Advertisement
ಪಶ್ಚಿಮಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಪ್ರಧಾನಿ ಮೋದಿ ಲಸಿಕೆ ಪಡೆಯುತ್ತಿರುವ ಚಿತ್ರವನ್ನು ಪ್ರಮಾಣಪತ್ರದಲ್ಲಿ ಬಳಸಿ ಪ್ರಚಾರ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
Related Articles
Advertisement
ಪಶ್ಚಿಮಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ರಾಜ್ಯಗಳಲ್ಲಿ, ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಇದೀಗ ಆರೋಗ್ಯ ಸಚಿವಾಲಯ, ಪ್ರಧಾನಿ ಮೋದಿ ಚಿತ್ರವನ್ನು ಕೋವಿಡ್-19 ಪ್ರಮಾಣಪತ್ರದಿಂದ ತೆಗೆಯಲು ಮುಂದಾಗಿದೆ ಎಂದು ವರದಿ ತಿಳಿಸಿದೆ.
ಟಿಎಂಸಿ ಪಕ್ಷದ ಸಂಸದ ಡೆರೇಕ್ ಓ ಬ್ರಯಾನ್ ಮಂಗಳವಾರ(ಮಾ. 3) ಚುನಾವಣಾ ಆಯೋಗಕ್ಕೆ ಪತ್ರ ಬರೆದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತಿದೆ ಎಂದು ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಬಂಟ್ವಾಳ: ಕತ್ತಿಯಿಂದ ಹಲ್ಲೆ ನಡೆಸಿ ಗಂಡನನ್ನೇ ಕೊಂದ ಪತ್ನಿ! ಪೊಲೀಸ್ ವಶಕ್ಕೆ