Advertisement

ಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ

12:03 PM Jul 25, 2018 | |

ಬೆಂಗಳೂರು: ಜು. 27, 28ರಂದು ಆಷಾಢದ ಕೇತುಗ್ರಸ್ತ ಚಂದ್ರಗ್ರಹಣ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ರೀತಿಯ ಪೂಜಾ- ಕೈಂಕರ್ಯ ಕೈಗೊಳ್ಳಲು ದೇವಾಲಯಗಳು ಸಜ್ಜಾಗಿವೆ. ಈಗಾಗಲೇ ಭಕ್ತರು, ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರು ದೇಗುಲಗಳ ಮೊರೆ ಹೋಗಿದ್ದು, ಶಾಂತಿ ಕರ್ಮಗಳನ್ನು ನಡೆಸಲು ಮುಂದಾಗಿದ್ದಾರೆ.

Advertisement

ದೇಗುಲಗಳ ಗೋಡೆಯ ಮೇಲೆ ಗ್ರಹಣ ಹಿಡಿಯುವ ಸಮಯ, ರಾಶಿ ಮತ್ತು ಗ್ರಹಣ ನಂತರ ನಡೆಯುವ ಧಾರ್ಮಿಕ ಕೈಂಕರ್ಯ ಬಗ್ಗೆ ಮಾಹಿತಿ ನೀಡುವ ಫ‌ಲಕಗಳನ್ನು ಹಾಕಲಾಗಿದೆ. ಜತೆಗೆ ಗ್ರಹಣದ ಹಿನ್ನೆಲೆಯಲ್ಲಿ ಶನಿವಾರ ವಿಶೇಷ ಪೂಜೆಗಳು ನಡೆಯಲಿದ್ದು,

ಪೂಜೆಯ ಬಗ್ಗೆ ಭಕ್ತರಿಗೆ ಮಾಹಿತಿ ನೀಡುವ ಪೂಜಾ ಮಾಹಿತಿಯನ್ನು ಹಾಕಲಾಗಿದೆ. ಇದರಲ್ಲಿ ಗ್ರಹಣ ಪೂಜಾ ವಿಶೇಷತೆ ಮತ್ತು ಯಾವ ರೀತಿಯ ಶಾಂತಿ ಪೂಜೆಗಳು ನಡೆಯಲಿವೆ. ಬೇಕಾದ ಖರ್ಚು ವೆಚ್ಚಗಳ ಬಗ್ಗೆ ಕಿರು ಮಾಹಿತಿ ನೀಡಲಾಗಿದೆ.

 ಮಂಗಳವಾರ ಬನಶಂಕರಿ ದೇವಾಲಯ, ದೇವಗಿರಿಯ ಶ್ರೀವರಪ್ರದ ವೆಂಕಟೇಶ್ವರ ದೇವಾಲಯ, ಶಾಸ್ತ್ರೀನಗರದ ಶ್ರೀಬಾಲಾಂಬಿಕಾ ದೇವಸ್ಥಾನ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ಭಕ್ತರು, ಪೂಜಾ ವಿಧಿ -ವಿಧಾನಗಳ ಬಗ್ಗೆ ಮತ್ತು ಗ್ರಹಣದ ದೋಷ ಪರಿಹಾರದ ಬಗ್ಗೆ ಅರ್ಚಕರಿಂದ ವಿವರ ಪಡೆಯುತ್ತಿದ್ದುದ್ದು ಕಂಡು ಬಂತು.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಕೂಡ ಚಂದ್ರ ಗ್ರಹಣದ ಅಂಗವಾಗಿ ಮಲ್ಲೇಶ್ವರದಲ್ಲಿರುವ ಇತಿಹಾಸ ಪ್ರಸಿದ್ಧ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Advertisement

ದರ್ಶನ ಇರುವುದಿಲ್ಲ: ಗ್ರಹಣದ ಹಿನ್ನೆಲೆಯಲ್ಲಿ ಜು.27ರ ಮಧ್ಯಾಹ್ನ 3ರಿಂದ ಬನಶಂಕರಿ ದೇವಾಲಯದಲ್ಲಿ ಭಕ್ತರಿಗೆ ದರ್ಶನ ಇರುವುದಿಲ್ಲ. ಜು.28ರ ಮುಂಜಾನೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಿದ್ದು, ಬೆಳಗ್ಗೆ 5.30ಕ್ಕೆ ಅಭಿಷೇಕ ಆರಂಭವಾಗಲಿದೆ.

ಬಳಿಕ ಬನಶಂಕರಿ ಅಮ್ಮನವರಿಗೆ ವಿವಿಧ ರೀತಿಯ ಅಲಂಕಾರ ನಡೆಯಲಿವೆ. ಬೆಳಗ್ಗೆ 10 ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ನೆರವೇರಲಿದ್ದು, ಬಳಿಕ ಎಂದಿನಂತೆ ಪೂಜಾ ವಿಧಾನಗಳು ಜರುಗಲಿವೆ ಎಂದು ದೇವಾಲಯದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

ಗ್ರಹಣದ ವಿವರ 
ಗ್ರಹಣಕಾಲ  ದಿನಾಂಕ    ಗಂಟೆ,ನಿಮಿಷ
ಸ್ಪರ್ಶಕಾಲ:    27-07-18    ರಾತ್ರಿ 11-54 
ನಿಮೀಲನ ಕಾಲ:    27/28   -07-18    ರಾತ್ರಿ 01-00
ಮಧ್ಯಕಾಲ:    27/28-07-18    ರಾತ್ರಿ 01-51
ಉನಿಲಯ ಕಾಲ:    27/28-07-18    ರಾತ್ರಿ 02-44
ಮೋಕ್ಷಕಾಲ:    27/28-07-18    ರಾತ್ರಿ 03-49
 
ಭಯಪಡುವ ಅಗತ್ಯವಿಲ್ಲ: ಗ್ರಹಣ ಎಂದ ಕೂಡಲೇ ಕೆಲವು ಭಯಪಡುತ್ತಾರೆ. ಆದರೆ, ಈ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ. ಗ್ರಹಣದ ದಿನದಂದು ನವಗ್ರಹ ಸ್ತೋತ್ರ ಪಠಣ ಮಾಡಿದರೆ ಸಾಕು. ಎಂದು ದೇವಗಿರಿಯ ಶ್ರೀವರಪ್ರದ ವೆಂಕಟೇಶ್ವರ ದೇವಾಲದ ಮುಖ್ಯ ಅರ್ಚಕರಾದ ಕೃಷ್ಣಯ್ಯ ತಿಳಿಸಿದರು.

ಗ್ರಹಣ ಸಂಭವಿಸುವ ಶುಕ್ರವಾರ ಮಧ್ಯಾಹ್ನ 12.30ರ ವರೆಗೆ ಶಕ್ತರು ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು ಮತ್ತು ಅಶಕ್ತರು ಮಧ್ಯಾಹ್ನ 3.30ರ ವರೆಗೆ ಭೋಜನ ಸ್ವೀಕರಿಸಬಹುದು.
-ಸತ್ಯನಾರಾಯಣ, ಬನಶಂಕರಿ ದೇವಾಲಯದ ಪ್ರಧಾನ ಅರ್ಚಕರು.

Advertisement

Udayavani is now on Telegram. Click here to join our channel and stay updated with the latest news.

Next