Advertisement
ತಿನ್ನುವ ಆಹಾರ ಆರೋಗ್ಯಕರವಾಗಿದ್ದರೆ ದೇಹಕ್ಕೆ ಬೇಕಾದ ಅಗತ್ಯದ ಪೋಷಕಾಂಶಗಳನ್ನು ಸಿಗುತ್ತದೆ ಮಾತ್ರವಲ್ಲದೇ ದೇಹದಲ್ಲಿರುವ ಕ್ಯಾಲೋರಿ ಕುಗ್ಗುತ್ತದೆ. ದೇಹದಲ್ಲಿ ಕ್ಯಾಲೋರಿ ಕಡಿಮೆಗೊಳಿಸಿ ಪೋಷಕಾಂಶ ನೀಡುವ ಆಹಾರ ಪದಾರ್ಥಗಳಲ್ಲಿ ಒಂದು ಈ ಕರಿಬೇವು.
ಆಯುರ್ವೇದದ ಪ್ರಕಾರ ಮುಂಜಾನೆ ಒಂದು ಹಿಡಿಯಷ್ಟು ಕರಿಬೇವನ್ನು ಸೇವಿಸುವುದರಿಂದ ಆರೋಗ್ಯವಂತ ದೇಹವನ್ನು ಹೊಂದಬಹುದು. ಕೊಬ್ಬು ಕರಗಿಸುವ ಗುಣವನ್ನು ಹೊಂದಿರುವ ಅತ್ಯಗತ್ಯ ಅಂಶ ಮಹನಿಂಬೈನ್ ಹೊಂದಿದೆ. ಅಂತೆಯೇ ದೇಹದ ತೂಕ ಹೆಚ್ಚಾಗಲು ಕಾರಣವಾಗಿರುವ ಲಿಪಿಡ್, ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು, ರಕ್ತದಲ್ಲಿನ ಅಸಮತೋಲ ನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಕರಿಬೇವನ್ನು ಹೆಚ್ಚಾಗಿ ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ಇನ್ನೊಂದು ವಿಧಾನ
ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಅನಂತರ ಅದಕ್ಕೆ 10-15 ಕರಿಬೇವು ಎಲೆಗಳನ್ನು ಹಾಕಿ ಚನ್ನಾಗಿ ಕುದಿಸಿ. ಅನಂತರ ಈ ನೀರನ್ನು ಆರಲು ಬಿಟ್ಟು ಬಳಿಕ ಬಟ್ಟೆಯಲ್ಲಿ ಶೋಧಿಸಿ ಕುಡಿಯಿರಿ. ರುಚಿಗೆ ಬೇಕಾದರೆ ಜೇನುತುಪ್ಪ ಅಥವಾ ನಿಂಬೆ ರಸವನ್ನು ಸೇರಿಸಿಕೊಳ್ಳಬಹುದು. ಫಲಿತಾಂಶಕ್ಕಾಗಿ 20 ಅಥವಾ 30 ದಿನ ಈ ರಸವನ್ನು ಕುಡಿಯಬೇಕು.
Related Articles
ಕರಿಬೇವು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಆಹಾರದಲ್ಲಿ ಅವುಗಳನ್ನು ಸೇರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ದೇಹದ ತೂಕ ಇಳಿಕೆಗೆ ಒಂದಷ್ಟು ಎಲೆಗಳನ್ನು ಬೆಳಿಗ್ಗೆ ಎದ್ದ ಕೂಡಲೇ ಹಾಗೆಯೇ ಜಗಿದು ಸೇವಿಸಬಹುದು.
Advertisement
- ಆರ್.ಕೆ