Advertisement
ಆಧಾರ್ ಹೊಂದಿರುವ ವ್ಯಕ್ತಿ ತನ್ನ ವಿಳಾಸವನ್ನು ಸುಲಭವಾಗಿ ಬದಲಿಸಬಹುದು. ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ, ವಿಳಾಸ ಬದಲಾವಣೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದರ ಮೇಲೆ ಸಾರ್ವಜನಿಕವಾಗಿ ಅಧಿಕಾರ ಸ್ಥಾನ ಹೊಂದಿದ ವ್ಯಕ್ತಿಗಳ ಸಹಿಯನ್ನು ಹಾಕಿಸಿಕೊಳ್ಳಬೇಕು. ಸಂಸದ, ಶಾಸಕ, ನಗರಪಾಲಿಕೆ ಸದಸ್ಯ, ಗ್ರೂಪ್ ಎ, ಬಿ ಗೆಜೆಟೆಡ್ ಅಧಿಕಾರಿಗಳು, ಎಂಬಿಬಿಎಸ್ ವೈದ್ಯರ ಸಹಿಯೂ ನಡೆಯುತ್ತದೆ.
ಸರ್ಕಾರದಲ್ಲಿ ಅಧಿಕಾರ ಸ್ಥಾನ ಹೊಂದಿದ ವ್ಯಕ್ತಿಗಳ ನಕಲಿ ಸ್ಟಾಂಪ್ ಗಳು, ನಕಲಿ ಸಹಿಗಳನ್ನು ಬಳಸಿ ವಿಳಾಸವನ್ನು ಹಲವರು ಬದಲಿಸಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳೇ ಬೇಜವಾಬ್ದಾರಿಯಿಂದ ಸಹಿ ಹಾಕಿದ್ದಾರೆ. 2022, ಮಾರ್ಚ್‌ನಲ್ಲಿ ದೆಹಲಿ ಕೇಂದ್ರ ಜಿಲ್ಲಾ ಪೊಲೀಸ್ ತಂಡ ಮಾಡಿದ ದಾಳಿಯಲ್ಲಿ ಆರು ಮಂದಿಯ ವಂಚನೆಯನ್ನು ಬಯಲಿಗೆಳೆದಿತ್ತು. ಯುವತಿಯನ್ನು ಅನಿವಾಸಿ ಭಾರತೀಯ ವರರ ರೂಪದಲ್ಲಿ ಈ ತಂಡ ಮೋಸಗೊಳಿಸಿತ್ತು. ಒಬ್ಬ ವೈದ್ಯನಿಗೆ ಬರೀ 500 ರೂ. ಹಣ ನೀಡಿ, ಆಧಾರ್ ವಿಳಾಸ ಬದಲಾವಣೆ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ವ್ಯಕ್ತಿಗಳು ವಿಳಾಸ ಬದಲಾವಣೆ ಮಾಡಿಕೊಂಡಿದ್ದರು.
Related Articles
Advertisement