ಹೊಸದಿಲ್ಲಿ: ಹರಿಯಾಣದ ಫರಿದಾಬಾದ್ ನಲ್ಲಿ ಭಾನುವಾರ ಮಧ್ಯಾಹ್ನ 3.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ನೆರೆಹೊರೆಯ ನಗರಗಳಲ್ಲಿ ಕಂಪನದ ಅನುಭವವಾಗಿದೆ.
ಸಂಜೆ 4:08 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಫರಿದಾಬಾದ್ ನಿಂದ ಒಂಬತ್ತು ಕಿಲೋಮೀಟರ್ ಪೂರ್ವಕ್ಕೆ ಮತ್ತು ದೆಹಲಿಯಿಂದ 30 ಕಿಲೋಮೀಟರ್ ಆಗ್ನೇಯದಲ್ಲಿದೆ ಎಂದು ಅದು ಹೇಳಿದೆ.
ಎಲಿವೇಟರ್ ಗಳನ್ನು ಬಳಸಬೇಡಿ ಮತ್ತು ಕಟ್ಟಡಗಳು, ಮರಗಳು, ಗೋಡೆಗಳು ಮತ್ತು ಪಿಲ್ಲರ್ ಗಳಿಂದ ದೂರವಿರಿ ಎಂದು ದೆಹಲಿ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ. ತುರ್ತು ಪರಿಸ್ಥಿತಿಗಾಗಿ 112 ಅನ್ನು ಡಯಲ್ ಮಾಡಿ ಎಂದು ಪೊಲೀಸರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲವಾದ ಕಂಪನಗಳು ಸಂಭವಿಸಿದವು.