Advertisement
ತಿನ್ನುವ ಆಹಾರದಲ್ಲಿ ವ್ಯತ್ಯಾಸಗಳಾದಾಗ ಸಾಮಾನ್ಯ ವಾಗಿ ಮಲಬದ್ಧತೆ, ಅಜೀರ್ಣ, ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು ಮತ್ತಿತರ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವ, ಕೆಲಸದ ಒತ್ತಡ ಎಂದುಕೊಂಡು ಅತೀ ಶೀಘ್ರವಾಗಿ ಯಾವಾಗ ಬೇಕೋ ಆವಾಗ ಏನು ಸಿಗುತ್ತದೋ ಅದನ್ನು ತಿಂದುಬಿಡುತ್ತೇವೆ. ಇದರ ಪರಿಣಾಮವೇ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Related Articles
Advertisement
ಬೇರಾವ ಶ್ರಮಕ್ಕೂ ಅಷ್ಟು ಶಕ್ತಿ ಬೇಕಾಗುವುದಿಲ್ಲ ಎನ್ನುವುದು ಆಶ್ಚರ್ಯವಾದರೂ ನಿಜ. ದೇಹದ ಎಂಜಿನ್ ಸುಸ್ಥಿತಿಯಲ್ಲಿದ್ದು ಹೆಚ್ಚು ಕಾಲ ಬಾಳಬೇಕಿದ್ದರೆ ಈಶಕ್ತಿವ್ಯಯವನ್ನು ಕಡಿಮೆಗೊಳಿಸಬೇಕು. ಗ್ಯಾರೇಜ್‌ಭಾಷೆಯಲ್ಲಿ ಐಡ್ಲಿಂಗ್ (Idling) ಕಡಿಮೆ ಮಾಡಬೇಕು. ಎಂಜಿನ್‌ಗೆ ತುಂಬಿಸುವ ಇಂಧನದ ಗುಣ ಮಟ್ಟ ಇದಕ್ಕೆ ನಿರ್ಣಾಯಕವಾಗು ವಂತೆ ನೀವು ತಿನ್ನುವ ಆಹಾರವೇ ನಿಮ್ಮ ಎಂಜಿನ್‌ನ ಬಾಳಿಕೆಯನ್ನು ನಿರ್ಧರಿಸುತ್ತದೆ. ಹೆಚ್ಚು ತಿಂದರೆ ಹೆಚ್ಚು ಸವೆತ; ಅದ ಕ್ಕಾಗಿಯೇ ತಿನ್ನುವುದಕ್ಕಾಗಿ ಬದುಕಬೇಡ ಎನ್ನುವುದು
ಸುಲಭವಾಗಿ ಜೀರ್ಣವಾಗುವ ಆಹಾರ :
ಆಹಾರದಲ್ಲಡಗಿರುವ ಶಕ್ತಿಯನ್ನು ಅಳೆಯಲು ಉಪಯೋಗಿಸುವ ಮಾಪಕ ಅದರ ಶಾಖೋತ್ಪನ್ನ ಸಾಮರ್ಥ್ಯ (Calorigenecity) ಹೆಚ್ಚು ಶಕ್ತಿ ತುಂಬಿದ ಗುರು ಮತ್ತು ಕಡಿಮೆ ಶಕ್ತಿ ತುಂಬಿದ ಆಹಾರ ಲಘು (High and low calorie diet ) ಎನ್ನುವ ಶಬ್ದಗಳು ಕೆಲವೊಮ್ಮೆ ದಾರಿ ತಪ್ಪಿಸುವ ಸಂಕೇತ ಗಳಾಗುತ್ತವೆ. ಹೆಚ್ಚು ಕ್ಯಾಲೋರಿಯಿರುವ ಆಹಾರ ದಿಂದ ಶಕ್ತಿಯ ಬಿಡುಗಡೆಯಾಗಬೇಕಿದ್ದರೆ ಹೆಚ್ಚು ಶಕ್ತಿ ಖರ್ಚಾಗುತ್ತದೆ ಮತ್ತು ಎಂಜಿನ್‌ನ ಸವಕಳಿ ಹೆಚ್ಚುತ್ತದೆ. ಹಾಗಾಗಿ ಗುಣ ಮತ್ತು ಪ್ರಮಾಣ ಇವೆರಡರಲ್ಲೂ ಲಘು ಆಹಾರ ಉತ್ತಮ. ಅದನ್ನೇ ಪಥ್ಯ ಎನ್ನುತ್ತಾರೆ.
ಸೇವಿಸಿದ ಎರಡು ಗಂಟೆಯೊಳಗೆ ಜೀರ್ಣವಾಗುವ ಮತ್ತು ಸುಲಭವಾಗಿ ಮಲವನ್ನು ತಳ್ಳುವ ಆಹಾರ ಲಘು ಎನ್ನುವುದು ಆಯುರ್ವೇದದಲ್ಲಿ ಹೇಳಿರುವ ಸೂತ್ರ. ತೇಗುಬಂದಾಗ ಅದರೊಡನೆ ತಿಂದ ಆಹಾರದ ವಾಸನೆಯಿಲ್ಲದಿರುವುದು ಮತ್ತು ಹೊಟ್ಟೆಯಲ್ಲಿ ಹಗುರತನದ ಅನುಭವ ಜೀರ್ಣವಾಗಿರುವ ಲಕ್ಷಣ. ಒಮ್ಮೆ ತಿಂದ ಆಹಾರವು ಜೀರ್ಣ ವಾಗದೆ ಇನ್ನೊಮ್ಮೆ ತಿನ್ನುವಂತಿಲ್ಲ ಎನ್ನುವುದು ಸಾಮಾನ್ಯ ಜ್ಞಾನ.
ಯಾವುದೇ ಆಹಾರವನ್ನು ಹೊಟ್ಟೆ ತುಂಬಾ ತಿನ್ನಬಾರದು. ಹೊಟ್ಟೆಯ ಮೂರನೇ ಒಂದ ರಷ್ಟು ಭಾಗ ಯಾವಾಗಲೂ ಖಾಲಿ ಬಿಡಬೇಕು ಎನ್ನುವುದು ನಿರಂತರ ಪಾಲಿಸಬೇಕಾದ ಸೂತ್ರ. ಗುರು ಆಹಾರ ಅರ್ಧಕ್ಕಿಂತ ಹೆಚ್ಚಾಗಲೇ ಬಾರದು. ತಿನ್ನುವ ಆಹಾರವು ಸ್ವತ್ಛ ಮತ್ತು ಹೊಸದಾಗಿ ತಯಾರಿಸಿದ್ದಿರಬೇಕು.
ಅನ್ನಕಾಲ ಎನ್ನುವ ಕಲ್ಪನೆ ಆಯುರ್ವೇದದ ವಿಶಿಷ್ಟ ಆರೋಗ್ಯ ಸೂತ್ರ. ಮಲ ಪ್ರವೃತ್ತಿಯ ಬಳಿಕ ದೇಹದಲ್ಲಿ ಹಗುರತನದ ಅನುಭವ ಮತ್ತು ಹಸಿವೆ ಆದಾಗ ಇಷ್ಟವಾದುದನ್ನು ಮತ್ತು ಹಿತವಾದುದನ್ನು ಹಿತಜನರೊಂದಿಗೆ ಮನವಿರಿಸಿ ತಿನ್ನಬೇಕು ಎನ್ನುವುದು ಸಾರ್ವ ಕಾಲಿಕ ಹಿತೋಪದೇಶ. ನಿಯಮ ಮೀರಿ ಹಿತವಲ್ಲದ್ದನ್ನು ತಿಂದಾಗ ಉಂಟಾಗುವ ವಿಷೋತ್ಪನ್ನವೇ ಆಮ (Oxidants) ಮತ್ತು ಇದು ಎಲ್ಲ ರೋಗ ಗಳಿಗೂ ಮೂಲಕಾರಣ. ಮಲದ ಪರೀಕ್ಷೆಯಿಂದ ಜೀರ್ಣಕ್ರಿಯೆಯ ಗುಣಮಟ್ಟ ಪರೀಕ್ಷಿಸಬಹುದು.
ಈ ಎಲ್ಲ ಸೂತ್ರಗಳೂ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಅಳವಡಿಕೆಯಾಗಿದ್ದುವು. “ನಮ್ಮ ಆರೋಗ್ಯ ನಮ್ಮ ಅಡುಗೆ ಮನೆಯಲ್ಲಿದೆ’ ಎನ್ನುವ ಎಚ್ಚರ ಇಂದಿನ ಸಮಾಜಕ್ಕೆ ಸಂದೇಶವಾಗಬೇಕಾಗಿದೆ.
ಅಜೀರ್ಣಕ್ಕೆ ಪರಿಹಾರವೇನು? :
ತಿಂದ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಎನ್ನುವವರು ಆಹಾರ ತಿಂದ ಕೂಡಲೇ ಬಿಸಿ ನೀರನ್ನು ಕುಡಿಯಬೇಕು. ಪ್ರತೀ ದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಸೇವಿಸು ವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಅಲ್ಲದೇ ಅಜೀರ್ಣ ಸಮಸ್ಯೆಯನ್ನು ತಪ್ಪಿಸಲು ಸಮಯಕ್ಕೆ ಸರಿ ಯಾಗಿ ಆಹಾರ ಸೇವನೆ ಮಾಡುವುದು ಅತ್ಯಗತ್ಯ. ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಕೂಡ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತು, ಆರಾಮ ವಾಗಿ ಆಹಾರ ಸೇವನೆಯನ್ನು ಆನಂದಿಸಬೇಕು ಸಾಕಷ್ಟು ನೀರು ಕುಡಿಯುವುದರಿಂದ ದೇಹ ಸ್ವತ್ಛವಾ ಗುವುದಲ್ಲದೆ ಅಜೀರ್ಣವಾಗದಂತೆ ತಡೆಯುತ್ತದೆ.
ಪ್ರತೀ ನಿತ್ಯ ಆಹಾರದಲ್ಲಿ ತರಕಾರಿ, ಹಣ್ಣು ಬಳಕೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗು ವುದು. ಆಹಾರ ಸೇವನೆಯ ಕೂಡಲೇ ಕುಳಿತು ಕೊಳ್ಳುವುದು, ಮಲಗುವುದು ಆಹಾರ ಅಜೀರ್ಣತೆಗೆ ಕಾರಣವಾಗುತ್ತದೆ. ಹೆಚ್ಚು ಬೆಣ್ಣೆ, ತುಪ್ಪ, ಎಣ್ಣೆಯ ಅಂಶವುಳ್ಳ ಆಹಾರದಿಂದ ದೂರವಿದ್ದು ಪ್ರೊಟೀನ್‌ಯುಕ್ತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಾಗಿರಬಹುದು.
-ಡಾ| ಮುರಳೀಧರ ಶರ್ಮಾ,
ಆಯುರ್ವೇದ ತಜ್ಞರು,ಉಡುಪಿ