Advertisement

ನ್ಯೂಗಿನಿಗೆ ಸುನಾಮಿ ಎಚ್ಚರಿಕೆ

04:33 AM May 15, 2019 | mahesh |
ಕ್ಯಾನ್‌ಬೆರಾ: ಮಂಗಳವಾರ ಸಂಜೆ ಪಪುವಾ ನ್ಯೂ ಗಿನಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 7.5ರಷ್ಟಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ(ಯುಎಸ್‌ಜಿಎಸ್‌) ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಪಕ್ಕದ ಸೊಲೊಮನ್‌ ದ್ವೀಪ ಪ್ರದೇಶದಲ್ಲೂ ಸುನಾಮಿಯ ಅಲರ್ಟ್‌ ಘೋಷಿಸಲಾಗಿದೆ. ನ್ಯೂ ಗಿನಿಯ ಕೊಕೊಪೋ ಪ್ರಾಂತ್ಯದಿಂದ ಈಶಾನ್ಯದಲ್ಲಿ 45 ಕಿ.ಮೀ.ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು. ಇಲ್ಲಿನ ಜನಸಂಖ್ಯೆ ಕಡಿಮೆಯಿರುವ ಕಾರಣ, ಹೆಚ್ಚಿನ ಹಾನಿಗಳೇನೂ ಸಂಭವಿಸಿಲ್ಲ ಎಂದು ಯುಎಸ್‌ಜಿಎಸ್‌ ತಿಳಿಸಿದೆ. 2018ರ ಫೆಬ್ರವರಿಯಲ್ಲಿ 7.5 ತೀವ್ರತೆಯಲ್ಲಿ ಸಂಭವಿಸಿದ್ದ ಭೂಕಂಪಕ್ಕೆ 125 ಮಂದಿ ಬಲಿಯಾಗಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next