Advertisement

ಡ್ರೈಫ್ರೂಟ್ಸ್ ನಿಮ್ಮ ಲೈಂಗಿಕ ಜೀವನಕ್ಕೆ ಉತ್ತೇಜಕ ; ಯಾವೆಲ್ಲಾ ಬೀಜಗಳ ಸೇವನೆ ಇದಕ್ಕೆ ಪೂರಕ?

09:59 AM Dec 03, 2019 | Hari Prasad |

ನಿಮ್ಮ ಲೈಂಗಿಕ ಜೀವನವನ್ನು ಸುಖಮಯವಾಗಿಸಬೇಕೇ ಹಾಗಾದರೆ ಇಲ್ಲಿದೆ ಉತ್ತಮ ಆರೋಗ್ಯ ಸಲಹೆ. ಲೈಂಗಿಕ ಶಕ್ತಿ ವರ್ಧನೆಗೆ ಹೆಚ್ಚು ಬೀಜಗಳನ್ನು ಸೇವಿಸಬೇಕು. ಈ ಅಂಶ ಇತ್ತೀಚಿನ ಅಧ್ಯಯನ ಒಂದರಿಂದ ಸಾಬೀತಾಗಿದೆ. ತಮ್ಮ ದೈನಂದಿನ ಆಹಾರ ಕ್ರಮದಲ್ಲಿ 60 ಗ್ರಾಂನಷ್ಟು ಅಂದರೆ ಸುಮಾರು ಅರ್ಧ ಕಪ್ ನಷ್ಟು ಬೀಜಗಳನ್ನು ಸೇವಿಸುತ್ತಾ ಬಂದಾಗ ಅವರ ಲೈಂಗಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದು ಈ ಅಧ್ಯಯನದಿಂದ ಸಾಬೀತುಗೊಂಡಿದೆ. ಈ ಅಧ್ಯಯನದ ವರದಿ ನ್ಯೂಟ್ರಿಯೆಂಟ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Advertisement

ಈ ಅಧ್ಯಯನಕ್ಕೆಂದು 83 ಆರೋಗ್ಯವಂತ ಪುರುಷರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮತ್ತು ಅವರಿಗೆ ಅವರ ದೈನಂದಿನ ಆಹಾರದಲ್ಲಿ ಒಂದೋ ಬೀಜಗಳನ್ನು ಸೇವಿಸದ ಸಾಂಪ್ರದಾಯಿಕ ಪಾಶ್ಚಾತ್ಯ ಆಹಾರ ಪದ್ಥತಿಯನ್ನು ಅನುಸರಿಸುವಂತೆಯೂ ಅಥವಾ ಪ್ರತೀದಿನ 60 ಗ್ರಾಂನಷ್ಟು (ಸುಮಾರು 360 ಕ್ಯಾಲೊರಿ) ಬಾದಾಮಿ ಬೀಜ, ಹೇಝಲ್ ನಟ್, ವಾಲ್ ನಟ್ ಗಳನ್ನು ಒಳಗೊಂಡಿರುವಂತೆ ಬೀಜಗಳ ಸಹಿತದ ಪಾಶ್ಚಾತ್ಯ ಆಹಾರ ಪದ್ಧತಿಯನ್ನು ಪಾಲಿಸುವ ಆಯ್ಕೆಯನ್ನು ನೀಡಲಾಯಿತು. ಮತ್ತು ಅಧ್ಯಯನದ ಪ್ರಾರಂಭದಲ್ಲಿ ಅವರ ಲೈಂಗಿಕ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪ್ರಶ್ನಾವಳಿಯೊಂದನ್ನು ನೀಡಿ ಮಾಹಿತಿಯನ್ನು ಪಡೆದುಕೊಳ್ಳಲಾಗಿತ್ತು.

14 ವಾರಗಳ ನಂತರ ಬೀಜಗಳ ಸಹಿತ ತಮ್ಮ ಮಾಮೂಲು ಆಹಾರ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದ ವರ್ಗದ ಪುರುಷರಲ್ಲಿ ಎರಡನೇ ವರ್ಗಕ್ಕೆ ಹೋಲಿಸಿದಾಗ ಲೈಂಗಿಕಾಸಕ್ತಿ, ಉದ್ರೇಕ ಸ್ಥಿತಿಗಳು ಸೇರಿದಂತೆ ಇತರೇ ಲೈಂಗಿಕ ಕಾರ್ಯನಿರ್ವಹಣೆ ಸುಧಾರಣೆಗೊಂಡಿರುವುದು ಕಂಡುಬಂತು.

ಈ ರೀತಿಯಾಗಿ ನಿರ್ಧಿಷ್ಟ ಬೀಜಗಳ ಸೇವನೆ ಲೈಂಗಿಕಾಸಕ್ತಿ ಉತ್ತೇಜನಕ್ಕೆ ಹೇಗೆ ಸಹಕಾರಿ ಎಂಬುದು ನಿಖರವಾಗಿ ತಿಳಿದುಬಂದಿಲ್ಲವಾದರೂ ಈ ಉತ್ಪನ್ನಗಳಲ್ಲಿರುವ ಕೊಬ್ಬಿನಾಂಶಯುಕ್ತ ಆಮ್ಲಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಈ ಫಲಿತಾಂಶಕ್ಕೆ ಕಾರಣವಾಗಿರಬಹುದು ಎಂಬ ಅಂಶವನ್ನು ಸಂಶೋಧಕರು ಪ್ರತಿಪಾದಿಸಿದ್ದಾರೆ.

ಮಾಹಿತಿ ಮೂಲ: https://www.health.harvard.edu/

Advertisement
Advertisement

Udayavani is now on Telegram. Click here to join our channel and stay updated with the latest news.

Next