ಇಂಫಾಲ್: ಮಣಿಪುರದ ಉಖ್ರುಲ್‌ನಿಂದ 208 ಕಿಲೋಮೀಟರ್ ದೂರದಲ್ಲಿರುವ ಮ್ಯಾನ್ಮಾರ್‌ನಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಶುಕ್ರವಾರ ತಿಳಿಸಿದೆ. ರಾತ್ರಿ 10 ಗಂಟೆ ಸುಮಾರಿಗೆ 120 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.
ಇದರೊಂದಿಗೆ ಒಂದೇ ದಿನ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ ಎನ್ನಲಾಗಿದ್ದು. ಇದಕ್ಕೂ ಮುನ್ನ ಮಧ್ಯಾಹ್ನ 1:47 ಕ್ಕೆ ಅಸ್ಸಾಂನ ದಿಬ್ರುಗಢ್‌ನಿಂದ 226 ಕಿಲೋಮೀಟರ್ ದೂರದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಭಾರತದ ಭೂಕಂಪನ ವಲಯದ ನಕ್ಷೆಯ ಪ್ರಕಾರ ಮಣಿಪುರವು ಹೆಚ್ಚಿನ ಅಪಾಯದ ಭೂಕಂಪನ ವಲಯದಲ್ಲಿ (ವಲಯ V) ನೆಲೆಗೊಂಡಿದೆ. ವಲಯ 5 ಅತ್ಯಂತ ತೀವ್ರವಾದ ಭೂಕಂಪಗಳು ಸಂಭವಿಸುವ ವಲಯವಾಗಿದೆ, ಆದರೆ ವಲಯ 2 ರಲ್ಲಿ ಕಡಿಮೆ ತೀವ್ರತೆಯ ಭೂಕಂಪಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಇಲ್ಲಿನ ಭೌಗೋಳಿಕ ರಚನೆ ಮತ್ತು ಭೌಗೋಳಿಕ ಸ್ಥಳದಿಂದಾಗಿ ಈ ಪ್ರದೇಶದಲ್ಲಿ ಕಂಪನಗಳು ಆಗಾಗ್ಗೆ ಸಂಭವಿಸುತ್ತವೆ ಎಂದು ಹೇಳಲಾಗಿದೆ. ಸೆಪ್ಟೆಂಬರ್‌ನಲ್ಲಿ ಉಖ್ರುಲ್‌ನಿಂದ 60 ಕಿಲೋಮೀಟರ್ ದೂರದಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು.
ಭೂಕಂಪನದಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ, ಕಂಪನ ಸಂಭವಿಸಿದ ಕೂಡಲೇ ಮನೆಯೊಳಗಿದ್ದ ಮಂದಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಕೆಲ ಸೆಕುಂಡುಗಳ ಕಾಲ ಭೂಮಿ ಕಂಪಿಸಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: Daily Horoscope: ತಪ್ಪು ಮಾಡದೆ ಅಪವಾದಕ್ಕೆ ಗುರಿಯಾಗುವ ಯೋಗ