ಅಹಮದಾಬಾದ್: ತೌಕ್ತೆ ಚಂಡಮಾರುತ ಅಪ್ಪಳಿಸಲಿರುವ ಭೀತಿಯ ನಡುವೆಯೇ ಗುಜರಾತ್ ನ ಸೌರಾಷ್ಟ್ರ ಪ್ರದೇಶದಲ್ಲಿ ಸೋಮವಾರ (ಮೇ 17) ಬೆಳಗ್ಗೆ ಲಘು ಭೂಕಂಪ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಈ ರಾಶಿಯವರಿಂದು ನೆರೆಹೊರೆಯ ಜನ ಹಾಗೂ ಬಂಧು ಬಳಗದವರ ನಡುವೆ ಮಿಂಚಲಿದ್ದೀರಿ
4.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜ್ಯದ ಉನಾ ಮತ್ತು ರಾಜುಲಾ ಪ್ರದೇಶದಲ್ಲಿಯೂ ಹಾನಿ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ವಿವರಿಸಿದೆ.
ಸೋಮವಾರ ಮುಂಜಾನೆ 3.37ರ ಹೊತ್ತಿಗೆ ಭೂಕಂಪ ಸಂಭವಿಸಿತ್ತು. ಈ ಕಂಪನದ ಆಳ (ಪೂರ್ವ ಉನಾದ) 3.5ಕಿಲೋ ಮೀಟರ್ ಆಳದಲ್ಲಿರುವುದಾಗಿ ಕೇಂದ್ರ ತಿಳಿಸಿದೆ. ಲಘು ಭೂಕಂಪನದಲ್ಲಿ ಪ್ರಾಥಮಿಕ ವರದಿಯ ಪ್ರಕಾರ ಯಾವುದೇ ಹಾನಿ ಸಂಭವಿಸಿಲ್ಲ.
ಆದರೆ ಭೂಕಂಪನದ ಮೂಲ ಕೇಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದರಿಂದ ಜನರು ಭೀತಿಗೆ ಒಳಗಾಗಿದ್ದರು ಎಂದು ವರದಿ ತಿಳಿಸಿದೆ.
ವಾಯುಭಾರ ಕುಸಿತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೇ ಚಂಡಮಾರುತ ಮುಂದಿನ 24ಗಂಟೆಗಳಲ್ಲಿ ಗುಜರಾತ್ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಗೋವಾ, ಗುಜರಾತ್ ನಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹೇಳಿದೆ.