Advertisement

ಉತ್ತಮ ಆರೋಗ್ಯಕ್ಕಾಗಿ ಕ್ಯಾಪ್ಸಿಕಂ ತಿನ್ನಿ

03:12 PM Aug 08, 2019 | Sriram |

ಕನ್ನಡದಲ್ಲಿ ದೊಣ್ಣೆ ಮೆಣಸಿನಕಾಯಿ ಎಂದು ಹೆಸರಿರುವ ಕ್ಯಾಪ್ಸಿಕಮ್‌ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ತಯಾರಿಸಲ್ಪಡುವ ಬೊಂಡಾ, ಕ್ಯಾಪ್ಸಿಕಮ್‌ ಕರಿ ಎಲ್ಲವೂ ಬಾಯಲ್ಲಿ ನೀರೂರಿಸುತ್ತದೆ. ಕ್ಯಾಪ್ಸಿಕಮ್‌ ಆರೋಗ್ಯ ದೃಷ್ಟಿಯಿಂದ ಮಹತ್ವವನ್ನು ಕೂಡ ಹೊಂದಿದೆ. ಆ್ಯಂಟಿ ಆಕ್ಸಿಂಡೆಂಟ್‌ಗಳನ್ನು ಹೇರಳವಾಗಿ ಹೊಂದಿರುವ ಈ ತರಕಾರಿ ಕ್ಯಾನ್ಸರ್‌ ಅನ್ನೂ ನಿವಾರಿಸುವ ಗುಣವನ್ನು ಹೊಂದಿದೆ.

Advertisement

ಇದಕ್ಕಿರುವ ಇನ್ನೊಂದು ಹೆಸರು ಬೆಲ್‌ ಪೆಪ್ಪರ್‌. ಇದು ಅಮೆರಿಕಾದ ಉಷ್ಣವಲಯದ ಬೆಳೆಯಾದ್ದು, ಔಷಧೀಯ ಗುಣಗಳನ್ನು ಯಥೇತ್ಛವಾಗಿ ಹೊಂದಿದೆ. ಕೊಬ್ಬು ಕಡಿಮೆ ಇದ್ದು, ಇದರಲ್ಲಿರುವ ಪೋಷಕಾಂಶಗಳು ಹಲವು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತದೆ. ವಿಟಮಿನ್‌, ಖನಿಜಾಂಶಗಳೂ ಇದರಲ್ಲಿವೆ.

ಕ್ಯಾಪ್ಸಿಕಂ ತಿಂದರೆ ಏನು ಪ್ರಯೋಜನ?
ಹೃದಯದ ಆರೋಗ್ಯಕ್ಕೆ ಪೂರಕ ಟೆಮೊಟೋದಲ್ಲಿರವ ಲೈಕೋಪಿನ್‌ ಎಂಬ ಹೋರಾಡುವ ಗುಣವುಳ್ಳ ಪೋಷಕಾಂಶ ಕೆಂಪು ಕ್ಯಾಪ್ಸಿಕಮ್‌ನಲ್ಲಿದೆ. ಅಲ್ಲದೆ ಫೋಲೇಟ್‌, ವಿಟಮಿನ್‌ ಬಿ6 ಇದರಲ್ಲಿದ್ದು ದೇಹದಲ್ಲಿರುವ ಹೋಮೋಸಿಸ್ಟೈನ್‌ ಮಟ್ಟವನ್ನು ತಗ್ಗಿಸುತ್ತದೆ. ಈ ಮೂಲಕ ಹೃದಯಾಘಾತ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಜೀವರಾಸಾಯನಿಕ ಕ್ರಿಯೆಗೆ ಉತ್ತಮ
ತೂಕ ಇಳಿಸುವ ಆಸೆಯಿದ್ದರೆ ಕ್ಯಾಪ್ಸಿಕಮ್‌ ಅನ್ನು ಆಹಾರದಲ್ಲಿ ಸೇರಿಸಿ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಇದರಲ್ಲಿರುವ ಪೋಷಕಾಂಶಗಳು ಟ್ರೈಗ್ಲಿಸರೈಡ್‌ಗಳನ್ನು ತಗ್ಗಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ.

ಕ್ಯಾನ್ಸರ್‌ ಸಾಧ್ಯತೆ ಕ್ಷೀಣ
ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಮತ್ತು ಆ್ಯಂಟಿಆಕ್ಸಿಡೆಂಟುಗಳು ಕ್ಯಾನ್ಸರ್‌ ಬರುವ ಸಾಧ್ಯತೆಗಳನ್ನು ತಗ್ಗಿಸುತ್ತವೆ. ವಿಶೇಷವಾಗಿ ಇದರಲ್ಲಿರವ ಲೈಕೋಪೀನ್‌ ಎಂಬ ಕ್ಯಾರೋಟಿನಾಯ್ಡ ಗರ್ಭಕೋಶ, ಪ್ರಾಸ್ಟೇಡ್‌, ಮೇದೋಜೀರಕ ಗ್ರಂಥಿ ಹಾಗೂ ಮೂತ್ರಕೋಶದ ಕ್ಯಾನ್ಸರ್‌ ಬರದಂತೆ ತಡೆಯುತ್ತವೆ. ಇದರಲ್ಲಿರುವ ಕಿಣ್ವಗಳು ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್‌ನಿಂದಲೂ ರಕ್ಷಣೆ ಒದಗಿಸುತ್ತದೆ.

Advertisement

ನೋವು ದೂರ
ಕ್ಯಾಪ್ಸಿಕಮ್‌ಗೆ ಖಾರದ ಗುಣವನ್ನು ಕ್ಯಾಪ್ಸೆ„ಸಿಸ್‌ ಎಂಬ ಪೋಷಕಾಂಶಕ್ಕೆ ನೋವಿನ ಸಂವೇದನೆಯನ್ನು ತಡೆದು ಮೆದುಳುಬಳ್ಳಿಗೆ ತಲುಪದಂತೆ ಮಾಡುವ ಗುಣವಿದೆ.

ಕಬ್ಬಿಣದ ಕೊರತೆಗೆ ಬೆಸ್ಟ್‌
ಕ್ಯಾಪ್ಸಿಮನ್‌ ವಿಟಮಿನ್‌ ಸಿ ಸಮೃದ್ಧವಾಗಿದ್ದು ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ನೆರವಾಗುತ್ತದೆ.. ಇದು ದಿನದ ಆವಶ್ಯಕತೆಗೆ ಬೇಕಾಗಿರುವುದಕ್ಕಿಂತಲೂ 3 ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್‌ ಸಿ ಇದೆ. ಒಂದು ವೇಲೆ ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯಿದ್ದರೆ ಕೆಂಪು ಕ್ಯಾಪ್ಸಿಕಮ್‌ ಸೇವಿಸಿ.

– ರಮ್ಯಾ ಎಂ.ಕೆ.

Advertisement

Udayavani is now on Telegram. Click here to join our channel and stay updated with the latest news.

Next