Advertisement

ಉತ್ತಮ ಆಹಾರ ಸೇವನೆ ಶ್ರೇಷ್ಠ ಜೀವನಕ್ಕೆ ದಾರಿ

12:21 PM Dec 06, 2021 | Team Udayavani |

ಸೇಡಂ: ಮನುಷ್ಯನಿಗೆ ಉತ್ತಮ ಆಹಾರ ಕಲ್ಪಿಸುವುದರಿಂದ ಆತ ಶ್ರೇಷ್ಠ ಜೀವನದತ್ತ ಸಾಗುತ್ತಾನೆ ಎಂದು ಹಾಪಕಾಮ್ಸ್‌ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ ಹೇಳಿದರು.

Advertisement

ತಾಲೂಕಿನ ಊಡಗಿ ಗ್ರಾಮದ ಲುಂಬಿಣಿ ಶಿಕ್ಷಣ ಸಂಸ್ಥೆಯ ನಳಂದ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪೋಷಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಯಲ್ಲಿ ಪೌಷ್ಟಿಕ ಆಹಾರ ದೊರೆಯುವುದೇ ದುಸ್ತರವಾಗಿದೆ. ಮಕ್ಕಳಿಗೆ ಉತ್ತಮ ಮತ್ತು ನೈಸರ್ಗಿಕ ಆಹಾರ ದೊರೆಯುವಂತೆ ಆಗಬೇಕು. ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರ ಗಮನಹರಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಅನ್ನಪೂರ್ಣ ಬಾನಾರ, ಆರೋಗ್ಯ ಇಲಾಖೆಯ ಸವಿತಾ, ಕಲಬುರಗಿ ಚೈಲ್ಡ್‌ ಲೈನ್‌ನ ಬಸವರಾಜ ತೆಂಗಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಣಮಂತ ಬೆನಕನಹಳ್ಳಿ, ಶೇಖ ಹುಸೇನ ಖುರೇಶಿ, ನಾಗೇಂದ್ರಪ್ಪ ಸರಡಗಿ, ಗಣಪತಿ ಬಡಿಗೇರ, ಜಗದೇವಿ, ವಿದ್ಯಾ, ನಿಂಗಮ್ಮ, ನಿರ್ಮಲ, ಪರ್ವಿನ ಬೇಗಂ, ರೇಣುಕಾ, ಗೌರಮ್ಮ ಜೈಭೀಮ, ಮುಖ್ಯಶಿಕ್ಷಕ ದತ್ತು ಪವಾರ, ಅಬ್ದುಲ್‌ ಜಲೀಲ, ಭಾರತಿ ದೊಡ್ಡಮನಿ ಇತರರು ಇದ್ದರು. ನಳಂದ ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ನಿರೂಪಿಸಿದರು, ನಾಗರಾಜ ಭೂತಪುರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next