Advertisement
ಮಳೆ ಕೊರತೆ: ತಾಲೂಕಿನಲ್ಲಿ ಪೂರ್ವ ಮುಂಗಾರು ವಾಡಿಕೆಯಂತೆ 86 ಮಿ.ಮೀ. ಮಳೆಯಾಗಬೇಕಿತ್ತು ಆದರೆ 66 ಮಿ.ಮೀ. ಮಾತ್ರ ಮಳೆಯಾಗಿದ್ದು ಶೇ.23 ರಷ್ಟು ಮಳೆ ಕೊರತೆ ಉಂಟಾಗಿದ್ದು ಪೂರ್ವ ಮುಂಗಾರು ಕೂಡಾ ವೈಫಲ್ಯ ಹೊಂದಿದೆ, ತಾಲೂಕಿನ 6 ಹೋಬಳಿಯಲ್ಲಿ ಶೇಕಡಾವಾರು ಮಳೆ ಕೊರತೆ ಅಂಕಿ ಅಂಶ ಈ ರೀತಿ ಇದೆ. ಕಸಬಾ ಹೋಬಳಿಯಲ್ಲಿ ಶೇ.10ರಷ್ಟು, ಬಾಗೂರು ಶೇ.30ರಷ್ಟು, ದಂಡಿಗನಹಳ್ಳಿ ಶೇ.34, ಹಿರೀಸಾವೆ ಶೇ.32, ನುಗ್ಗೇಹಳ್ಳಿ ಶೇ.21 ಹಾಗೂ ಶ್ರವಣಬೆಳಗೊಳ ಹೋಬಳಿ ಶೇ.10 ರಷ್ಟು ಮೈನಸ್ ಮಳೆಯಾಗಿದೆ.
Related Articles
Advertisement
ಬಿತ್ತನೆ ಬೀಜದ ದಾಸ್ತಾನು: ಈಗಾಗಲೆ ಸರ್ಕಾರ ಬಿತ್ತನೆ ಬೀಜವನ್ನು ತಾಲೂಕು ಕೃಷಿ ಇಲಾಖೆಗೆ ಸರಬರಾಜು ಮಾಡಿದ್ದು, ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜವನ್ನು ರವಾನೆ ಮಾಡಲಾಗಿದೆ. ಕೊಳವೆ ಬಾವಿ ಹೊಂದಿರುವವರನ್ನು ಹೊರತುಪಡಿಸಿದರೆ ಮಳೆ ಕೈಕೊಟ್ಟಿರುವುದ ರಿಂದ ಬಿತ್ತನೆ ಬೀಜ ಪಡೆಯಲು ರೈತರು ಕೃಷಿ ಇಲಾಖೆಗೆ ಆಗಮಿಸದೆ ಇರುವುದಿಂದ ದಾಸ್ತಾನು ಇಲಾಖೆಯಲ್ಲಿ ಉಳಿದಿದೆ.
ಮುಂಗಾರು ಎದುರು ನೋಡುತ್ತಿದ್ದಾನೆ ರೈತ: ಪೂರ್ವ ಮುಂಗಾರು ಉತ್ತಮವಾಗಿ ಆಗಿದ್ದರೆ ತಾಲೂಕಿನ ರೈತರು ಧಾನ್ಯ ಬೆಳೆ ಗಳನ್ನು ಮಾಡಿ ಮನೆ ವೆಚ್ಚಕ್ಕೆ ಹಣ ನೋಡು ತ್ತಿದ್ದ ಹಾಗೂ ರಾಸುಗಳ ಮೇವಿಗಾಗಿ ಜೋಳ ಬೆಳೆಯಲು ಮುಂದಾಗುತ್ತಿದ್ದರು.
ಆದರೆ ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟಿದೆ ಹಾಗಾಗಿ ವಿಧಿ ಇಲ್ಲದೆ ಜೂನ್ ಮೊದಲ ವಾರ ಮುಂಗಾರನ್ನು ಎದುರು ನೋಡುವಂತಾಗಿದೆ. ಮುಂಗಾರು ಸಕಾಲಕ್ಕೆ ಆಗದೆ ವೈಫಲ್ಯವಾದರೆ ಮತ್ತೂಂದು ಬರವನ್ನು ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸಬೇಕಿದೆ.
ತೋಟಗಾರಿಗೆ ಬಿತ್ತನೆ ಪ್ರಮಾಣ ಕುಂಠಿತ
ಪೂರ್ವ ಮುಗಾರು ಕೈ ಕೊಟ್ಟಿರುವು ದರಿಂದ ಬಿತ್ತನೆ ಕಾರ್ಯ ಕುಂಠಿತ ವಾಗಿದೆ. ತೋಟಗಾರಿಕೆ ಬೆಳೆಯಾದ ಆಲೂಗಡ್ಡೆ ಯನ್ನು ದಂಡಿಗನಹಳ್ಳಿ, ಬಾಗೂರು ಹೋಬಳಿಯಲ್ಲಿ ಹೆಚ್ಚು ಬೆಳೆಯುತ್ತಿದ್ದು ಕಸಬಾ-ನುಗ್ಗೇಹಳ್ಳಿ ಹೋಬಳಿಯ ಕೆಲ ಗ್ರಾಮ ಸೇರಿದಂತೆ 900 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಆಗಬೇಕಿತ್ತು. ಇದುವರೆಗೆ ಯಾವುದೇ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಟೊಮೆಟೋ 220 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗ ಬೇಕಿದ್ದು, ಕೊಳವೆ ಬಾವಿ ಹೊಂದಿರುವ 125 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮೆಣಸಿನಕಾಯಿ 200 ಹೆಕ್ಟೇರ್‌ಗೆ ಕೇವಲ 60 ಹೆಕ್ಟೇರ್‌ನಲ್ಲಿ ಮಾತ್ರ ರೈತ ಬೆಳೆದಿದ್ದಾನೆ.
ಮೇ 15ರ ಒಳಗೆ ತಾಲೂಕಿನಲ್ಲಿ ಎರಡೂಮೂರು ಹದ ಮಳೆಯಾಗ ಬೇಕಿತ್ತು. ಆದರೆ ಕೇವಲ ಒಂದು ಹದ ಮಳೆಯಾಗಿರುವುದರಿಂದ ಬಿತ್ತನೆಯಲ್ಲಿ ಕುಂಠಿತವಾಗಿದೆ. ಮುಂದಿನ 15 ದಿವಸ ದಲ್ಲಿ ಮಳೆಯಾಗದೆ ಹೋದರೆ ತೆಂಗಿನ
ಮರಗಳಿಗೆ ನೀರಿನ ಕೊರತೆ ಉಂಟಾಗು ವುದಲ್ಲದೆ ಇತರ ತೋಟಗಾರಿಕೆ ಬೆಳೆ ಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
● ಕೆ.ಬಿ.ಸತೀಶ್, ಹಿರಿಯ, ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ
ಈಗಾಗಲೆ ಜಿಲ್ಲಾಡಳಿತ ಪೂರ್ವ ಮುಂಗಾರು ಬಳೆಯ ಬಿತ್ತನೆ ಬೀಜ, ಕೃಷಿಗೆ ಅಗತ್ಯ ಔಷಧಿ, ಗೊಬ್ಬರ ವನ್ನು ಸರಬರಾಜು ಮಾಡಿದೆ. ಆದರೆ ಮಳೆ ಕೊರತೆಯಿಂದ ರೈತರು ಪಡೆ ಯಲು ಮುಂದೆ ಬಂದಿಲ್ಲ. ಈ ವಾರದಲ್ಲಿ ಮಳೆಯಾಗದಿದ್ದರೆ ಅಲಸಂದೆ ಮೊದಲಾದ ಬೆಳೆ ಕೃಷಿ ಮಾಡುವುದನ್ನು ಮರೆಯಬೇಕಾಗುತ್ತದೆ.
● ಎಫ್.ಕೆ.ಗುರುಸಿದ್ದಪ್ಪ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ
ಶಾಮಸುಂದರ್ ಕೆ. ಅಣ್ಣೇನಹಳ್ಳಿ