Advertisement

ವರ್ಚುವಲ್‌ ರ‍್ಯಾಲಿಗೆ ಆದ್ಯತೆ ನೀಡಿ: ಬಂಗಾಳದ ಸರ್ವಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ

11:16 PM Apr 16, 2021 | Team Udayavani |

ಕೋಲ್ಕತ್ತಾ: ಬಾಕಿ ಇರುವ 3 ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಆದಷ್ಟು ವರ್ಚುವಲ್‌ ರ‍್ಯಾಲಿಗಳಿಗೆ ಆದ್ಯತೆ ನೀಡುವಂತೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ.

Advertisement

ಆಯೋಗ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ಕರೆಯಲಾಗಿತ್ತು. ವರ್ಚುವಲ್‌ ಮೂಲಕ ರಾಜಕೀಯ ನಾಯಕರು ಭಾಷಣದಲ್ಲಿ ಪಾಲ್ಗೊಳ್ಳುವುದರಿಂದ ಬೃಹತ್‌ ಸಮಾವೇಶಗಳನ್ನು ತಪ್ಪಿಸಬಹುದು. ಇದು ಕೊರೊನಾ ಪ್ರಸರಣವನ್ನೂ ನಿಯಂತ್ರಿಸುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೆ, ಮತದಾನಕ್ಕಿಂತ 72 ಗಂಟೆ ಮುಂಚೆ ಬಹಿರಂಗ ಪ್ರಚಾರಕ್ಕೆ ಕಡ್ಡಾಯವಾಗಿ ತೆರೆ ಎಳೆಯಲೂ ಸೂಚಿಸಿದೆ.

ಆಯೋಗದ ನಿಲುವನ್ನು ಬಿಜೆಪಿ ಸ್ವಾಗತಿಸಿದೆ. ಇದೇ ವೇಳೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, “ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಿರುವ ಗುಜರಾತ್‌ ನಂಥ ರಾಜ್ಯಗಳಿಂದ ಔಟ್‌ ಸೈಡರ್‌ ಪ್ರಚಾರಕರು ಇಲ್ಲಿಗೆ ಬಂದು ಸೋಂಕು ಹಬ್ಬಿಸುತ್ತಿದ್ದಾರೆ. ಇಂಥ ಔಟ್‌ ಸೈಡರ್‌ ಗಳಿಗೆ ನಿರ್ಬಂಧ ವಿಧಿಸಬೇಕು’ ಎಂದು ಸಲಹೆ ನೀಡಿದರು.

ಇದನ್ನೂ ಓದಿ :ಅಮೆರಿಕದಲ್ಲಿ ಶೂಟೌಟ್‌: ಭಾರತೀಯ ಮಹಿಳೆ ಸೇರಿ ಎಂಟು ಮಂದಿ ಸಾವು

ಇಂದು 5ನೇ ಹಂತ: ಶುಕ್ರವಾರದ 5ನೇ ಹಂತದಲ್ಲಿ 45 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 1.13 ಕೋಟಿ ಮತದಾರರು 342 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಉತ್ತರ 24 ಪರಗಣಾಸ್‌, ಪೂರ್ವ ವರ್ಧಮಾನ್‌, ನಾದಿಯಾ, ಜಲ್ಪೆಗುರಿ, ಡಾರ್ಜೀಲಿಂಗ್‌, ಕಲೀಂಪಾಂಗ್‌ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

Advertisement

ಶಾ ರೋಡ್‌ ಶೋ: ಬರಕು³ರ, ಕೃಷ್ಣನಗರ ಉತ್ತರ ಕ್ಷೇತ್ರ ಸೇರಿದಂತೆ ವಿವಿಧೆಡೆ ಶುಕ್ರವಾರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಪರವಾಗಿ ರೋಡ್‌ ಶೋ ನಡೆಸಿದರು.

ಇನ್ನೊಂದೆಡೆ, “ಸಿತಾಲ್ಕುಚಿಯಲ್ಲಿ ನಮ್ಮ ಆಟ ತೋರಿಸಿದ್ದೇವೆ. ನಾಲ್ವರಿಗೆ ಸ್ವರ್ಗದ ದಾರಿ ತೋರಿಸಿದ್ದೇವೆ’ ಎಂದು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಸಯಾಂತನು ಬಸು ಅವರಿಗೆ ಚುನಾವಣಾ ಆಯೋಗ 24 ಗಂಟೆ ಮತಪ್ರಚಾರದಿಂದ ದೂರ ಉಳಿಯುವಂತೆ ನಿಷೇಧ ವಿಧಿಸಿದೆ.

ಮಮತಾ ವಿರುದ್ಧ ಎಫ್ಐಆರ್‌
ಕೇಂದ್ರ ಪಡೆಗಳಿಗೆ ಘೇರಾವ್‌ ಹಾಕುವಂತೆ ಜನರನ್ನು ಪ್ರಚೋದಿಸಿದ ಆರೋಪದಡಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಯೋಗ ಎಫ್ಐಆರ್‌ ದಾಖಲಿಸಿದೆ. ಸಿತಾಲ್ಕುಚಿ ಗೋಲಿಬಾರ್‌ ಸಂಬಂಧ ಮಮತಾ ಈ ವಿವಾದಿತ ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next