Advertisement

ಭೂಗರ್ಭ ತಜ್ಞರಿಂದ ಭೂಕಂಪದ ಅಧ್ಯಯನ

07:33 PM Sep 07, 2021 | Shreeram Nayak |

ವಿಜಯಪುರ:ಶನಿವಾರ ಮಧ್ಯರಾತ್ರಿ ಜಿಲ್ಲೆಯ ಜನರನ್ನು ಜೀವ ಭಯದಲ್ಲಿ ಬೀದಿಯಲ್ಲಿ ನಿಲ್ಲಿಸಿದ್ದ ಭೂಕಂಪದ ಅಧ್ಯಯನ ನಡೆಸಲು ಭೂಗರ್ಭ ತಜ್ಞರು ಜನರಿಂದ ಅನುಭವ, ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

Advertisement

ಸೋಮವಾರ ವಿಜಯಪುರ ನಗರ ಹಾಗೂ ಜಿಲ್ಲೆಗ ವಿವಿಧ ತಾಲೂಕುಗಳ ಹಳ್ಳಿಗಳಿಗೆ ಭೇಟಿ ನೀಡಿದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡ ಭೂಕಂಪದ ಅನುಭವ ಆಗಿರುವ ಜನರಿಂದ ಮಾಹಿತಿ ಸಂಗ್ರಹಿಸಿತು.

ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ತಹಶೀಲ್ದಾರ್‌ ಸಿದ್ದರಾಯ ಬೋಸಗಿ ಹಾಗೂ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರ ತಂಡ ಭೂಕಂಪದ ಮಾಹಿತಿ ಸಂಗ್ರಹಿಸಿತು.

ಇದನ್ನೂ ಓದಿ:ರಾಜ್ಯದಲ್ಲಿಂದು 851 ಜನರಲ್ಲಿ ಕೋವಿಡ್ ಸೋಂಕು ದೃಢ : 790 ಸೋಂಕಿತರು ಗುಣಮುಖ

ಭೂಕಂಪ ಆಗಿರುವ ನಗರದ ಟೇಕಡೆ ಗಲ್ಲಿ, ಟಕ್ಕೆ, ಕೀರ್ತಿ ನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ತಜ್ಞರ ತಂಡ ಜನರಿಂದ ಭೂಕಂಪ ಸಂಭವಿಸಿದ ಕುರಿತು ಅವರಿಗಾದ ಅನುಭವ ಸಂಗ್ರಹಿಸಿತು. ಭೂಕಂಪ ಸಂಭವಿಸಿದ ಸಮಯ,ಭೂಕಂಪದ ಸಂದರ್ಭದಲ್ಲಿ ಭೂಮಿಯ ಆಳದಿಂದ ಕೇಳಿ ಬಂದ ಭಾರಿ ಸದ್ದಿನ ಪ್ರಮಾಣ, ಇದರಿಂದ ಮನೆಗಳಲ್ಲಿ ಮಲಗಿದವರಿಗೆ ಆಗಿರುವ ಅನುಭವ, ಎಚ್ಚರ ಇದ್ದವರಿಗೆ ಆಗಿರುವ ಅನುಭವಗಳ ಕುರಿತು ಪ್ರಶ್ನೆ ಮಾಡಿ ಮಾಹಿತಿ ಸಂಗ್ರಹಿಸಿತು.

Advertisement

ನಗರದಲ್ಲಿ ಅಧ್ಯಯನ ನಡೆಸಿದ ನಂತರೆ ಭೂಕಂಪ ಸಂಭವಿಸಿದ ಜಿಲ್ಲೆಯ ಬಬಲೇಶ್ವರ, ತಿಕೋಟಾ ತಾಲೂಕುಗಳಿಗೆ ಭೇಟಿ ನೀಡಿ ಭೂಕಂಪದ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಿದರು. ಆಲಮಟ್ಟಿಯಲ್ಲಿರುವ ಭೂಕಂಪನ ಪ್ರಮಾಣದ ದಾಖಲೀಕರಣ ರಿಕ್ಟರ್‌ ಮಾಪನದಲ್ಲಿ ಶನಿವಾರ ರಾತ್ರಿಯ ಭೂಕಂಪನದ ಪ್ರಮಾಣದ ಕುರಿತು ಜನರಿಗೆ ಮಾಹಿತಿ ನೀಡಿದ ತಜ್ಞರ ತಂಡ, 3.9 ಪ್ರಮಾಣದ ಲಘು ಭೂಕಂಪ ಸಂಭವಿಸಿದೆ. ಇದರಿಂದ ದೊಡ್ಡ ಮಟ್ಟದ ಅಪಾಯ ಸಂಭವಿಸದು ಎಂಬ ಕುರಿತು ತಿಳಿವಳಿಕೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next