Advertisement
ಕಳೆದ ಬಾರಿ ಮೇ 29ಕ್ಕೇನೇ ಕರ್ನಾಟಕ ಕರಾವಳಿಗೆ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ಬಾರಿ ನಿಧಾನವಾಗಿದೆ. ಕರಾವಳಿಯಲ್ಲಿ ಈ ಬಾರಿ ಅತೀ ಕಡಿಮೆ ಮುಂಗಾರುಪೂರ್ವ ಮಳೆಯಾಗಿದೆ. ಕಳೆದ ಬಾರಿ ಶೇ. 87ರಷ್ಟು ಮಳೆ ಹೆಚ್ಚಳವಾಗಿದ್ದರೆ, ಈ ಬಾರಿ ಶೇ. 78ರಷ್ಟು ಮಳೆ ಕೊರತೆ ಇದೆ. ಕಳೆದ ಬಾರಿ ಪೂರ್ವ ಮುಂಗಾರು ವೇಳೆ ಮೊದಲ ಎರಡು ತಿಂಗಳು ಸಾಧಾರಣ ಮಳೆಯಾಗಿದ್ದರೂ ಮೇ ಕೊನೆಯಲ್ಲಿ ಭಾರೀ ಮಳೆಯಾಗಿತ್ತು.
Related Articles
ಈ ಬಾರಿಯ ಪೂರ್ವ ಮುಂಗಾರು ವೇಳೆ ರಾಜ್ಯದ ಕರಾವಳಿಯಲ್ಲಿ ಅತೀ ಕಡಿಮೆ ಮಳೆಯಾಗಿದೆ. ಜ. 1ರಿಂದ ಮೇ 31ರ ವರೆಗಿನ ಅಂಕಿ-ಅಂಶದ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ. 27ರಷ್ಟು, ಉತ್ತರ ಒಳನಾಡಿನಲ್ಲಿ ಶೇ. 64ರಷ್ಟು, ಮಲೆನಾಡಿನಲ್ಲಿ ಶೇ.57ರಷ್ಟು ಮತ್ತು ಕರಾವಳಿಯಲ್ಲಿ ಶೇ. 78ರಷ್ಟು ಮಳೆ ಕೊರತೆ ಇದೆ. ಒಟ್ಟಾರೆ ರಾಜ್ಯದಲ್ಲಿ ಶೇ. 52ರಷ್ಟು ಮಳೆ ಕೊರತೆ ಇದೆ. ವಾಡಿಕೆಯಂತೆ ಈ ಅವಧಿಯಲ್ಲಿ ಒಟ್ಟು 178 ಮಿ.ಮೀ. ಮಳೆಯಾಗಬೇಕಿದ್ದರೂ ಬಂದಿರುವುದು 38 ಮಿ.ಮೀ. ಮಾತ್ರ.
Advertisement
ಕ್ಷೀಣಿಸಿದ ಪೂರ್ವ ಮುಂಗಾರುಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪೂರ್ವ ಮುಂಗಾರು ಕ್ಷೀಣಿಸಿದೆ. ಕರಾವಳಿ ಸೇರಿದಂತೆ ರಾಜ್ಯದಲ್ಲಿ ವಾಡಿಕೆಯಂತೆ ಮಳೆ ಬಂದಿಲ್ಲ. ಸದ್ಯ ಪೂರ್ವ ಮುಂಗಾರು ಋತು ಪೂರ್ಣಗೊಂಡಿದೆ. ಮುನ್ಸೂಚನೆಯ ಪ್ರಕಾರ ಜೂ. 5-6ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಅಪ್ಪಳಿಸಲಿದೆ.
ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ