Advertisement

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಭೂಕಂಪನ: 5.2 ತೀವ್ರತೆ ದಾಖಲು

11:06 AM Aug 05, 2023 | Team Udayavani |

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಶನಿವಾರ ಬೆಳಿಗ್ಗೆ  ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.

Advertisement

ಶನಿವಾರ ಬೆಳಿಗ್ಗೆ 8.36ರ ಸುಮಾರಿಗೆ ಭೂಕಂಪನದ ಅನುಭವಾಗಿದ್ದು ಈ ವೇಳೆ ಮನೆಯೊಳಗಿದ್ದ ಮಂದಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ 129 ಕಿಮೀ ಕೆಳಗೆ, ಗುಲ್ಮಾರ್ಗ್‌ನಿಂದ ಸುಮಾರು 184 ಕಿಮೀ ದೂರದಲ್ಲಿದೆ ಎಂದು ಹೇಳಿದೆ.

ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನುಹ್ ಹಿಂಸಾಚಾರ: ಇದೊಂದು ಪೂರ್ವ ಯೋಜಿತ ಕೃತ್ಯ… ಹರಿಯಾಣ ಗೃಹ ಸಚಿವರ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next