತಾವರಣ ನಿರ್ಮಾಣಗೊಂಡು, ಮಳೆ-ಬೆಳೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹುಲ್ಕೂರು ಗ್ರಾಮದಲ್ಲಿ 80 ಸಸಿ ನೆಡುವ ಉದ್ದೇಶ ಹೊಂದಿದ್ದು, ಸುತ್ತಲೂ ಬೇಲಿ ನಿರ್ಮಿಸಿ ಮರಗಳಾಗಿ ಬೆಳೆಸಲು ಪಣತೋಡುವುದಾಗಿ ತಿಳಿಸಿದರು. ಯುವಕರಾದ ಪುರುಷೋತ್ತಮ್‌, ಶ್ರೀಕಾಂತ್‌, ಹರೀಶ್‌, ಗೋಪಾಲ್, ಸುರೇಶ್‌, ಧಮೇಂದ್ರ, ಅಮರೇಶ್‌, ವೇಣುಗೌಡ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next