ಲಂಡನ್: ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಗುರುವಾರ ಶೇ.0.5 ಬಡ್ಡಿದರ ಏರಿಕೆ ಮಾಡಿದೆ. ಇದರಿಂದಾಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬಡ್ಡಿ ದರ ಶೇ.4ಕ್ಕೆ ಏರಿಕೆಯಾದಂತೆ ಆಗಿದೆ.
ಈ ಮೂಲಕ ಸತತ 10ನೇ ಬಾರಿಗೆ ಬಡ್ಡಿದರ ಹೆಚ್ಚಳವಾಗಿದೆ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಹೇಳಿಕೊಂಡಿದೆ. ಜತೆಗೆ ಹಣದುಬ್ಬರ ಪ್ರಮಾಣ ಗರಿಷ್ಠ ಏರಿಕೆಯ ಪ್ರಮಾಣಕ್ಕೆ ತಲುಪಲಿದೆ.
ಮುಂದಿನ ದಿನಗಳಲ್ಲಿ ಅದು ನಿಧಾನವಾಗಿ ಇಳಿಕೆಯಾಗಲಿದೆ ಎಂದು ತಿಳಿಸಿದೆ. ಮತ್ತೂಂದೆಡೆ, ಅಮೆರಿಕದ ಫೆಡರಲ್ ರಿಸರ್ವ್ ಕೂಡ ಬಡ್ಡಿ ದರವನ್ನು ಶೇ.0.25 ಏರಿಕೆ ಮಾಡಿದೆ. ಹೀಗಾಗಿ, ಈಗ ಬಡ್ಡಿ ದರ ಶೇ.4.75 ಆಗಿದೆ. 2007 ಅಕ್ಟೋಬರ್ ಬಳಿಕ ಇದು ಗರಿಷ್ಠ ಬಡ್ಡಿ ದರ ಏರಿಕೆ¿