Advertisement

ಸೌರ ಕನ್ನಡಕದಲ್ಲಿ ಗ್ರಹಣ ವೀಕ್ಷಣೆ

05:48 AM Jun 22, 2020 | Lakshmi GovindaRaj |

ಮಂಡ್ಯ: ನಗರದ ಕಾವೇರಿ ಬಡಾವಣೆಯಲ್ಲಿರುವ ನಂದಿ ಉದ್ಯಾನವನದಲ್ಲಿ ಜಿಲ್ಲಾ ವಿಜ್ಞಾನ ವೇದಿಕೆಯಿಂದ ಸೂರ್ಯ ಗ್ರಹಣ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರ್ವಜನಿಕರು ಹಾಗೂ ಮಕ್ಕಳು ಸೋಲಾರ್‌ ಕನ್ನಡಕದ ಮೂಲಕ ಗ್ರಹಣ ವೀಕ್ಷಿಸಿ ಕುತೂಹಲವನ್ನು ತಣಿಸಿಕೊಂಡರು. ವಿಜ್ಞಾನ ಸಂಪನ್ಮೂಲ ವ್ಯಕ್ತಿ ಡಾ.ಜಿ.ಪಿ.ಶಿವಶಂಕರ್‌ ಮಾತನಾಡಿದರು.

Advertisement

8 ತಿಂಗಳಲ್ಲಿ ಎರಡನೇ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡುತ್ತಿದ್ದೇವೆ. 2020ರ ಮೊದಲ ಸೂರ್ಯ ಗ್ರಹಣವನ್ನು ನಾವು ವೀಕ್ಷಣೆ ಮಾಡಿದ್ದೇವೆ. ರಾಹು ಮತ್ತು ಕೇತು ಎನ್ನುವಂತಹವು ಎರಡು ಛೇಧನ ಬಿಂದುಗಳು ಮತ್ತು ಇವು ಕಾಲ್ಪನಿಕ ಬಿಂದುಗಳು. ಸೂರ್ಯ ಪಥ ಮತ್ತು ಚಂದ್ರನಪಥ ಎರಡು ಛೇಧಿಸುತ್ತೆ. ಸೂರ್ಯನ ಸುತ್ತ ಭೂಮಿ 23  ಡಿಗ್ರಿಯಾಗಿ ಓರೆಯಾಗಿಸುತ್ತಿದರೆ, ಭೂಮಿಯ ಸುತ್ತ ಚಂದ್ರ 5 ಡಿಗ್ರಿ ಓರೆಯಾಗಿ ಸುತ್ತುತ್ತಾನೆ.

ಈ ಎರಡೂ ಕೋನಗಳು ವ್ಯತ್ಯಾಸವಾದ್ದ ರಿಂದ ಈ ಎರಡೂ ಛೇಧನ ಬಿಂದುಗಳನ್ನು ರಾಹು ಮತ್ತು ಕೇತು ಎಂದು ಕರೆಯುತ್ತಾರೆ ಎಂದರು. ಡಿಸೆಂಬರ್‌ನಲ್ಲಿ ಕೇತು ಬಿಂದುವಿನಲ್ಲಿ ಭೂಮಿ, ಸೂರ್ಯ, ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಿದ್ದವು. ಈಗ ರಾಹು ಬಿಂದುವಿನಲ್ಲಿ ಈ ಮೂರೂ ಒಂದೇ ಸರಳ ರೇಖೆ ಯಲ್ಲಿ ಬಂದಿರುವುರಿಂದ ಸೂರ್ಯಗ್ರಹಣವಾಗುತ್ತಿದೆ.

ಭೂಮಿ  ಮತ್ತು ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಇದು ಅಮಾವಾಸ್ಯೆ ದಿನವೇ ಸಂಭವಿಸುತ್ತ ದೆ ಎಂದು ವಿವರಿಸಿದರು. ಪಿಇಟಿ ಟ್ರಸ್ಟ್‌ ನಿರ್ದೇಶಕ ಡಾ.ರಾಮಲಿಂಗಯ್ಯ ಮಾತ ನಾಡಿ, ಗ್ರಹಣ ವೀಕ್ಷಣೆ ಬಗ್ಗೆ  ಜನರಲ್ಲಿರುವ ಮೌಡ್ಯವನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು. ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್‌, ನಂಜರಾಜು, ವಕೀಲ ಬಿ.ಟಿ.ವಿಶ್ವನಾಥ್‌, ಜಗದೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next