ನವದೆಹಲಿ:ಛತ್ತೀಸ್ ಗಢದ ಉತ್ತರ ಭಾಗದಲ್ಲಿ ಗುರುವಾರ (ಆಗಸ್ಟ್ 04) ಭೂಕಂಪ ಸಂಭವಿಸಿರುವುದಾಗಿ ಭೂಗರ್ಭಶಾಸ್ತ್ರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 3ರಷ್ಟು ತೀವ್ರತೆ ದಾಖಲಾಗಿದೆ.
ಇದನ್ನೂ ಓದಿ:ಕಡೆಗೂ ಎಚ್ಚೆತ್ತ ಬೆಳ್ತಂಗಡಿ ಪ.ಪಂ.; ಆಡಳಿತ ಆಸ್ಪತ್ರೆ ವಸತಿ ಗೃಹ, ಬಸ್ ನಿಲ್ದಾಣ ಸ್ವಚ್ಛತೆ
ಸೂರಜ್ ಪುರ್ ನಲ್ಲಿ ಭೂಕಂಪ ಸಂಭವಿಸಿದ್ದು, ಸುಮಾರು ಹತ್ತು ಕಿಲೋ ಮೀಟರ್ ಗಳಷ್ಟು ದೂರದವರೆಗೆ ಭೂಕಂಪನ ಸಂಭವಿಸಿದೆ ಎಂದು ವರದಿ ವಿವರಿಸಿದೆ. ಆದರೆ ಯಾವುದೇ ಸಾವು, ನೋವು ಸಂಭವಿಸಿದ ಬಗ್ಗೆ ಈವರೆಗೆ ವರದಿಯಾಗಿಲ್ಲ.
ಮತ್ತೊಂದೆಡೆ ಜಪಾನ್ ನಲ್ಲೂ ಗುರುವಾರ 5.6ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಇಲ್ಲಿಯೂ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ ಎಂದು ವರದಿ ಹೇಳಿದೆ.
ಬುಧವಾರ ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿತ್ತು. ಆದರೆ ಯಾವುದೇ ಸಾವು, ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.