Advertisement

ಈಶಾನ್ಯ ರಾಜ್ಯಗಳು,ಬಂಗಾಳದಲ್ಲಿ  ಭೂಕಂಪನ ; 5.6 ತೀವ್ರತೆ ದಾಖಲು 

11:09 AM Sep 12, 2018 | Team Udayavani |

ಕೋಲ್ಕತಾ: ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ  ಬುಧವಾರ ಬೆಳಗ್ಗೆ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು , ಪಶ್ಚಿಮ ಬಂಗಾಳದಲ್ಲೂ ಕಂಪನದ ಅನುಭವವಾಗಿದೆ. 

Advertisement

ರಿಕ್ಟರ್‌ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಭೂಕಂಪನ ಕೇಂದ್ರ ಬಿಂದು ಅಸ್ಸಾಂನಲ್ಲಿತ್ತು ಎಂದು ತಿಳಿದು ಬಂದಿದೆ. 

ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲೂ ಬೆಳಗಿನ ಜಾವ ಕಂಪನದ ಅನುಭವಾಗಿದೆ. ರಿಕ್ಟರ್‌ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಯಾವುದೇ ಹಾನಿಯ ಕುರಿತು ಇದುವರೆಗೆ ವರದಿಯಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next