Advertisement

ಮಹಾರಾಷ್ಟ್ರ ಕೊಂಕಣ್‌ ಅಸೋಸಿಯೇಶನ್‌ನಿಂದ ಈಸ್ಟರ್‌ ಸಂಡೇ ಸಂಭ್ರಮ

12:18 PM Apr 04, 2018 | |

ಮುಂಬಯಿ: ಮಹಾರಾಷ್ಟ್ರ ಕೊಂಕಣ್‌ ಅಸೋಸಿ ಯೇಶನ್‌ ಸಂಸ್ಥೆಯ ವತಿಯಿಂದ ಈಸ್ಟರ್‌ ಸಂಡೇ ಸಂಭ್ರಮವು ಎ. 1ರಂದು ರಾತ್ರಿ ಅಂಧೇರಿ ಪೂರ್ವದ ಮರೋಲ್‌ ವಿಜಯನಗರದ ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ನ ಗಾರ್ಡನ್‌ ಲಾವ್‌°ನ‌ಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಸ್ವರ್ಗಸ್ಥ ಬೆನೆಡಿಕ್ಟ್r ರೆಬೆಲ್ಲೋ ಸಂಸ್ಮರಣೆ ಹಾಗೂ ಜೆರಿ ಡಿ’ಸೋಜಾ ಬಜೊjàಡಿ ಮಂಗಳೂರು ಅವರ ತೃತೀಯ “ಜೆರಿ ನೈಟ್‌’ ಸಂಗೀತ ಸಂಜೆ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಿತು. ವಿನ್ಸೆಂಟ್‌ ಡಿ’ಪಲೋಟ್ಟಿ ಚರ್ಚ್‌ನ  ಪ್ರಧಾನ ಧರ್ಮಗುರು ರೆ| ಫಾ| ಚಾರ್ಲ್ಸ್‌ಫೆರ್ನಾಂಡಿಸ್‌ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದ‌ು ನೆರೆದ ಜನತೆಗೆ ಈಸ್ಟರ್‌ ಸಂದೇಶವನ್ನಿತ್ತರು.

ಗೌರವ ಅತಿಥಿಗಳಾಗಿ ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಅಧ್ಯಕ್ಷ ಜೋನ್‌ ಡಿ’ಸಿಲ್ವಾ, ದಿವೋ ಸಾಪ್ತಾಹಿಕದ ಸಂಪಾದಕ ಲಾರೆನ್ಸ್‌ ಕುವೆಲ್ಲೋ, ಚಲನಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್‌ ಬಾಕೂìರು, ಉದ್ಯಮಿಗಳಾದ ರೋನಿ ಗೋವಿಯಸ್‌, ಡೆನಿಸ್‌ ಲೋಬೊ, ಜೋನ್‌ ರೆಬೆಲ್ಲೋ ಸಯಾನ್‌, ಓಜ್ವಲ್ಡ್‌ ಕೊರ್ಡೆರೋ ಹಾಗೂ ಅಸೋಸಿಯೇಶನ್‌ನ ಅಧ್ಯಕ್ಷೆ ಬೆನೆಡಿಕ್ಟಾ ಬಿ.ರೆಬೆಲ್ಲೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾರಾಷ್ಟ್ರ ಕೊಂಕಣ್‌ ಅಸೋಸಿಯೇಶನ್‌ನ ಆಜೀವ ಸದಸ್ಯರಾಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಬೆನೆಡಿಕ್ಟ್r ಪಾಸ್ಕಲ್‌ ರೆಬೆಲ್ಲೋ ಅವರಿಗೆ ನುಡಿನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷ ವಾಲ್ಟರ್‌ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ) ಹಾಗೂ ಸಕ್ರಿಯ ಸದಸ್ಯರಾಗಿದ್ದು, ತವರೂರಿನಲ್ಲಿ ನೆಲೆಸಲಿರುವ  ಜೋನ್‌ ವೇಗಸ್‌  ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಹಾಗೂ ಬಾಲಪ್ರತಿಭೆ ಕು| ಲವಿನಾ ಡಿ’ಸೋಜಾ ಇವರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಉದ್ಯಮಿ ರೋನಿ ಗೋವಿಯಸ್‌ ಸಾರಥ್ಯದಲ್ಲಿ ಗೋವಿಯಸ್‌ ಪರಿವಾರ ಸದಸ್ಯರಿಂದ ಉಪನಗರ ಕಲ್ಯಾಣ್‌ನ  ಮುರ್ಬಾಡ್‌ ಗಾಂವ್‌ನಲ್ಲಿ ಸ್ಥಾಪಿಸಲು ಉದ್ದೇಶಿತ ವೃದ್ಧಾಶ್ರಮ (ಹೋಮ್‌ ಫಾರ್‌ ದಿ ಏಜ್‌ಡ್‌) ಇದರ ಮಾತೃಸಂಸ್ಥೆ ಲಿಲ್ಲಿ ಗೋವಿಯಸ್‌ ಚಾರಿಟೆಬಲ್‌ ಟ್ರಸ್ಟ್‌ನ್ನು ಅತಿಥಿಗಳು ಸೇವಾರ್ಪಣೆಗೊಳಿಸಿ ಶುಭಹಾರೈಸಿದರು. ಹೆರಾಲ್ಡ್‌ ಗೋವಿಯಸ್‌, ಹ್ಯೂಬರ್ಟ್‌ ಗೋವಿಯಸ್‌, ಎಚ್‌. ಎ. ಗೋವಿಯಸ್‌, ಲೋರಾ ಗೋವಿಯಸ್‌ ಉಪಸ್ಥಿತರಿದ್ದರು.

ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಗ್ರೆಗೊರಿ ಮೊನಿಸ್‌, ಜತೆ ಕಾರ್ಯದರ್ಶಿ ಪ್ರಿತೇಶ್‌ ಕ್ಯಾಸ್ತಲೀನೊ,  ಜತೆ ಕೋಶಾಧಿಕಾರಿ ಐಡಾ ಲೋಬೊ ಮತ್ತು ಪೂರ್ವ ವಲಯಾಧ್ಯಕ್ಷ ವಿನ್ಸೆಂಟ್‌ ಕಾಸ್ತೇಲಿನೋ, ಮಾಜಿ ಗೌರವ ಕಾರ್ಯದರ್ಶಿ ಸಿರಿಲ್‌ ಕಾಸ್ತೆಲಿನೋ, ರೋಕಿ ಡಿ’ಕುನ್ಹಾ, ಸ್ಟೇನಿ ಡಾಯಸ್‌, ಗ್ರೆಗೋರಿ ನಿಡ್ಡೋಡಿ ಮತ್ತಿತರರು ಉಪಸ್ಥಿತರಿದ್ದರು. ಕೊಂಕಣಿ ಬಳಗ ಅಂಬೋಲಿ ಇದರ ಮಹಿಳಾ ವೃಂದದಿಂದ ಸ್ವಾಗತನೃತ್ಯ ಪ್ರದರ್ಶನಗೊಂಡಿತು.

Advertisement

ಅಸೋಸಿಯೇಶನ್‌ನ ಸಂಸ್ಥಾಪಕಾಧ್ಯಕ್ಷ ಲಿಯೋ ಫೆರ್ನಾಂಡಿಸ್‌ ಜೆರಿಮೆರಿ ಸ್ವಾಗತಿಸಿ ಸ್ವರ್ಗಸ್ಥ ಬೆನೆಡಿಕ್ಟ್r  ಪಾಸ್ಕಲ್‌ ರೆಬೆಲ್ಲೋ ಅವರ ಅನನ್ಯ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದ‌ರು. ಅಸೋಸಿಯೇಶನ್‌ನ ಸದಸ್ಯರು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಸುಜಾØನ್‌ ಎಲ್‌. ಕುವೆಲ್ಲೋ, ಫ್ಲೋರಾ ಡಿ’ಸೋಜಾ ಕಲ್ಮಾಡಿ ಪುರಸ್ಕೃತರ ಸಮ್ಮಾನ ಪತ್ರ ವಾಚಿಸಿ ಅಭಿನಂದಿಸಿದರು. ಸ್ಟೀವನ್‌ ಲೋಬೊ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು.

ಜೆರಿ ಡಿ’ಸೋಜಾ, ಆ್ಯಂಟನಿ ತಾವ್ರೋ, ಜೆರಿ ಬೊಂದೆಲ್‌, ಮಾ| ಜೊಯ್‌ಸ್ಟನ್‌, ಕು| ಜೂಡಿ ಜೆರಿಮೆರಿ, ಮಾನ್ಯುಲ್‌ ಫೆರ್ನಾಂಡಿಸ್‌, ಶಾಲೆಟ್‌ ಕ್ಯಾಸ್ತಲೀನೊ, ವಿರಾನ್‌ ವೇಗಸ್‌, ಕು| ರೋಶ್ನಿ ಕ್ರಾಸ್ತಾ, ಕು| ಬೆಲ್ಲಿಟಾ, ಆವಿನ್‌ ಡಿ’ಕೋಸ್ತಾ, ಮಾ| ಲೆವಿನ್‌ ಲಿಯೋ ಫೆರ್ನಾಂಡಿಸ್‌ ಇನ್ನಿತರರು ಕೊಂಕಣಿ ಹಾಡುಗಳನ್ನು ಹಾಗೂ ರಾಜ ರಾಜೇಂದ್ರ ತಂಡವು ನಿನಾದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಗೀತ, ಪ್ರಹಸನ, ನೃತ್ಯಾವಳಿ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಮನೋರಂಜನೆ ಕಾರ್ಯಕ್ರಮವನ್ನು ಫ್ಲೋಯ್ಡ ಡಿ’ಮೆಲ್ಲೋ ಕಾಸ್ಸಿಯಾ ನಿರ್ವಹಿಸಿದರು. 

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next