Advertisement

ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಕಂಪನದ ಅನುಭವ ? ಮನೆಯಿಂದ ಹೊರಬಂದ ಜನರಿಂದ ಜಾಗರಣೆ

11:58 PM Feb 24, 2021 | Team Udayavani |

ವಿಜಯಪುರ : ಜಿಲ್ಲೆಯ ಮನಗೂಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಮತ್ತೆ ಭೂಮಿ ಅಲುಗಾಡಿದೆ. ಭೂಕಂಪದ ಅನುಭವ ಆಗುತ್ತಲೇ ಗ್ರಾಮದಲ್ಲಿ ಮಲಗಿದ್ದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

Advertisement

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಬುಧವಾರ ರಾತ್ರಿ 10-30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವಾಗಿದೆ. ಮನೆಯಲ್ಲಿ ಪಾತ್ರೆ, ಇತರೆ ವಸ್ತುಗಳು ಕೆಳಗೆ ಬಿದ್ದಿವೆ. ಮಲಗಿದವರನ್ನು ಅಲುಗಾಡಿಸಿ ಎಬ್ಬಿಸಿದ ಅನುಭವ ಅಗಿದ್ದು, ಕೂಡಲೇ ಮನೆಯಿಂದ ಹೊರಗೆ ಓಡಿ ಬಂದಿರುವ ಜನರು ಕಣ್ಣಿನ ರೆಪ್ಪೆ ಬಡಿಯದೇ ಜಾಗರಣೆ ಮಾಡುತ್ತಿದ್ದಾರೆ.

ಭೂಮಿಯಿಂದ ಭಾರೀ ಶಬ್ದ ಕೇಳಿಸಿದ್ದು, ಭೂಮಿಯೂ ಕಂಪಿಸಿದೆ. ಮನಗೂಳಿ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ 4 ಬಾರಿ ಭೂಮಿ ಕಂಪಿಸಿದ ಅನುಭವಾಗಿದೆ. ಪದೇ ಪದೇ ಭೂಕಂಪದ ಅನುಭವವಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ತಡರಾತ್ರಿಯೂ ಮನೆ ಒಳಗೆ ಹೋಗದೇ ಮಕ್ಕಳು, ವೃದ್ಧರು, ಮಹಿಳೆಯರೊಂದಿಗೆ ಅಂಗಳದಲ್ಲಿ ಕುಳಿತಿರುವ ಮನಗೂಳಿ ಜನರು ಆತಂಕದಲ್ಲಿ ರಾತ್ರಿ ಕಳೆಯುತ್ತಿದ್ದಾರೆ‌.

Advertisement

ಗ್ರಾಮದಲ್ಲಿ ಗಂಭೀರ ದುರಂತ ಸಂಭವಿಸುವ ಮೊದಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳು ತಕ್ಷಣ ಗ್ರಾಮಕ್ಕೆ ಆಗಮಿಸಿ ಅಧ್ಯಯನ ನಡೆಸಬೇಕು. ಈ ಕುರಿತು ಸಬೂಬು ಹೇಳದೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next