Advertisement
ಇಂದು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಎಷ್ಟು ಲಾಭವಿದೆಯೋ ಅಷ್ಟೇ ಪ್ರಮಾಣದಲ್ಲಿ ನಷ್ಟಗಳಾಗುತ್ತಿದೆ. ಮುಖ್ಯವಾಗಿ ಗೌಪ್ಯತಾ ವಿಚಾರಗಳು ಸೋರಿಕೆಯಾಗುತ್ತಿದೆ. ಈ ಲೇಖನದಲ್ಲಿ ಇನ್ ಸ್ಟಾಗ್ರಾಂ ಬಳಸುವಾಗ ಭದ್ರತೆಯನ್ನು ಕಾಪಾಡಲು ಅನುಸರಿಸಬೇಕಾದ ತಂತ್ರಗಳೇನು ಎಂಬುದರ ಮಾಹಿತಿ ಇಲ್ಲಿದೆ.
- ಪ್ರೈವೇಟ್ ಅಕೌಂಟ್: ಪಬ್ಲಿಕ್ ಅಕೌಂಟ್ ಅನ್ನು ಪ್ರೈವೇಟ್ ಅಕೌಂಟ್ ಗೆ ಬದಲಾಯಿಸುವುದರಿಂದ ಹಲವಾರು ಲಾಭಗಳಿವೆ. ಈ ಫೀಚರ್ ಪ್ರಕಾರ ನಿಮ್ಮ ಪ್ರತೀ ಕಂಟೆಂಟ್ ಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು. ಯಾವುದೇ ಇನ್ಸ್ಟಾ ಗ್ರಾಂ ಬಳಕೆದಾರರನ್ನು ಬ್ಲಾಕ್ ಮಾಡುವ ಬದಲು ರಿಮೂವ್ ಮಾಡಬಹುದು. ನೀವು ಒಪ್ಪಿಗೆ ಕೊಟ್ಟರೇ ಮಾತ್ರ ಇತರರು ನಿಮ್ಮ ಅಕೌಂಟ್ ಅನ್ನು ವೀಕ್ಷಿಸಬಹುದು ಅಥವಾ ಹೊಸ ಅಪ್ಡೇಟ್ ಪಡೆಯಬಹುದು. ಇದರ ಜೊತೆಗೆ ಯಾರೆಲ್ಲಾ ತಮ್ಮ ಪೋಸ್ಟ್ ಗೆ ಕಮೆಂಟ್ ಮಾಡಲು ಅರ್ಹರು ಹಾಗೂ ‘ಆ್ಯಕ್ಟಿವಿಟಿ ಸ್ಟೇಟಸ್’ ಆಫ್ ಮಾಡುವ ಸೌಲಭ್ಯವೂ ಇದೆ.
- ಎರಡು ಹಂತದ ದೃಢೀಕರಣ(Two-factor authentication): ಇನ್ಸ್ಟಾಗ್ರಾಂ ಜೊತೆಗೆ ಇತರ ಸಾಮಾಜಿಕ ಜಾಲತಾಣಗಳಲ್ಲೂ ಈ ಫೀಚರ್ ಇವೆ. ಹೆಚ್ಚುವರಿ ಭದ್ರತೆಗಾಗಿ ಇದನ್ನು ‘ಆನ್’ ಮಾಡುವುದು ಉತ್ತಮ. ಈ ಫೀಚರ್ ಬಳಸುವುದರಿಂದ ಯಾವುದೇ ಹೊಸ ಡಿವೈಸ್ ಗಳಲ್ಲಿ ಇನ್ ಸ್ಟಾಗ್ರಾಂ ಲಾಗಿನ್ ಆದ ಸಂದರ್ಭದಲ್ಲಿ ವಿಶೇಷ ಕೋಡ್ ಅಥವಾ confirmation ಅನ್ನು ಕೇಳುತ್ತದೆ. ಇದು ನಮ್ಮ ಅಕೌಂಟ್ ಗಳನ್ನು ಸುರಕ್ಷಿತವಾಗಿಡಲು ಸಹಕಾರಿ.
- ಆತ್ಮೀಯರಿಗೆ ಮಾತ್ರ ಕಾಣುವಂತೆ ಸ್ಟೋರೀಸ್ ಗಳನ್ನು ಶೇರ್ ಮಾಡಿ: ಇನ್ ಸ್ಟಾಗ್ರಾಂನಲ್ಲಿ ‘ಕ್ಲೋಸ್ ಫ್ರೆಂಡ್ಸ್‘ ಪಟ್ಟಿ ಮಾಡುವ ಆಯ್ಕೆಯಿದೆ. ಸ್ಟೋರಿಗಳನ್ನು ಪೋಸ್ಟ್ ಮಾಡುವಾಗ ಪರಿಚಿತರಿಗೆ ಮಾತ್ರ ಕಾಣುವಂತೆ ನಿಗದಿಪಡಿಸಿ. ಇದರೊಂದಿಗೆ ಪಟ್ಟಿಯಲ್ಲಿದ್ದ ಫ್ರೆಂಡ್ಸ್ ಗಳನ್ನು ಯಾವಾಗ ಬೇಕಾದರೂ ರಿಮೂವ್ ಮಾಡಬಹುದು. ವಿಶೇಷವೆಂದರೇ ಇತರ ಬಳಕೆದಾರರಿಗೆ ನೀವು ಕ್ಲೋಸ್ ಫ್ರೆಂಡ್ಸ್ ಪಟ್ಟಿಯಲ್ಲಿ ಸೇರಿಸಿರುವ ವಿಚಾರ ಹಾಗೂ ರಿಮೂವ್ ಮಾಡಿರುವ ವಿಚಾರ ತಿಳಿಯುವುದಿಲ್ಲ.
- ಕಮೆಂಟ್ ಗಳ ಆಯ್ಕೆ: ಇನ್ ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಕಮೆಂಟ್ ಗಳನ್ನು ಆಯ್ಕೆ ಮಾಡುವ ಮತ್ತು ಪ್ರಚೋದನಾತ್ಮಕ ಬರಹಗಳನ್ನು ನಿರ್ಬಂಧಿಸುವ ಆಯ್ಕೆಯನ್ನು ನೀಡಿದೆ. ಯಾವುದೇ ಅಸಭ್ಯ ಎನಿಸುವಂತಹ ಪದಗಳು ಇದರಿಂದಾಗಿ ಸ್ವಯಂಚಾಲಿತವಾಗಿ ಡಿಲೀಟ್ ಆಗುವುದು. ಇದಕ್ಕಾಗಿ ಯಾವುದೆಲ್ಲಾ ಪದಗಳು ಹಾಗೂ ಯಾವೆಲ್ಲಾ ಇಮೋಜಿಯನ್ನು ಇತರರು ಬಳಸಬಾರದೆಂಬ ಪಟ್ಟಿಯನ್ನು ಫಿಲ್ಟರ್ ಆಯ್ಕೆಯಲ್ಲಿ ನೀಡಲಾಗಿದೆ.
- ಟ್ಯಾಗ್ ಮಾಡುವುದನ್ನು ನಿರ್ಧರಿಸಬಹುದು: ಕೆಲವು ವ್ಯಕ್ತಿಗಳು ಸುಖಾಸುಮ್ಮನೇ ಇತರರನ್ನು ಪ್ರತಿಯೊಂದು ಪೋಸ್ಟ್ ಗಳಿಗೂ ಟ್ಯಾಗ್ ಮಾಡಿರುತ್ತಾರೆ. ಇದನ್ನು ತಪ್ಪಿಸಲು ಇನ್ ಸ್ಟಾಗ್ರಾಂ ಯಾವೆಲ್ಲಾ ವ್ಯಕ್ತಿಗಳು ತಮಗೆ ಟ್ಯಾಗ್ ಅಥವಾ mention ಮಾಡಬಹುದು ಎಂಬುದನ್ನು ನಿರ್ಧರಿಸುವ ಆಯ್ಕೆ ನೀಡಿದೆ. ಇಲ್ಲಿ everyone, only people you follow or no one to be able ಎಂಬ ಮೂರು ಆಯ್ಕೆ ನೀಡಲಾಗಿದೆ.
- ಬ್ಲಾಕ್ (Block) ಮಾಡುವ ಆಯ್ಕೆ : ಪ್ರೈವೇಟ್ ಅಕೌಂಟ್ ಆಗಿರದೆಯೂ ಇತರರನ್ನು ಬ್ಲಾಕ್ ಮಾಡುವ ಅವಕಾಶವನ್ನು ಇನ್ ಸ್ಟಾಗ್ರಾಂ ಕಲ್ಪಿಸಿದೆ. ಇದರಿಂದ ಕೆಲವು ವ್ಯಕ್ತಿಗಳ ಅಸಭ್ಯ ಕಮೆಂಟ್ ಗಳಿಂದ ಹಾಗೂ ಪೋಸ್ಟ್ ಗಳಿಂದ ಉಂಟಾಗುವ ಮಾನಸಿಕ ಕಿರಿಕಿರಿಯನ್ನು ತಡೆಗಟ್ಟಬಹುದು.
Related Articles
Advertisement