Advertisement

ದೆಹಲಿಯಲ್ಲಿ ಭೂಕಂಪನದ ಅನುಭವವ ; ಪಾಕ್, ಅಫ್ಘಾನ್ ನಲ್ಲೂ ಕಂಪನ

10:23 PM Aug 05, 2023 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ-ಎನ್ ಸಿ ಆರ್ ನಲ್ಲಿ ಶನಿವಾರ ರಾತ್ರಿ 9.31 ರ ವೇಳೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನ, ಅಫ್ಘಾನಿಸ್ಥಾನದಲ್ಲೂ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ವರದಿಯಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.8 ಎಂದು ಹೇಳಲಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿದೆ. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಜಿಲ್ಲೆಯ ವಾಯುವ್ಯಕ್ಕೆ 418 ಕಿ.ಮೀ.ದೂರದಲ್ಲಿ ಕೇಂದ್ರೀಕೃತವಾಗಿ 181 ಕಿ.ಮೀ.ಆಳ ದಲ್ಲಿತ್ತು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ…

Advertisement

Udayavani is now on Telegram. Click here to join our channel and stay updated with the latest news.

Next