Advertisement

ಸಹಾಯಕ್ಕಾಗುವವನೇ ನಿಜವಾದ ದೋಸ್ತಿ: ಸಹಾಯಕ್ಕೆ ನಿಂತ ಭಾರತಕ್ಕೆ ಟರ್ಕಿಯ ಧನ್ಯವಾದ

01:16 PM Feb 07, 2023 | Team Udayavani |

ಹೊಸದಿಲ್ಲಿ: 24 ಗಂಟೆಯ ಅವಧಿಯಲ್ಲಿ ಟರ್ಕಿಯಲ್ಲಿ ಮೂರು ವಿನಾಶಕಾರಿ ಭೂಕಂಪಗಳು ಸಂಭವಿಸಿದ ನಂತರ ದೇಶಕ್ಕೆ ಸಹಾಯಹಸ್ತ ಚಾಚಿದ ಭಾರತವನ್ನು “ದೋಸ್ತ್” ಎಂದು ಟರ್ಕಿ ಬಿಂಬಿಸಿದೆ. ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಟರ್ಕಿಯ ರಾಯಭಾರಿ ಫಿರತ್ ಸುನೆಲ್, “ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ” ಎಂದು ಹೇಳಿದರು.

Advertisement

ಟ್ವಿಟ್ ಮಾಡಿರುವ ಫಿರತ್ ಸುನೆಲ್, “ದೋಸ್ತ್” ಎಂಬುದು ಟರ್ಕಿಶ್ ಮತ್ತು ಹಿಂದಿಯಲ್ಲಿ ಸಾಮಾನ್ಯ ಪದವಾಗಿದೆ. “ದೋಸ್ತ್ ಕರ ಗುಂಡೆ ಬೆಲ್ಲಿ ಓಲುರ್” (ಅಗತ್ಯಕ್ಕಾಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ) ಎಂಬ ಟರ್ಕಿಶ್ ಗಾದೆಯಿದೆ, ಭಾರತಕ್ಕೆ ತುಂಬಾ ಧನ್ಯವಾದಗಳು.” ಎಂದಿದ್ದಾರೆ.

ಇದಕ್ಕೂ ಮೊದಲು ಭಾರತದ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಅವರು ಭಾರತದಲ್ಲಿನ ಟರ್ಕಿ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಟರ್ಕಿಯ ಭೂಕಂಪದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ತಿಳಿಸಿದರು.

ಇದನ್ನೂ ಓದಿ:ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ..; ಪಾಕ್ ಎಚ್ಚರಿಕೆಗೆ ಅಶ್ವಿನ್ ತಿರುಗೇಟು

ವಿಶೇಷ ತರಬೇತಿ ಪಡೆದ ಶ್ವಾನ ದಳ ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಯ ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಭಾರತದಿಂದ ಕಳುಹಿಸಲಾಗಿದೆ.

Advertisement

“ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ಅಗತ್ಯ ಔಷಧಿಗಳೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಪಡಿಸಲಾಗಿದೆ. ಟರ್ಕಿಯ ಸರ್ಕಾರ ಮತ್ತು ಅಂಕಾರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾನ್ಬುಲ್‌ ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯ ಸಮನ್ವಯದಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುತ್ತದೆ” ಎಂದು ಪಿಎಂಒ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next