ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಮಂಡಿಯಲ್ಲಿ 4.1 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ ಕೇಂದ್ರ ಬಿಂದುವು ಮಂಡಿಯಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಜೋಗಿಂದರ್‌ನಗರದಲ್ಲಿ ಐದು ಕಿಲೋಮೀಟರ್ ಭೂಮಿಯ ಆಳದಲ್ಲಿದೆ ಸಂಭವಿಸಿದೆ ಎಂದು ಹೇಳಲಾಗಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.1ರಷ್ಟಿದ್ದು, ಪಂಜಾಬ್ ವರೆಗೂ ಭೂಕಂಪನದ ಅನುಭವವಾಗಿದೆ ಎನ್ನಲಾಗಿದೆ.
ಕುಲು, ಭುಂತರ್ ಮತ್ತು ಮನಾಲಿಯಲ್ಲಿಯೂ ಕಂಪನದ ಅನುಭವವಾಗಿದೆ ಎಂದು ಹೇಳಲಾಗಿದೆ. ರಾತ್ರಿ 9.32ಕ್ಕೆ ಭೂಕಂಪನದ ಅನುಭವವಾಗಿದ್ದು, ಮೂರರಿಂದ ಐದು ಸೆಕೆಂಡ್‌ಗಳ ಕಾಲ ಭೂಕಂಪನ ಸಂಭವಿಸಿದೆ. ಅನೇಕ ಜನರು ಗಾಬರಿಯಿಂದ ಮನೆಯಿಂದ ಹೊರಬಂದು ಬಯಲು ಪ್ರದೇಶಗಳಿಗೆ ಓಡಿ ಬಂದಿದ್ದಾರೆ. ಆದರೆ, ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಡಿಸಿ ಮಂಡಿ ಅರಿಂದಮ್ ಚೌಧರಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಯುಪಿ, ಉತ್ತರಾಖಂಡ, ದೆಹಲಿ-ಎನ್‌ಸಿಆರ್ ಮತ್ತು ಮಧ್ಯಪ್ರದೇಶದಲ್ಲಿ ಭೂಮಿ ಕಂಪಿಸಿತು. ನವೆಂಬರ್ 12 ರ ಶನಿವಾರದಂದು ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪ ಸಂಭವಿಸಿದೆ. ಉತ್ತರಾಖಂಡದಲ್ಲೂ ಇದರ ಕಂಪನದ ಅನುಭವವಾಗಿದೆ.
ಇದನ್ನೂ ಓದಿ : ಇರಾನ್‌ನ ಬೀಚ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ, 5 ಸಾವು, ಹಲವರಿಗೆ ಗಾಯ