Advertisement
ಆದೇಶ: ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ವರದಿಗಳ ಅನ್ವಯ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿ ಸಂರಕ್ಷಣೆ ಮತ್ತು ಒತ್ತುವರಿ ಜಮೀನು ತೆರವಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್ 2013ರ ಮೇ.27 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.
Related Articles
Advertisement
ಕೆಲವು ಕೆರೆಗಳನ್ನು ಸರ್ವೇ ಮಾಡಿದ್ದರೂ ತೆರವು ಕಾರ್ಯಾಚರಣೆ ಮಾಡದ ಕಾರಣ ಕೆ.ಬೈಯಪಲ್ಲಿ ಕೆರೆ, ಸಂಗಸಂದ್ರ ಕೆರೆ, ನಂಗಲಿ, ಮಿಂಡಹಳ್ಳಿ ಕೆರೆ, ಕಪ್ಪಲಮಡಗು, ಸೇರಿ ದೇವರಾಯಸಮುದ್ರ ದೊಡ್ಡ ಕೆರೆ ಹಲವಾರು ಕೆರೆಗಳ ಸಾಕಷ್ಟು ಜಮೀನು ಒತ್ತುವರಿಯಾಗಿದೆ. ಅದರಲ್ಲೂ ಶ್ಯಾಮಯ್ಯನೂರು ಕೆರೆಯಲ್ಲಂತೂ 20-30ಎಕರೆ ಜಮೀನು ಒತ್ತುವರಿಯಾಗಿ ಅಕ್ರಮ ಮರಳು ಗಣಿಗಾರಿಕೆ ಕೇಂದ್ರವಾಗಿದೆ.
ಆದರೂ ಒತ್ತುವರಿ ತೆರವು ಕಾರ್ಯಾಚರಣೆಗೆ 4 ವರ್ಷದಿಂದ ಗ್ರಹಣ ಹಿಡಿದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ 2016ರ ಮಾರ್ಚ್‌ನಲ್ಲಿ ತಹಶೀಲ್ದಾರ್ ಎಂ.ಗಂಗಪ್ಪ ವರ್ಗಾವಣೆಯಾದ ನಂತರ ತಹಶೀಲ್ದಾರ್ ಆಗಿ ಬಂದ ಬಿ.ಎನ್.ಪ್ರವೀಣ್ ತಕ್ಕಮಟ್ಟಿಗೆ ಕೆಲ ಕೆರೆಗಳನ್ನು ತೆರವುಗೊಳಿಸಿ ಹೋಗಿದ್ದರು.
ಆ ನಂತರ ತಹಶೀಲ್ದಾರ್ ಕಾಂತವೀರಯ್ಯ ಆಗಲೀ ಅಥವಾ ಸೋಮಶೇಖರಯ್ಯ ಅವರಾಗಲೀ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಗಮನಹರಿಸಲಿಲ್ಲ. ಉಳಿದ ಕೆರೆ ಮತ್ತು ಒತ್ತುವರಿ ತೆರವು ಕಾಯಾಚರಣೆ ಸ್ಥಗಿತಗೊಂಡಿದೆ. ಇದರಿಂದ ಕೆರೆ ಮತ್ತಿತರ ಸರ್ಕಾರಿ ಜಮೀನುಗಳಲ್ಲಿ ಮತ್ತಷ್ಟು ಒತ್ತುವರಿ ನಡೆಯುತ್ತಿರುವುದರಿಂದ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆರೆಗಳ ಒತ್ತುವರಿ ತೆರವುಗೊಳಿಸಿ: ಮುಳಬಾಗಿಲು ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳು ಬಹುತೇಕ ಕೆರೆಗಳನ್ನು ಸರ್ವೇ ಮಾಡಿಸಿದ್ದರೂ ಅವುಗಳಿಗೆ ಆಗಲೇ ಕಾಲುವೆ ತೋಡಿ ಪೆನ್ಸಿಂಗ್ ಹಾಕದೇ ಬಿಟ್ಟಿದ್ದರು. ಅಲ್ಲದೇ, ಉಳಿದಿರುವ ಕೆರೆಗಳನ್ನು ಸರ್ವೇ ಮಾಡಿಸದೇ ಬಿಟ್ಟಿರುವ ಕಾರಣ ಬಹುತೇಕ ಕೆರೆಗಳಲ್ಲಿನ ಸಾಕಷ್ಟು ಜಮೀನು ಒತ್ತುವರಿಯಾಗಿದೆ. ತಾಲೂಕು ಆಡಳಿತ ಶೀಘ್ರ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕೆಂದು ಮುಖಂಡ ಗಣೇಶಪಾಳ್ಯ ಕೃಷ್ಣ ಒತ್ತಾಯಿಸಿದ್ದಾರೆ.
* ಎಂ.ನಾಗರಾಜಯ್ಯ