Advertisement

ಸಂಶೋಧನೆ: ಭೂಮಿಯ ಒಳಪದರದ ತಿರುಗುವಿಕೆ ಬಂದ್…ಇದರಿಂದಾಗುವ ಪರಿಣಾಮವೇನು?

01:13 PM Jan 27, 2023 | Team Udayavani |

ಭೂಮಿ ಮೇಲೆ ವಾಸಿಸುವ ಮನುಷ್ಯನಿಗೆ ಭೂಮಂಡಲದ ಒಳಗೆ ಏನು ನಡೆಯುತ್ತಿದೆ, ಬಾಹ್ಯಾಕಾಶದಲ್ಲಿ ಏನೇನು ನಡೆಯುತ್ತಿರುತ್ತದೆ ಎಂಬ ಬಗ್ಗೆ ಏನೂ ತಿಳಿಯುವುದಿಲ್ಲ. ಆದರೆ ಭೂಮಿಯ ಒಳಪದರವು ಇತರ ಗ್ರಹಗಳಿಗಿಂತ ಹೆಚ್ಚು ವೇಗವಾಗಿ ತಿರುಗುತ್ತದೆ ಎಂಬುದು ವಿಜ್ಞಾನಿಗಳ ನಂಬಿಕೆಯಾಗಿತ್ತು. ಏತನ್ಮಧ್ಯೆ ನೂತನ ಸಂಶೋಧನೆ ಪ್ರಕಾರ, 2009ರ ಹೊತ್ತಿಗೆ ಕಾಲ್ಪನಿಕ ವೈಜ್ಞಾನಿಕ ಸಿನಿಮಾದಂತೆ “ಭೂಮಿಯ ಒಳಪದರ” ನಿಧಾನವಾಗಿ ತಿರುಗುತ್ತಿದೆ” ಎಂದು ತಿಳಿಸಿದೆ!

Advertisement

ಇದನ್ನೂ ಓದಿ:ಲಂಚದಿಂದ ಪಕ್ಷ ಕಟ್ಟಿದ್ದಲ್ಲ: ಕಾಂಗ್ರೆಸ್‌ ನಾಯಕರಿಗೆ ಪ್ರಮೋದ್‌ ಮಧ್ವರಾಜ್ ತಿರಗೇಟು

ಭೂಕಂಪನ ದತ್ತಾಂಶಗಳ ಅಧ್ಯಯನದ ಪ್ರಕಾರ, ಭೂಮಿಯ ಒಳಪದರವು ಸರಾಸರಿ 60-70 ವರ್ಷಗಳಿಗೊಮ್ಮೆ ಅದರ ತಿರುಗುವಿಕೆಯ ವೇಗವನ್ನು ಬದಲಾಯಿಸುತ್ತದೆ ಎಂಬುದು ತಿಳಿದು ಬಂದಿದೆ.

“ಈ ಬದಲಾವಣೆಯಿಂದ ಭೂಮಿಯ ಮೇಲೆ ವಾಸ ಮಾಡುವ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಬಗ್ಗೆ ಇನ್ನಷ್ಟೇ ಅಧ್ಯಯನದ ಮೂಲಕ ತಿಳಿದು ಬರಬೇಕಾಗಿದೆ” ಎಂದು ವರದಿ ತಿಳಿಸಿದೆ.

ಭೂಮಿಯ ಒಳಪದರ ತಿರುಗುವಿಕೆಯ ಈ ಮಾದರಿಯು ಭೂಮಿಯ ಸುತ್ತಲಿನ ಕಾಂತೀಯ ಕ್ಷೇತ್ರದಲ್ಲಿನ ವ್ಯತ್ಯಾಸಗಳು, ಜಾಗತಿಕ ಸರಾಸರಿಯ ಸಮುದ್ರ ಮಟ್ಟ, ಭೂ ಒಳಪದರದ ಕೆಲವು ಚಟುವಟಿಕೆ, ಜಾಗತಿಕ ತಾಪಮಾನ ಮತ್ತು ಇತರ ವಿದ್ಯಮಾನಗಳ ಕುರಿತ ಸಂಭಾವ್ಯ ವಿವರಣೆಯನ್ನು ಒದಗಿಸುತ್ತದೆ ಎಂದು ನೂತನ ಸಂಶೋಧನೆ ತಿಳಿಸಿದೆ.

Advertisement

ಬೀಜಿಂಗ್ ನ ಪೀಕಿಂಗ್ ಯೂನಿರ್ವಸಿಟಿಯ ಸಂಶೋಧಕರಾದ ಯಿ ಯಾಂಗ್ ಮತ್ತು ಕ್ಸಿಯಾಡಾಂಗ್ ಅವರು ನಡೆಸಿದ ಅಧ್ಯಯನ ವರದಿಯನ್ನು ನೇಚರ್ ಜಿಯೋಸೈನ್ಸ್ ಜರ್ನಲ್ ಪ್ರಕಟಿಸಿದೆ. 1996ರಲ್ಲಿ ಭೂಮಿಯ ಒಳಪದರ ತಿರುಗುತ್ತಿದೆ ಎಂದು ಮೊದಲ ಬಾರಿಗೆ ಪುರಾವೆ ಒದಗಿಸಿದ ಅಧ್ಯಯನ ತಂಡದಲ್ಲಿ ಕ್ಸಿಯಾಡಾಂಗ್ ಕೂಡಾ ಇದ್ದಿದ್ದರು ಎಂದು ವರದಿ ವಿವರಿಸಿದೆ.

“2009ರ ಹೊತ್ತಿಗೆ ಭೂಮಿ ಒಳಪದರದ ಸೂಪರ್ ರೋಟೇಶನ್(ತಿರುಗುವಿಕೆ) ನಿಂತು ಹೋಗಿರುವುದನ್ನು ಪತ್ತೆಹಚ್ಚಲಾಗಿತ್ತು. ಈ ಬದಲಾವಣೆಗಳನ್ನು ಭೂಮಿಯ ವಿವಿಧ ಭಾಗಗಳಲ್ಲಿ ಗಮನಿಸಿದ್ದು, ಈ ವಿದ್ಯಮಾನವನ್ನು ದೃಢಪಡಿಸಲಾಗಿತ್ತು. ಏತನ್ಮಧ್ಯೆ ಭೂಮಿಯ ಒಳಪದರ ಸಬ್ ರೋಟೇಶನ್ (ನಿಧಾನವಾಗಿ) ಪ್ರಾರಂಭಿಸಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next